ಪಾವಗಡ: ತಾಲೂಕಿನ ದೊಮ್ಮತಮರಿ ಬಳಿಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೆ ಹಾವು ಕಡಿದು ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
Advertisement
ದೊಮ್ಮತಮರಿ ಗ್ರಾಮದ ವಸಂತ್ (32) ಮೃತರು. ಹಾವು ಕಚ್ಚಿದ ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ, 1 ವರ್ಷದ ಪುತ್ರ ಇದ್ದಾರೆ.