ಮಾಗಡಿ: 25 ಎಕರೆ ಜಮೀನಿನಲ್ಲಿ 200 ಕ್ವಿಂಟಲ್ ರಾಗಿ ಬೆಳೆದಿದ್ದೇವೆ ಎಂದು ಗಂಟಗಯ್ಯನಪಾಳ್ಯ ಪ್ರಗತಿ ಪರ ರೈತ ರಮೇಶ್ ತಿಳಿಸಿದರು.
ತಾಲೂಕಿನ ತಿಪ್ಪಸಂದ್ರ ಹೋಬಳಿ ಗಂಟಗಯ್ಯನಪಾಳ್ಯ ಗ್ರಾಮದ ಪ್ರಗತಿಪರ ರೈತ ನಂಜೇಗೌಡ ಅವರ ಪುತ್ರ ರಮೇಶ್ ರಾಗಿಯ ರಾಶಿ ಪೂಜೆನೆರವೇರಿಸಿ ಮಾತನಾಡಿ, ಕಳೆದ 6 ತಿಂಗಳಿನಿಂದ ಕಷ್ಟಪಟ್ಟು ರಾಗಿ ಬೆಳೆದು ಒಕ್ಕಣೆ ಕೆಲಸ ಮುಗಿದಿದ್ದು,ರಾಗಿಯ ರಾಶಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಸಾಂಪ್ರದಾಯಿಕವಾಗಿ ಪೂಜಿಸಿ ಹಾಲುತುಪ್ಪಎರೆದು ಮನೆಗೆ ರಾಶಿ ತುಂಬಿಸಿಕೊಳ್ಳುವ ನಮ್ಮೆಲ್ಲರಬದುಕಿನ ಶುಭದಿನ ಆಗಿದೆ. 25 ಎಕರೆ ಜಮೀನಿನಲ್ಲಿಕನಿಷ್ಠ 300 ಕ್ವಿಂಟಲ್ ರಾಗಿ ಬರಬೇಕಿತ್ತು. ಅಕಾಲಿಕಮಳೆಯಿಂದ 100 ಕ್ವಿಂಟಲ್ ರಾಗಿ ಈ ವರ್ಷ ನಷ್ಟವಾಗಿದೆ ಎಂದರು.
ನಷ್ಟಗಳಿಗೆ ಹೆದರುವುದಿಲ್ಲ: ರೈತರು ದೇಶದ ಅನ್ನದಾತರು. ನಷ್ಟಗಳಿಗೆ ಹೆದರುವುದಿಲ್ಲ, ಆದರೆ, ಸರ್ಕಾರ ರೈತರಿಗೆ ಸಿಗಬೇಕಾದ ನ್ಯಾಯಯುತ ಸವಲತ್ತು ಸಮರ್ಪಕವಾಗಿ ನೀಡದ ಕಾರಣ ರೈತರುನಷ್ಟ ಅನುಭವಿಸುವುದರ ಜತೆಗೆ ಅನ್ಯಾಯಕ್ಕೆ ಒಳಗಾಗುತ್ತಿದ್ದೇವೆ. ಸರ್ಕಾರ ಬೆಂಬಲ ಬೆಲೆಗೆ ರಾಗಿಖರೀದಿ ಮಾಡಲಾಗುತ್ತಿದೆ. ರಾಗಿ ಖರೀದಿ ಏಕಾಏಕಿ ಜನವರಿಯಲ್ಲಿಯೇ ನಿಲ್ಲಿಸಿರುವುದರಿಂದ ಈ ಭಾಗದ ರೈತರು ರಾಗಿ ಬೆಂಬಲ ಬೆಲೆಗೆ ಮಾರಾಟ ಮಾಡಲಾಗುತ್ತಿಲ್ಲ ಎಂದರು.
ತಾರತಮ್ಯ ಮಾಡುತ್ತಿದ್ದಾರೆ: ಈ ಭಾಗದ ಬಹುತೇಕ ರೈತರು ಫೆಬ್ರವರಿ, ಮಾರ್ಚ್‌ನಲ್ಲಿ ರಾಗಿ ಒಕ್ಕಣೆಮಾಡುವುದು. ಬೆಂಬಲ ಬೆಲೆ ನಿಲ್ಲಿಸಿರುವುದರಿಂದ ಈಗ ಒಕ್ಕಣೆ ಆಗಿರುವ ರಾಗಿಯನ್ನು ಎಲ್ಲಿಗೆ ಕೊಂಡೊಯ್ಯುದ ಮಾರಾಟ ಮಾಡುವುದುಎಂದು ಸರ್ಕಾರ ನಿಯಮದ ವಿರುದ್ಧ ಬೇಸರ ವ್ಯಕ್ತ ಪಡಿಸಿದರು.
ರಾಗಿಗೆ ಬೆಂಬಲ ಬೆಲೆ ಕೊಡಬೇಕಾದರೆ ಸಣ್ಣ ಮತ್ತು ದೊಡ್ಡ ರೈತರು ಎಂದು ತಾರತಮ್ಯ ಮಾಡುತ್ತಿದ್ದಾರೆ. ಸಣ್ಣ ರೈತರು ರಾಗಿಯನ್ನುವರ್ಷದ ಜೀವನಕ್ಕೆ ಇಟ್ಟುಕೊಳ್ಳುತ್ತಾರೆ. ಮಾರಾಟ ಮಾಡುವವರು ದೊಡ್ಡ ರೈತರು. ಸಣ್ಣ ರೈತರಿಂದಲೂಬೆಂಬಲ ಬೆಲೆಗೆ ಖರೀದಿಸುವ ಈ ವಿಚಾರದಲ್ಲಿಅಭ್ಯಂತರವಿಲ್ಲ. ಆದರೆ, ನಕಲಿ ರೈತರು ಲಾರಿಗಳಲ್ಲಿಎಲ್ಲಿಂದಲೋ ರಾಗಿ ತಂದು ಸರ್ಕಾರಕ್ಕೆ ಬೆಂಬಲ ಬೆಲೆಗೆ ಖರೀದಿಸುವ ದಂಧೆಗೆ ಅಧಿಕಾರಿಗಳುತಿಲಾಂಜಲಿ ಹಾಡಬೇಕು ಎಂದರು.
ಸರ್ಕಾರ ರೈತರ ನೆರವಿಗೆ ನಿಲ್ಲಲಿ: ರೈತರ ಹೆಸರಿನಲ್ಲಿನಡೆಯುವ ಹಗಲು ದರೋಡೆ ನಿಲ್ಲಬೇಕು. ಈ ಮೂಲಕಸರ್ಕಾರ ರೈತರ ನೆರವಿಗೆ ನಿಲ್ಲಬೇಕು. ರಾಗಿಖರೀದಿಯನ್ನು ಏಪ್ರಿಲ್ ತಿಂಗಳವರೆಗೂ ವಿಸ್ತರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.
ತಾಪಂಮಾಜಿ ಅಧ್ಯಕ್ಷೆ ಪೈಜ್ ಉನ್ನಿಷಾ ಅಮೀರ್ ಪಾಷಾ, ರೈತ ಮುಖಂಡ ನಿವೃತ್ತ ಶಿಕ್ಷಕ ನಂಜೇಗೌಡ, ಹೇಮಲತಾರಮೇಶ್, ಮಾಯ ಸಂದ್ರ, ಆಂಜನಪ್ಪ, ಮುದುಕದಹಳ್ಳಿ ಕೌಷರ್ ಪಾಷಾ, ರವಿಕುಮಾರ್, ಹುಚ್ಚಪ್ಪ ಅರುಣ್‌ಕುಮಾರ್, ಧನರಾಜ್, ವೆಂಕಟ ರಾಮಯ್ಯ ಜಗ ದೀಶ್, ವಿರುಪಾಪುರದ ಚಿನ್ನಮ್ಮಜ್ಜಿ ಇತರರು ಇದ್ದರು.