Advertisement

ಈತ ಮಸಾಲೆ ರುಬ್ಬುವುದು,ಮೊಬೈಲ್ ಚಾರ್ಜ್ ಇಡುವುದು ಮೆಸ್ಕಾಂ ಆಫೀಸಲ್ಲೇ! ಏನಿದು ಪ್ರತಿಭಟನೆ

04:45 PM May 30, 2022 | Team Udayavani |

ಹೊಳೆಹೊನ್ನೂರು: ಮನೆಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗದ ಹಿನ್ನಲೆಯಲ್ಲಿ ರೈತನೋರ್ವ ಮೆಸ್ಕಾಂಗೆ ಕಚೇರಿಗೆ ಮಿಕ್ಸಿ ತೆಗೆದುಕೊಂಡು ಹೋಗಿ ಮಸಾಲೆ ರುಬ್ಬುವುದು ಹಾಗೂ ಮೊಬೈಲ್ ಚಾರ್ಜ್ ಇಟ್ಟು ಕಳೆದ 8 ತಿಂಗಳಿನಿಂದ ವಿನೂತನ ಪ್ರತಿಭಟನೆ ಮಾಡಿಕೊಂಡು ಬರುತ್ತಿದ್ದಾರೆ.

Advertisement

ಸಮೀಪದ ಮಂಗೋಟೆ ಗ್ರಾಮದ ರೈತ ಹನುಮಂತ ಕಳೆದ ವರ್ಷ ಸ್ವಂತ ಹಣದಲ್ಲಿ ಟಿ.ಸಿ. ಅಳವಡಿಸಿಕೊಂಡು, ಮನೆಗೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದ್ದು, ಮೆಸ್ಕಾಂ ಅಧಿಕಾರಿಗಳು ಮೀಟರ್ ಹಾಗೂ ವಿದ್ಯುತ್ ಕಂಬವನ್ನು ಹಾಕಿದ್ದು ಆದರೆ, ಪ್ರತಿನಿತ್ಯ ಕೇವಲ 2 ತಾಸು ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಒಂದೆರೆಡು ತಿಂಗಳು ಅಕ್ಕ ಪಕ್ಕದ ಮನೆಗಳಲ್ಲಿ ಮಸಾಲೆ ರುಬ್ಬಿಕೊಂಡು ,ಮೊಬೈಲ್ ಚಾರ್ಜ್ ಮಾಡಿಕೊಂಡು ರೋಸಿ ಹೋದ ಹನುಮಂತ ಮೆಸ್ಕಾಂ ಇಂಜಿನಿಯರ್‌ಗೆ ತರಾಟೆಗೆ ತೆಗೆದು ಕೊಂಡಾಗ ಮಾತಿನ ಚಕಮಕಿಯಲ್ಲಿ ಅಧಿಕಾರಿ ಬಾಯ್ತಪ್ಪಿ ಮನೆಯಲ್ಲಿ ಕರೆಂಟ್ ಇಲ್ಲ ಎಂದರೆ ಕೆಇಬಿಗೆ  ತಂದು ಮಸಾಲೆ ರುಬ್ಬಿಕೊಂಡು ಹೋಗ್ತೀಯಾ ಎಂದಿದ್ದಾರೆ. ಅಂದಿನಿಂದ ಹನುಮಂತ ಕೆಇಬಿಗೆ ಬಂದು ಮಿಕ್ಸಿ ತಂದು ಮಸಾಲೆ ರುಬ್ಬಿಕೊಂಡು ಹೋಗಲು ಶುರು ಮಾಡಿದ್ದಾನೆ. ಅಲ್ಲಿಂದ ಇಲ್ಲಿಯವರೆಗೆ ಹನುಮಂತನ ವಿದ್ಯುತ್ ಸಮಸ್ಯೆ ಸರಿಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

ಹನುಮಂತ ಮಂಗೋಟೆಯಲ್ಲಿ ನಿರ್ಮಿಸಿರುವ ಮನೆಗೆ ಸಮಪರ್ಕ ವಿದ್ಯುತ್ ವಿತರಣೆಗೆ ಆಗ್ರಹಿಸಿ ಮೆಸ್ಕಾಂ ಅಧಿಕಾರಿಗಳು, ಶಾಸಕರು, ಸಂಸದರನ್ನು ಭೇಟಿ ಮಾಡಿ ಹತ್ತಾರು ಬಾರಿ ಮನವಿ ಮಾಡಿದರು ಯಾರೊಬ್ಬರು ಸ್ವಂದಿಸಿದ ಕಾರಣ ಹನುಮಂತ ಪ್ರತಿನಿತ್ಯ ಮಂಗೋಟೆಯಿಂದ ಮಲ್ಲಾಪುರದ ವಿತರಣಾ ಕೇಂದ್ರಕ್ಕೆ ಬಂದು ಮನೆಗೆ ಬೇಕಾದ ಮಸಾಲೆಯನ್ನು ರುಬ್ಬಿಕೊಂಡು ಮನೆಯಲ್ಲಿರುವ 4-5 ಮೊಬೈಲ್‌ಗಳನ್ನು ಚಾರ್ಜ್ ಗೆ ಹಾಕಿ ಬ್ಯಾಟರಿ ಪುಲ್ ಮಾಡಿಕೊಂಡು ಹೋಗುತ್ತಿದ್ದಾನೆ. ವ್ಯಕ್ತಿಯೊಬ್ಬ ಕೆಇಬಿ ವಿತರಣಾ ಕೇಂದ್ರಕ್ಕೆ ಬಂದು ಮಸಾಲೆ ರುಬ್ಬಿಕೊಂಡು ಹೋಗುತ್ತಿದರೂ ಯಾವೊಬ್ಬ ಸಿಬ್ಬಂದಿಯೂ ಹನುಮಂತನನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಮೇಲಾಧಿಕಾರಿಗಳಿಗೆ ಯಾವುದೇ ದೂರನ್ನು ನೀಡಿಲ್ಲ.

ಮನೆಯಲ್ಲಿ ಎಂಎಸ್ಸಿ  ಓದುತ್ತಿರುವ ವಿದ್ಯಾರ್ಥಿಯಿದ್ದು, ವಿದ್ಯುತ್ ಸಮಸ್ಯೆಯಿಂದಾಗಿ ಆನ್ ಲೈನ್ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಅಲ್ಲದೇ ರಾತ್ರಿ ವೇಳೆಯಲ್ಲಿ ವಿದ್ಯುತ್ ಇಲ್ಲದೇ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗಿದೆ. ಇದನ್ನು ಆದಷ್ಟು ಬೇಗ ನಿವಾರಿಸಿ ನಮಗೆ ಸಮಪರ್ಕ ವಿದ್ಯುತ್ ಪೂರೈಸಬೇಕಾಗಿ ಮನವಿ ಮಾರಿಗುಡಿ ಹನುಮಂತ, ಮಂಗೋಟೆ.

Advertisement

Udayavani is now on Telegram. Click here to join our channel and stay updated with the latest news.

Next