Advertisement
ಕಳೆದ 30 ವರ್ಷಗಳಲ್ಲಿ ಭಾರತದಲ್ಲಿ 59 ಸಾವಿರಕ್ಕೂ ಹೆಚ್ಚು ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ ಚಟುವಟಿಕೆಗಳ ಕಾಲದಲ್ಲಿ ತಾಪಮಾನ ಹೆಚ್ಚಳ ಮತ್ತು ಮಳೆಯ ಕೊರತೆಯಿಂದ ರೈತರು ಹತಾಶೆಗೊಳಗಾಗುತ್ತಾರೆ. ನಿರೀಕ್ಷೆಯೆಲ್ಲ ಹುಸಿಯಾದಾಗ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರ ಅಧ್ಯಯನ ವರದಿ ಹೇಳಿದೆ. ಜಾಗತಿಕ ತಾಪಮಾನ ಹೆಚ್ಚಿದಂತೆ ರೈತರ ಆತ್ಮಹತ್ಯೆ ಪ್ರಮಾಣವೂ ಹೆಚ್ಚಳವಾಗಲಿದೆ ಎಂಬ ಎಚ್ಚರಿಕೆಯನ್ನೂ ವರದಿ ನೀಡಿದೆ. ಜತೆಗೆ, ಸರಕಾರವು ಸೂಕ್ತ ನೀತಿಗಳನ್ನು ತಂದರೆ ಅನ್ನದಾತರ ಜೀವವನ್ನು ಉಳಿಸಲು ಸಾಧ್ಯ ಎಂದೂ ವರದಿ ಹೇಳಿದೆ. 2050ರ ವೇಳೆಗೆ ತಾಪಮಾನ ಇನ್ನೂ 3 ಡಿ.ಸೆ.ನಷ್ಟು ಹೆಚ್ಚಾಗಲಿದೆ ಎಂಬ ಆತಂಕಕಾರಿ ಭವಿಷ್ಯವನ್ನೂ ಸಂಶೋಧಕರು ನುಡಿದಿದ್ದಾರೆ. ಜಗತ್ತಿನ ಆತ್ಮಹತ್ಯೆಗಳಲ್ಲಿ ಶೇ.75ರಷ್ಟು ನಡೆಯುತ್ತಿರುವುದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ. ಈ ಪೈಕಿ ಐದನೇ ಒಂದರಷ್ಟು ಪ್ರಕರಣಗಳು ಭಾರತದಲ್ಲೇ ಘಟಿಸುತ್ತಿವೆ. Advertisement
ಅನ್ನದಾತನ ಪರಿ’ತಾಪ’: ರೈತರ ಆತ್ಮಹತ್ಯೆಗೆ ತಾಪವೇ ಕಾರಣ
07:50 AM Aug 02, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.