Advertisement

ಕೆರೆಗೆ ಟೊಮೆಟೋ ಸುರಿದು ಆಕ್ರೋಶ

04:34 PM Mar 30, 2020 | Suhan S |

ಪಾಂಡವಪುರ: ಟೊಮೆಟೋ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದ ಕಂಪನಿ ನಿಗದಿತ ಸಮಯಕ್ಕೆ ಖರೀದಿಸಲಿಲ್ಲವೆಂಬ ಕಾರಣಕ್ಕೆ ಕೆರೆಗೆ ಟೊಮೆಟೋ ಸುರಿದು ರೈತನೊಬ್ಬ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಾಲೂಕಿನ ಟಿ.ಎಸ್‌.ಛತ್ರ ಗ್ರಾಮದಲ್ಲಿ ನಡೆದಿದೆ.

Advertisement

ತಾಲೂಕಿನ ಇಂಗಲಕುಪ್ಪೆ ಗ್ರಾಮದ ರೈತ ಸಂತೋಷ್‌ ಟೊಮೆಟೋ ನಾಶ ಮಾಡಿದ ರೈತ. ಗ್ರಾಮದಲ್ಲಿ ಒಂದು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಟೊಮೆಟೋ ಬೆಳೆದು ಖರೀದಿಸಲು ಫಾಸ್ಟ್‌ಟೆಕ್‌ ಕಂಪನಿಯೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದ್ದನು. ಪ್ರಸ್ತುತ ದೇಶ ಲಾಕ್‌ಡೌನ್‌ ಆಗಿರುವುದರಿಂದ ರೈತ ಬೆಳೆದ ಬೆಳೆ ಖರೀದಿಸಲು ಕಂಪನಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ಹತಾಶನಾದ ರೈತ ಟೊಮೆಟೋ ಕೆರೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಕೋವಿಡ್ 19 ಸೋಂಕಿನ ಭೀತಿಯಿಂದ ಮಾರುಕಟ್ಟೆ ಇಲ್ಲದೆ ರೈತರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಈಗಲಾದರೂ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ರೈತರು ಬೆಳೆದಿರುವ ಬೆಳೆಗಳನ್ನು ಸಕಾಲದಲ್ಲಿ ಖರೀದಿಗೆ ವ್ಯವಸ್ಥೆ ಮಾಡಿ ರೈತರ ಬದುಕನ್ನು ರಕ್ಷಣೆ ಮಾಡುವಂತೆ ರೈತ ಸಮುದಾಯ ಒತ್ತಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next