ವಾಡಿ (ಚಿತ್ತಾಪುರ): ತಾಲೂಕಿನಲ್ಲಿ ಹಿಂಗಾರು ಬಿತ್ತನೆಗೆ ರೈತರು ಮುಂದಾಗಿದ್ದು, ಬೀಜಗಳ ಕೊರತೆಯುಂಟಾಗಿ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ.
ನಾಲವಾರ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಶೇಂಗಾ ಬೀಜಕ್ಕಾಗಿ ಜಮಾಯಿಸಿದ್ದ ಸಾವಿರಾರು ಜನ ರೈತರು, ಕೃಷಿ ಕಚೇರಿಯ ಬೀಜ ವಿತರಣಾ ಕಿಟಕಿಗೆ ಮುಗಿಬಿದ್ದು ಬೀಜ ಪಡೆಯುತ್ತಿದ್ದ ಹಾಹಾಕಾರದ ದೃಶ್ಯ ಕಂಡು ಬಂತು.
ಇದನ್ನೂ ಓದಿ: ಮೂಡಿಗೆರೆ ಶಾಸಕರ ಮನೆಗೆ ಅಕ್ರಮ ಮರಳು ಸಾಗಾಟ: ಸ್ಥಳೀಯರಿಂದ ಆರೋಪ
ಒಬ್ಬರಮೇಲೊಬ್ಬರು ಬಿದ್ದು ಬೀಜ ಪಡೆಯಲು ಸೆಣಸಿಡುತ್ತಿದ್ದ ಪ್ರಸಂಗ ಅಧಿಕಾರಗಳು ಬೆಚ್ಚಿಬೀಳುವಂತಾಯಿತು. ಕೃಷಿ ಅಧಿಕಾರಿಗಳು ಸಮರ್ಪಕವಾಗಿ ಬೀಜ ವ್ಯವಸ್ಥೆ ಮಾಡದೇಯಿರುವುದು ರೈತರ ಗೋಳಾಟಕ್ಕೆ ಕಾರಣರಾಗಿದೆ. ಇದರಲ್ಲೂ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಮಡಿವಾಳಪ್ಪ ಹೇರೂರ