Advertisement
ತಾಲೂಕು ಕಸಬಾ ಹೋಬಳಿ ಎಂ.ಹೊಸಹಳ್ಳಿ ಗ್ರಾಮದ ರೈತ ವಿ.ಶಿವರಾಜ್ (40) ಎಂಬುವರ ತಂದೆ ಮೃತ ವೆಂಕಟೇಶಪ್ಪ ಬದುಕಿದ್ದಾಗ ಅವರಿಗೆ ಸೇರಿದ ಭೂಮನಹಳ್ಳಿ ಗ್ರಾಮದ ಸರ್ವೆ ನಂ.1ರಲ್ಲಿ 2.27 ಎಕರೆ ಜಮೀನನ್ನು 2012ರಲ್ಲಿದ್ದ ತಹಶೀಲ್ದಾರರು ಮತ್ತು ಅವರ ಕಚೇರಿ ಸಿಬ್ಬಂದಿ, ರಾಮಪ್ಪ ಎಂಬುವರ ಜೊತೆ ಶಾಮೀಲಾಗಿ ಅವರ ಹೆಸರಿಗೆ ಕಾನೂನು ಬಾಹಿರವಾಗಿ ಅಕ್ರಮವಾಗಿ ಖಾತೆ ಮಾಡಿದ್ದರು. ಸದರೀ ಕಾನೂನು ಬಾಹಿರ ಖಾತಾ ಮತ್ತು ಮೋಸ ವಂಚನೆ ಕುರಿತು ರೈತ ವಿ.ಶಿವರಾಜ್ ಸದರೀ ಆಸಾಮಿಗಳ ವಿರುದ್ಧ ಪಿಸಿಆರ್ 32/2012ರಂತೆ ತಹಶೀಲ್ದಾರ್ ಮತ್ತು ಇತರರ ಮೇಲೆ ಎಫ್ಐಆರ್ 282/12ರಂತೆ ಪ್ರಕರಣ ನೋಂದಣಿ ಯಾಗಿತ್ತು. ಈ ಪ್ರಕರಣದಲ್ಲಿ ತಾಲೂಕು ಕಚೇರಿಯಲ್ಲಿಕಾನೂನು ಬಾಹಿರ ಖಾತೆಯನ್ನು ಪ್ರಶ್ನಿಸಿ, ಅರ್ಜಿ ಸಲ್ಲಿಸಿಈ ಅರ್ಜಿ ಪ್ರಕ್ರಿಯೆ ಹಂತದಲ್ಲಿ ಇದ್ದು, ಖಾತೆ ಬದಲಾವಣೆ ವಿಚಾರವಾಗಿ ಕಂದಾಯ ಇಲಾಖೆಗೆ ಅಲೆದಾಡುತ್ತಿದ್ದಾರೆ.
Related Articles
Advertisement
ಈ ಕುರಿತು ನೊಂದ ರೈತ ಶಿವರಾಜ್ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಸರ್ಕಾರ, ಲೋಕಾಯುಕ್ತಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅಂತಿಮವಾಗಿ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆಮೊರೆ ಹೋಗಿ, ಖಾಸಗಿ ದೂರು ಪಿ.ಸಿ.ಆರ್. ಸಂಖ್ಯೆ 11/2022 ದಾಖಲಿಸಿದ್ದರು. ಅದೇ ದಿನ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್‌ಸಾಬ ಯಾದವಾಡ ಅವರು, ನಾಲ್ವರುಆರೋಪಿಗಳ ವಿರುದ್ಧ ಪಿ.ಸಿ.ಆರ್.ಪ್ರಕರಣ ದಾಖಲುಮಾಡಲು ಆದೇಶಿಸಿದ್ದರು. ಅದರಂತೆ ನಗರ ಠಾಣೆಯಲ್ಲಿ 27ರಂದು ಅಪರಾಧ ಸಂಖ್ಯೆ 14/2022ರಂತೆ 1ನೇ ಆರೋಪಿ ಗ್ರಾಮ ಲೆಕ್ಕಿಗ ಎನ್. ಅರವಿಂದ್, 2ನೇ ಆರೋಪಿ ಕಸಬಾ ಹೋಬಳಿ ಆರ್ .ಐ. ಸಾದತ್ ಉಲ್ಲಾ ಖಾನ್, 3ನೇ ಆರೋಪಿ ನಾಡಕಚೇರಿ ಶಿರಸ್ತೇದಾರ್ ಜಯರಾಮ್ ಮತ್ತು 4ನೇಆರೋಪಿ ಹಿಂದಿನ ತಹಶೀಲ್ದಾರ್ ಕೆ.ಎನ್.ರಾಜ ಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕೆಲ ಅಧಿಕಾರಿಗಳು ತಮ್ಮ ಹೆಸರಿನಲ್ಲಿರುವ ಜಮೀನನ್ನು ವಂಚಿಸಲು ಹಾಗೂ ಅಕ್ರಮವಾಗಿ ಲಾಭ ಪಡೆಯುವ ಉದ್ದೇಶದಿಂದ ತಾವು ಬದುಕಿದ್ದರೂ, ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಆದ್ದರಿಂದನ್ಯಾಯಾಲಯ ಮೊರೆ ಹೋಗಿದ್ದು, ನ್ಯಾಯಾಲಯ ಆದೇಶದಂತೆ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. -ಶಿವರಾಜ್, ರೈತ, ಎಂ.ಹೊಸಹಳ್ಳಿ
ಎಂ.ಹೊಸಹಳ್ಳಿ ಗ್ರಾಮದ ರೈತ ಶಿವರಾಜ್ ಬದುಕಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಮರಣ ಪ್ರಮಾಣ ಪತ್ರ ವಿತರಣೆ ಮಾಡಿರುವ ಸಂಬಂಧಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯ ಆದೇಶದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದು, ತನಿಖೆ ಮಾಡಲಾಗುವುದು. -ಸೀತಪ್ಪ, ಪಿಎಸ್‌ಐ, ನಗರ ಠಾಣೆ, ಮುಳಬಾಗಿಲು
ಕೆಲ ಅಧಿಕಾರಿಗಳು ತಮ್ಮ ಹೆಸರಿನಲ್ಲಿರುವ ಜಮೀನನ್ನು ವಂಚಿಸಲು ಹಾಗೂ ಅಕ್ರಮವಾಗಿ ಲಾಭ ಪಡೆಯುವ ಉದ್ದೇಶದಿಂದ ತಾವು ಬದುಕಿದ್ದರೂ, ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಆದ್ದರಿಂದ ನ್ಯಾಯಾಲಯ ಮೊರೆ ಹೋಗಿದ್ದು, ನ್ಯಾಯಾಲಯ ಆದೇಶದಂತೆ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. -ಶಿವರಾಜ್, ರೈತ, ಎಂ.ಹೊಸಹಳ್ಳಿ
-ಎಂ.ನಾಗರಾಜಯ್ಯ