Advertisement
ಕೋವಿಡ್ 2ನೇ ಅಲೆ ಹಿನ್ನೆಲೆ ಸರ್ಕಾರ ವಿಧಿಸಿದ ಕರ್ಫ್ಯೂನಿಂದಾಗಿ ಜಿಲ್ಲೆಯ ಎಲ್ಲ ಎಪಿಎಂಸಿ ಹಾಗೂ ತರಕಾರಿ ಮಾರುಕಟ್ಟೆಗಳು ಬೆಳಗ್ಗೆ 6ರಿಂದ 10ರವರೆಗೆಮಾತ್ರ ವ್ಯಾಪಾರ ವಹಿವಾಟು ನಡೆಸಲುಅವಕಾಶ ನೀಡಲಾಗಿದೆ. ಈ ನಾಲ್ಕು ತಾಸು ಅವಧಿಯಲ್ಲಿ ರೈತ ತಾನು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು 8 ಗಂಟೆ ಯೊಳಗೆ ಮಾರುಕಟ್ಟೆಗೆ ತರಬೇಕಿದೆ.
Related Articles
Advertisement
ಜಿಲ್ಲೆಯ ಎಲ್ಲಾ ತಾಲೂಕು ಎಪಿಎಂಸಿ ಹಾಗೂತರಕಾರಿ ಮರುಕಟ್ಟೆ ಸೇರಿದಂತೆ ನಗರದ ಎಪಿಎಂಸಿಯಲ್ಲಿ ನಿತ್ಯ 2 ಸಾವಿರಕ್ಕೂ ಹೆಚ್ಚು ಟನ್ ತರಕಾರಿ ವಹಿವಾಟು ನಡೆಯುತ್ತಿತ್ತು. ಆದರೆ ಜನತಾ ಕರ್ಫ್ಯೂನಿಂದ ತರಕಾರಿ ಮಾರಾಟ, ಸಾಗಟಕ್ಕೆ ಕೇವಲ 4 ಗಂಟೆಸಮಯ ನೀಡಿರುವುದರಿಂದ 600ರಿಂದ 700 ಟನ್‌ನಷ್ಟು ಮಾತ್ರ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದರಿಂದ ತರಕಾರಿ ಮತ್ತು ಹಣ್ಣು ಬೆಳೆಯುವ ರೈತರಿಗೆಅನ್ಯಾಯವಾಗಿದ್ದು, ಸರ್ಕಾರ ಕೂಡಲೇ ನಂದಿನಿಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿರುವಂತೆ ಕೃಷಿಉತ್ಪನ್ನಗಳ ಮಾರಾಟಕ್ಕೂ ಅವಕಾಶ ನಿಡುವಂತೆ ರೈತರು ಒತ್ತಾಯಿಸಿದ್ದಾರೆ.
ಕೃಷಿ ಉತ್ಪನ್ನಗಳ ಮಾರಾಟ ಅವಧಿ ಹೆಚ್ಚಿಸಿ: ಕಳೆದ ವರ್ಷದ ಲಾಕ್‌ಡೌನ್‌ನಿಂದಾಗಿ ಈಗಾಗಲೇ ಸಾಕಷ್ಟುರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಇತ್ತೀಚೆಗೆ ಚೇತರಿಸಿಕೊಳ್ಳುವ ಹಂತಕ್ಕೆ ಬಂದಿರುವಾಗಲೇ 2ನೇ ಅಲೆಯ ಆರ್ಭಟಕ್ಕೆ ರೈತರು ತುತ್ತಾಗಿದ್ದಾರೆ. ಪರಿಣಾಮ ತರಕಾರಿ, ಹೂ-ಹಣ್ಣು ಬೆಳೆಯುವ ರೈತರು ಸಾಲದ ಸುಳಿಗೆ ಸಿಲುಕುವ ಮೊದಲೇ ಸರ್ಕಾರ ನಂದಿನಿಹಾಲು ಉತ್ಪನ್ನಗಳನ್ನು ದಿನವಿಡಿ ಮಾರಾಟ ಮಾಡಲು ಅವಕಾಶ ನೀಡಿದಂತೆ ತರಕಾರಿ ಮಾರಾಟಕ್ಕೂ ಅವಕಾಶ ನೀಡಿ ರೈತರ ಹಿತ ಕಾಪಾಡಬೇಕಿದೆ.
ಹೊಲದಲ್ಲಿ ನಿತ್ಯ ಕೊಳೆಯುತ್ತಿದೆ ಸಾವಿರ ಟನ್‌ಗೂ ಅಧಿಕ ತರಕಾರಿ :
ಕರ್ಫ್ಯೂನಿಂದಾಗಿ ಸೂಕ್ತ ಮಾರುಕಟ್ಟೆ, ಉತ್ತಮ ಬೆಲೆ ಸಿಗದ ಹಿನ್ನೆಲೆ ರೈತರು ಕಟಾವು ಮಾಡದಿರುವುದರಿಂದ ಕೊಯ್ಲಿಗೆ ಬಂದ ಬೀನ್ಸ್, ಕೋಸು, ಟೊಮೊಟೋ, ಈರೆಕಾಯಿ, ಕುಂಬಳಕಾಯಿ, ಸೌತೆಕಾಯಿ ಸೇರಿದಂತೆ ಹಲವು ತರಕಾರಿಗಳು ಗಿಡದಲ್ಲೇ ಬಲಿತು, ಕೊಳೆಯುತ್ತಿವೆ. ನಿತ್ಯ ಸುಮಾರು 2 ಸಾವಿರ ಟನ್ ತರಕಾರಿ ಮಾರು ಕಟ್ಟೆಗೆ ಬರುತ್ತಿತ್ತು. ಇದೀಗ 700 ಟನ್ ತರಕಾರಿ ಮಾತ್ರ ಎಪಿಎಂಸಿಗೆ ಬರುತ್ತಿದ್ದರೂ ಅದಕ್ಕೂ ಸೂಕ್ತ ಬೆಲೆ ಸಿಗುತ್ತಿಲ್ಲ. ಉಳಿದಂತೆ ಇನ್ನು ಸಾವಿರಕ್ಕೂ ಅಧಿಕ ಟನ್ ತರಕಾರಿ ರೈತರ ಜಮೀನಿನಲ್ಲೇ ಕೊಳೆಯುತ್ತಿದೆ.
ಜನಪ್ರತಿನಿಧಿಗಳೇ ರೈತರ ಪರ ಧ್ವನಿ ಎತ್ತಿ :
ಮೈಸೂರು ಜಿಲ್ಲೆಯಿಂದ ಎಪಿಎಂಸಿ, ವಿವಿಧ ಮಾರುಕಟ್ಟೆಗೆ ಪ್ರತಿದಿನ 2 ಸಾವಿರ ಟನ್‌ಗೂಅಧಿಕ ತರಕಾರಿ ಬರುತ್ತಿತ್ತು. ಇದೀಗ ಕರ್ಫ್ಯೂನಿಂದ ಹೆಚ್ಚೆಂದರೆ 600-700 ಟನ್ ಬರುತ್ತಿದೆ.ಇದಕ್ಕೂ ಬೇಡಿಕೆ ಇಲ್ಲದಂತಾಗಿದೆ. ಉಳಿದಸಾವಿರಕ್ಕೂ ಅಧಿಕ ಟನ್ ತರಕಾರಿ ಜಮೀನಿನಲ್ಲೇಕೊಳೆಯುತ್ತಿದೆ. ಎಪಿಎಂಸಿಯಲ್ಲಿ 4 ತಾಸು ಮಾತ್ರಮಾರಾಟಕ್ಕೆ ಅವಕಾಶ ನೀಡಿರುವುದರಿಂದಖರೀದಿದಾರರು ಉತ್ಸಹ ತೋರುತ್ತಿಲ್ಲ. ಈಅವಧಿಯೊಳಗೆ ರೈತರು ತಮ್ಮ ಉತ್ಪನ್ನ ತರುವುದುಕೂಡ ಕಷ್ಟವಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲಶಾಸಕರು, ಜನಪ್ರತಿನಿಧಿಗಳು ಧ್ವನಿ ಎತ್ತಿ ನಂದಿನ ಮಾರಾಟ ಮಳಿಗೆ ಮಾದರಿಯಲ್ಲಿ ದಿನವಿಡೀಮಾರಾಟಕ್ಕೆ ಅವಕಾಶ ನೀಡಬೇಕು. ಸಂಕಷ್ಟದಲ್ಲಿರುವ ನಮ್ಮನ್ನು ಪಾರು ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ತರಕಾರಿಯನ್ನು ಕೊಯ್ಲು ಮಾಡಿ ಸಂಸ್ಕರಿಸಿಡಲು ನಮ್ಮಲ್ಲಿ ಯಾವುದೇವ್ಯವಸ್ಥೆ ಇಲ್ಲ. ಈಗ ಬೆಳಗ್ಗೆ 6ರಿಂದ 10ರಒಳೆಗೆ ಮಾರಾಟ ಮಾಡಬೇಕು ಎಂಬನಿರ್ಬಂಧ ಹೇರಿರುವುದು ಸರಿಯಲ್ಲ. ಕಳೆದಬಾರಿ ಅಗತ್ಯ ವಸ್ತುಗಳ ಸಾಗಟ ಮತ್ತುಮಾರಾಟಕ್ಕೆ ವಿನಾಯಿತಿ ನೀಡಿದಂತೆ ಈಬಾರಿಯೂ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿ, ರೈತರ ಹಿತ ಕಾಪಾಡಿ. –ಮರಂಕಯ್ಯ, ರೈತ ಮುಖಂಡ
– ಸತೀಶ್ ದೇಪುರ