Advertisement
ತಾಲೂಕಿನಲ್ಲಿ ಹಲವು ವರ್ಷಗಳ ಹಿಂದೆ ರೈತರುಬೆಳೆದ ರಾಗಿ, ಭತ್ತ, ಜೋಳ, ತೊಗರಿ, ಅವರೆ,ಹುರಳಿ, ನವಣೆ, ಸಜ್ಜೆಯಂತಹ ಬೆಳೆಗಳನ್ನು ತಮ್ಮಜಮೀನಿನಲ್ಲಿ ನೆಲಗಟ್ಟಿಗೊಳಿಸಿ ಸಗಣಿಯಿಂದಸಾರಿಸಿ ಕಣ ಸಿದ್ಧಪಡಿಸಿ, ಬಂಡೆಗಳ ಮೇಲೆಎತ್ತುಗಳಿಗೆ ಕಲ್ಲಿನ ಗುಂಡು ಕಟ್ಟಿ ಧಾನ್ಯಗಳ ಒಕ್ಕಣೆಮಾಡಲಾಗುತ್ತಿತ್ತು. ಇದರಿಂದ ಉತ್ತಮ ಆರೋಗ್ಯಭರಿತ ಧಾನ್ಯ ಮನೆಗೆ ಸಾಗಿಸುತ್ತಿದ್ದರು. ಅಂತಹ ಧಾನ್ಯಗಳ ಬಳಕೆಯಿಂದ ಮನುಷ್ಯರು ಅರೋಗ್ಯವಂತ ದೃಢಕಾಯರಾಗುತ್ತಿದ್ದರು.
Related Articles
Advertisement
ವಾಹನ ಸವಾರರಿಗೆ ಬೇಸರ: ಇಂತಹ ಧಾನ್ಯಗಳುಆರೋಗ್ಯಕ್ಕೆ ದುಷ್ಪರಿಣಾಮ ಉಂಟು ಮಾಡಬಹುದಾಗಿದೆ. ಇಷ್ಟಾದರೂ ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ನಿಲ್ಲಿಸಲಾಗುತ್ತಿಲ್ಲ. ಬದಲಿಗೆಅಪಘಾತ ಸೃಷ್ಟಿಸುವ ತಾಣಗಳಾಗಿ ಮಾರ್ಪಡುತ್ತಿವೆ.ಅದರಲ್ಲೂ ಮುಖ್ಯವಾಗಿ ಜನನಿಬಿಡ ವಾಹನಸಂಚಾರವಿರುವ ರಾ.ಹೆ.75ರ ಪದ್ಮಘಟ್ಟ ಬಳಿ ಇರುವಆರ್‌ಟಿಒ ಕಚೇರಿ ಎದುರೇ ರೈತರೊಬ್ಬರು ನೆಲಗಡೆಲೆಕಾಯಿಗಳನ್ನು ರಸ್ತೆಯಲ್ಲಿಯೇ ಹಾಕಿದ್ದರೂ ಯಾರೊಬ್ಬರೂ ಇತ್ತ ಕಡೆ ಗಮನಿಸದೇ ಇರುವುದು ವಾಹನ ಸವಾರರಿಗೆ ಬೇಸರ ಉಂಟು ಮಾಡಿತ್ತು.ಆದ್ದರಿಂದ ಆರ್ಥಿಕ ಮುಗ್ಗಟ್ಟಿನ ರೈತರು ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡುರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ಕೈಬಿಡಬೇಕಾಗಿದ್ದು ಸರ್ಕಾರವೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ.
ರೈತರು ಬೆಳೆದ ಬೆಳೆಗಳನ್ನು ಒಕ್ಕಣೆ ಮಾಡಲು ರಸ್ತೆಗಳಲ್ಲಿ ಹಾಕುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿರುವುದಲ್ಲದೇ,ಅದರಿಂದ ಸಾಕಷ್ಟು ಅಪಘಾತಗಳು ಉಂಟಾಗುತ್ತಿದೆ. ಅಲ್ಲದೆ, ಒಕ್ಕಣೆಮಾಡಿದ ಧಾನ್ಯಗಳಲ್ಲಿ ವಾಹನಗಳಿಂದ ಸುರಿದ ಪೆಟ್ರೋಲ್, ಡೀಸೆಲ್ ಹಾಗೂ ಆಯಿಲ್‌ನಿಂದ ಧಾನ್ಯ ಕಲುಷಿತವಾಗುತ್ತಿದೆ. ಇದರಿಂದ ಈಧಾನ್ಯಗಳ ಬಳಕೆಗೂ ತೊಂದರೆಯುಂಟಾಗುವುದರಿಂದ ರೈತರು ರಸ್ತೆಯಲ್ಲಿ ಧಾನ್ಯಗಳ ಒಕ್ಕಣೆ ಮಾಡುವುದನ್ನು ಕೈ ಬಿಡಬೇಕು.-ರಾಮಚಂದ್ರ, ವಾಹನ ಸವಾರ
ಗ್ರಾಮೀಣ ಭಾಗದ ವಿವಿಧ ರಸ್ತೆಗಳಲ್ಲಿರೈತರು ಒಕ್ಕಣೆ ಮಾಡುವುದರಿಂದ ಉಂಟಾಗುವ ಸಾಧಕ ಬಾಧಕಗಳ ಕುರಿತು ಆಯಾ ಗ್ರಾಪಂವ್ಯಾಪ್ತಿಯಲ್ಲಿ ಜನರಿಗೆ ಅರಿವು ಮೂಡಿಸಲು ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ಜನಪ್ರತಿನಿಧಿಗಳ ಸಹಕಾರದೊಂದಿಗೆ ರೈತರಿಗೆ ಅರಿವು ಮೂಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. – ಉಕೇಶ್‌ಕುಮಾರ್, ಸಿಇಒ, ಕೋಲಾರ ಜಿಪಂ
ರೈತರು ಬೆಳೆಯುವ ಧಾನ್ಯ ಒಕ್ಕಣೆಗಾಗಿ ರಸ್ತೆಗಳಲ್ಲಿ ಹಾಕುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುವುದಲ್ಲದೇ, ಅಪಘಾತಗಳಿಗೆ ಎಡೆ ಮಾಡಿಕೊಡುವುದರಿಂದ ಅಂತಹ ದುರ್ಘಟನೆಗಳಿಗೆ ಅವಕಾಶ ನೀಡದೇ ಕೃಷಿ ಇಲಾಖೆಯಲ್ಲಿ ದೊರೆಯುವ ಉಪಕರಣಗಳನ್ನು ಪಡೆದು ಧಾನ್ಯ ಒಕ್ಕಣೆ ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದ ವಿವಿಧ ರಸ್ತೆಗಳಲ್ಲಿರೈತರು ಒಕ್ಕಣೆ ಮಾಡುವುದರಿಂದ ಉಂಟಾಗುವ ಸಾಧಕ ಬಾಧಕಗಳ ಕುರಿತು ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಜನರಿಗೆ ಅರಿವು ಮೂಡಿಸಲು ಗ್ರಾಪಂಅಧಿಕಾರಿಗಳು ಮತ್ತು ಸಿಬ್ಬಂದಿ ಜನಪ್ರತಿನಿಧಿಗಳ ಸಹಕಾರದೊಂದಿಗೆ ರೈತರಿಗೆ ಅರಿವು ಮೂಡಿಸಲು ಕ್ರಮ ತೆಗೆದುಕೊಳ್ಳಲಾಗುವುದು.-ರವಿಕುಮಾರ್, ಸಹಾಯಕ ,ನಿರ್ದೇಶಕ, ಕೃಷಿ ಇಲಾಖೆ.
-ಎಂ.ನಾಗರಾಜಯ್ಯ