Advertisement

5 ಎಕರೆಯಲ್ಲಿ 180 ಟನ್‌ ಎಲೆಕೋಸು ಬೆಳೆದ ರೈತ

03:45 PM Aug 01, 2019 | Naveen |

ಆರ್‌.ಪುರುಷೋತ್ತಮ ರೆಡ್ಡಿ
ಬೇತಮಂಗಲ:
ಕಾಲಕಾಲಕ್ಕೆ ಬೆಳೆ ಬೆಳೆದು, ಉತ್ತಮ ಇಳುವರಿ, ಲಾಭಗಳಿಸುವ ಮೂಲಕ ಪ್ರಗತಿಪರ ರೈತ ನಾಗರಾಜರೆಡ್ಡಿ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

Advertisement

ಸುಂದರಪಾಳ್ಯ ಗ್ರಾಪಂ ವ್ಯಾಪ್ತಿಯ ತಲ್ಲ ಪಲ್ಲಿ ನಾಗರಾಜರೆಡ್ಡಿ, ಚಿಕ್ಕಂದಿನಿಂದಲೂ ಕೃಷಿ ನಂಬಿ ಜೀವನ ನಡೆಸುತ್ತಿದ್ದಾರೆ. ಗ್ರಾಮವಲ್ಲದೆ, ನಾಲ್ಕು ಗ್ರಾಪಂಗಳಲ್ಲಿಯೇ ಹೆಚ್ಚು ಕೃಷಿ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ. ಎಷ್ಟೋ ರೈತರು ಮಳೆ, ಬೆಳೆಗಳಿಲ್ಲದೆ ನಗರ ಪ್ರದೇಶಗಳಿಗೆ ಗುಳೆ ಹೊರಟಿದ್ದಾರೆ. ಆದರೆ, ನಾಗರಾಜರೆಡ್ಡಿ ಮಾತ್ರ ಬೇಡಿಕೆಗೆ ತಕ್ಕಂತೆ ಟೆಮೊಟೋ, ಕೊತ್ತಂಬರಿ, ಆಲೂಗಡ್ಡೆ, ಚೆಂಡುಹೂ, ಎಲೆಕೋಸು, ಬೀನ್ಸ್‌ ಹೀಗೆ ತರಕಾರಿ ಬೆಳೆದು ಉತ್ತಮ ಲಾಭ ಪಡೆದಿದ್ದಾರೆ.

18 ಲಕ್ಷ ರೂ. ಆದಾಯ: 14 ಎಕರೆಯಲ್ಲಿ ಒಂದು ಅಥವಾ 2 ಬೆಳೆ ಬೆಳೆದು ಸೂಕ್ತ ಸಮಯ ನೋಡಿ ಮಾರುಕಟ್ಟೆಗೆ ಪೂರೈಸಿ ಕೈ ತುಂಬ ಹಣ ಗಳಿಸುತ್ತಿದ್ದಾರೆ. ಪ್ರÓ‌ಕ್ತ ಸಾಲಿನಲ್ಲಿ 5 ಎಕರೆಯಲ್ಲಿ ಎಲೆಕೋಸು ಬೆಳೆದಿದ್ದು, 180 ಟನ್‌ ಎಲೆಕೋಸು ಇಳುವರಿ, 18 ಲಕ್ಷ ರೂ. ಆದಾಯದ ನಿರೀಕ್ಷೆಯಲ್ಲಿದ್ದಾರೆ. ಎಲೆ ಕೋಸು ಗಿಡಗಳು, ಔಷಧಿ, ಕೂಲಿ, ಗೊಬ್ಬರ ಸೇರಿ 3 ಲಕ್ಷ ರೂ. ಖರ್ಚು ಮಾಡಿದ್ದಾರೆ.

ದಶಕಗಳಿಂದಲೂ ಈ ರೈತ ಕೃಷಿಯನ್ನೇ ಕಸುಬು ಮಾಡಿಕೊಂಡಿದ್ದು, ಯಾವ ತಿಂಗಳಿನಲ್ಲಿ ಯಾವ ಬೆಳೆ ಬೆಳೆಯಬೇಕು, ರೈತರು ಯಾವ ಬೆಳೆಗಳನ್ನು ಹೆಚ್ಚು ಬೆಳೆದಿದ್ದಾರೆ. ಲಾಭ ನಷ್ಟಗಳ ಬಗ್ಗೆ ಅವಲೋಕಿಸಿ, ಯಾವ ಬೆಳೆ ಬೆಳೆಯಬೇಕೆಂಬ ಲೆಕ್ಕಾಚಾರವಿರುತ್ತೋ ಅದನ್ನೇ ಹುಡುಕಿ ನರ್ಸರಿಗಳಿಂದ ತಂದು ನಾಟಿ ಮಾಡಿ, ಬಂಪರ್‌ ಬೆಲೆ ಪಡೆದು ಕೊಳ್ಳುತ್ತಾರೆ.

ಕೈ ಕೆಸರಾದರೆ ಬಾಯಿ ಮೊಸರು: ಬೆಳೆ ಬೆಳೆಯುವಾಗ ಸರಿಯಾದ ಸಮಯಕ್ಕೆ ಔಷಧಿ ಸಿಂಪಡಣೆ ಮಾಡುವುದು, ಕಸ ತೆಗೆಯು ವುದು, ನೀರು ಹರಿಸುವುದು, ಕುರಿ, ಕೋಳಿ, ಹಸುಗಳ ಗೊಬ್ಬರ ಬಳಸುವುದು, ಬಿತ್ತನೆಗೂ ಮುಂಚೆ ಎರಡು ಮೂರು ಬಾರಿ ಉಳುಮೆ ಮಾಡಿ ಭೂಮಿ ಹದ ಮಾಡಿಕೊಳ್ಳುವುದು ಸೇರಿ ಎಲ್ಲಾ ರೀತಿಯಲ್ಲಿ ಕೃಷಿಗೆ ಸಕಲ ಸಿದ್ಧತೆ ಮಾಡಿಕೊಂಡು, ಗುಣಮಟ್ಟದ ಬೀಜ ಬಿತ್ತನೆ ಮಾಡಿದರೆ ಮಾತ್ರ ಉತ್ತಮ ಲಾಭ ಪಡೆಯಲು ಸಾಧ್ಯ ಎಂದು ಪ್ರಗತಿಪರ ರೈತ ನಾಗರಾಜ ರೆಡ್ಡಿ ಹೇಳುತ್ತಾರೆ.

Advertisement

ಸದ್ಯ 5 ಕೊಳವೆ ಬಾವಿ ಕೊರೆಸಲಾಗಿದ್ದು, ಮೂರರಲ್ಲಿ ಉತ್ತಮ ನೀರು ಬರುತ್ತಿದೆ. ಇನ್ನೆರಡು ಬತ್ತಿಹೋಗಿವೆ. 14 ಎಕರೆಯಲ್ಲಿ 5 ಎಕರೆಯಲ್ಲಿ ಎಲೆ ಕೋಸು, 4 ಎಕರೆ ಚೆಂಡು ಹೂವು, ಉಳಿದ ಜಮೀನು ತರಕಾರಿಗಾಗಿ ಹದ ಮಾಡಿ ಇಟ್ಟುಕೊಂಡಿದ್ದಾರೆ.

ಮಾರುಕಟ್ಟೆ ಬೆಲೆ ನೋಡಿಕೊಂಡು ರೈತರು ತರಕಾರಿ ಬೆಳೆಯಬೇಕು, ಕ್ರಿಮಿ ಕೀಟಗಳಿಂದ ಕಾಪಾಡಿಕೊಂಡು ಗೊಬ್ಬರ, ಔಷಧಿ ಸಮಯಕ್ಕೆ ಸಿಂಪಡಿಸಿದ್ರೆ ಉತ್ತಮ ಇಳುವರಿ ಪಡೆಯಬಹುದು. ಲಾಭವೂ ಸಿಗುತ್ತದೆ.
●ನಾಗರಾಜ ರೆಡ್ಡಿ,
ಪ್ರಗತಿಪರ ರೈತ.

Advertisement

Udayavani is now on Telegram. Click here to join our channel and stay updated with the latest news.

Next