Advertisement

ಪ್ರತಿಭಟನೆ ನಿರತ ರೈತರು ಭಯೋತ್ಪಾದಕರಲ್ಲ

04:57 PM Feb 06, 2021 | Team Udayavani |

ಮಾಗಡಿ: ರೈತ ವಿರೋಧಿ ಕಾಯ್ದೆ ತಿದ್ದುಪಡಿ ವಾಪಸ್ಸಿಗೆ ಹೋರಾಟ ನಡೆಸುತ್ತಿರುವವರು ಅಪ್ಪಟ ರೈತರೇ ಹೊರತು, ಭಯೋತ್ಪಾದಕರಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

Advertisement

ಪಟ್ಟಣದ ಕಲ್ಯಾಗೇಟ್‌ ವೃತ್ತದಲ್ಲಿ ತಾಲೂಕು ರೈತಸಂಘ ಮತ್ತು ಹಸಿರು ಸೇನೆಯಿಂದ ವಿಶ್ವ ರೈತರ ದಿನಾಚರಣೆ ಪ್ರಯುಕ್ತ  ಪ್ರಗತಿಪರ ರೈತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ರೈತರ ಚಳವಳಿ ಹತ್ತಿಕ್ಕಲು ರಸ್ತೆಗೆ ಕಾಂಕ್ರೀಟ್‌ ಹಾಕಿ ಕಬ್ಬಿಣ್ಣದ ಸರಳು ಹಾಕಿದ್ದಾರೆ. ದೇಶದ ಅಧಿಪತಿಗಳ ಕೃತ್ಯದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ದೇಶದ ಐಎಎಸ್‌, ಐಪಿಎಸ್‌ ಅಧಿಕಾರಿಗಳು ರೈತರ ಮಕ್ಕಳು ಎಂಬುದನ್ನು ಮರೆಯಬಾರದು. ರೈತ ಪರವಾಗಿ ಅಧಿಕಾರಿಗಳು ನಿಲ್ಲಬೇಕೇ ಹೊರತು, ರಾಜಕಾರಿಣಿಗಳ ಗುಲಾಮರಾಗಬಾರದು. ಸಿನಿಮಾ ನಟರು, ಕ್ರೀಡಾಪಟುಗಳು, ಶಿಕ್ಷಣ ತಜ್ಞರು ರೈತರ ಹೋರಾಟ ಬೆಂಬಲಿಸಿದ್ದಾರೆ. ರೈತ ವಿರೋಧಿ ಕಾಯ್ದೆ ವಾಪಸ್ಸಿಗೆ ಒತ್ತಾಯಿಸಿದ್ದಾರೆ. ಆದರೂ, ಕೇಂದ್ರ ರೈತರ ಧಮನಕಾರಿ ಕೆಲಸಕ್ಕೆ ನಿಂತಿದೆ ಎಂದು ದೂರಿದರು.

ಗಣರಾಜ್ಯೋತ್ಸವದಂದು ಬಾರಿ ರಕ್ಷಣಾ ಪಡೆ ಹೊಂದಿದ್ದರೂ, ನಾಲ್ಕು ದ್ವಾರ ದಾಟಿ ಕೆಂಪುಕೋಟೆ ಮೇಲೆ ಬೇರೆ ಧ್ವಜ ಹಾರಿಸಲು ಹೇಗೆ ಸಾಧ್ಯ. ಧ್ವಜ ಹಾರಿಸಿದವರನ್ನು ಹುಡುಕಿಕೊಟ್ಟರೆ ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದು, ಇದೆಲ್ಲ ಸರ್ಕಾರದ ಕುತಂತ್ರ. ಮಸೂದೆಯ ಬಿಲ್‌ ವಾಪಸ್‌ ಮಾಡುವಾಗ ಒಮ್ಮೆಯೂ ರೈತರೊಂದಿಗೆ ಚರ್ಚಿಸಿಲ್ಲ ಎಂದು ಬೇಸರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ರೈತರ ಹೋರಾಟದಲ್ಲಿ ಕಲ್ಲು ತೂರಿದವರು ಆರ್‌ಎಸ್‌ ಎಸ್‌ ಮತ್ತು ಬಿಜೆಪಿ ಗೂಂಡಾಗಳು. ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಸರ್ಕಾರಗಳು ಜನರನ್ನು ಎತ್ತಿಕಟ್ಟುತ್ತಿವೆ. ರೈತರ ಜೀವನಕ್ಕೆ ಕಂಟಕವಾಗಿರುವ ಕಾಯ್ದೆ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

Advertisement

ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಮಾತನಾಡಿ, ಸರ್ಕಾರ ರೈತರನ್ನು ಮಿಶ್ರ ಬೆಳೆ ಬೆಳೆಯಿರಿ ಎಂದು   ಪ್ರೋತ್ಸಾಹಿಸುತ್ತದೆ. ಮಿಶ್ರ ಬೆಳೆ ಬೆಳೆದರೆ ಇದ್ದರೆ ರಾಗಿ ಖರೀದಿಸಲ್ಲ ಎನ್ನುತ್ತಾರೆ. ಈ ಗೊಂದಲ ನಿವಾರಣೆಯಾಗಬೇಕು. ತೊಗರಿ, ಅವರೆ, ತೆಂಗು, ಮಾವಿನ ತೋಟದ ನಡುವೆ ರಾಗಿ ಬೆಳೆದಿದ್ದರೆ ಪಹಣಿಯಲ್ಲಿ ಏಕೆ ರಾಗಿ ಬೆಳೆ ನಮೂದಿಸುವುದಿಲ್ಲ. ಮಾವು ಎಂದು ನಮೂದಿಸಿ ರೈತರನ್ನು ದಿಕ್ಕು ತಪ್ಪಿಸಿರಾಗಿ ಖರೀದಿ ವೇಳೆ ಗೊಂದಲ ಸೃಷ್ಟಿಸುತ್ತಿದೆ ಎಂದರು.

ಇದನ್ನೂ ಓದಿ :ಸಾಗರಕ್ಕೆ ಬುದ್ಧಿ ಕಲಿಸಿದ ಗುಬ್ಬಿ

ರಾಜ್ಯ ಸಂಘದ ಉಪಾಧ್ಯಕ್ಷ ಎಂ.ರಾಮು, ಪುಟ್ಟಸ್ವಾಮಯ್ಯ, ರಾಮೇಗೌಡ, ಚೆನ್ನರಾಯಪ್ಪ, ಲಂಚಮುಕ್ತ ನಿರ್ಮಾಣ ವೇದಿಕೆ  ಜಿಲ್ಲಾಧ್ಯಕ್ಷ ಅರುಣ್‌ ಕುಮಾರ್‌, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಮಧುಗೌಡ, ಕಾರ್ಯದರ್ಶಿ ಮಂಜುನಾಥ್‌, ಕವಿತಾ, ಲಕ್ಷ್ಮಮ್ಮ ಡಿ.ಜಿ.ಗಂಗಾಧರಯ್ಯ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next