ಅಫಜಲಪುರ: ಮಳೆ ಬಂದು ಹೋದರೂ ರೈತನ ಬದುಕು ಇನ್ನೂ ಸುಧಾರಿಸಿಲ್ಲ. ಮಳೆಬಂದು ಬೆಳೆಯೂ ಹಾಳಾಯ್ತು, ಈಗ ಬದುಕುಮೂರಾಬಟ್ಟೆಯಾಗಿದೆ ಎಂದು ತಾಲೂಕಿನ ರೈತರು ಅಳಲು ತೋಡಿಕೊಂಡರು.
ತಾಲೂಕಿನಾದ್ಯಂತ ಮಳೆ ಮತ್ತು ಪ್ರವಾಹದ ಹೊಡೆತಕ್ಕೆ ಅಪಾರ ಬೆಳೆ ಹಾನಿಯಾಗಿದೆ. ಆಸ್ತಿ,ಪಾಸ್ತಿ ಹಾನಿಗಿಡಾಗಿವೆ. ಒಂದೆಡೆ ಭೀಕರ ಬರಆವರಿಸಿದರೆ ಮತ್ತೂಮ್ಮೆ ಭೀಕರ ಪ್ರವಾಹಕ್ಕೆತಾಲೂಕಿನ ರೈತರು ತುತ್ತಾಗುತ್ತಿದ್ದಾರೆ. ಮಳೆಬಾರದಿದ್ದಾಗ ಬೆಳೆ ಬರುವುದಿಲ್ಲ, ಬೆಳೆ ಚೆನ್ನಾಗಿ ಬಂದಿದೆ ಎನ್ನುವಷ್ಟರಲ್ಲಿ ಭೀಕರ ಪ್ರವಾಹಕ್ಕೆ ಸಿಲುಕಿ ಕೈ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ತಾಲೂಕಿನಾದ್ಯಂತ ಪ್ರಸಕ್ತ ಸಾಲಿನಲ್ಲಿ ಬಿತ್ತನೆಯಾದ ಮುಂಗಾರು ಮತ್ತು ಹಿಂಗಾರುಹಂಗಾಮಿನ ಖುಷ್ಕಿ, ನೀರಾವರಿ ಮತ್ತುತೋಟಗಾರಿಕೆ ಬೆಳೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹಾನಿಯಾಗಿವೆ. ಒಂದೆಡೆವಾಡಿಕೆಗಿಂತ ಹೆಚ್ಚಿನ ಮಳೆ, ಇನ್ನೊಂದೆಡೆ ಭೀಕರ ಪ್ರವಾಹ ಆವರಿಸಿ ಫಲವತ್ತಾಗಿ ಬೆಳೆದು ರೈತರ ಆರ್ಥಿಕ ಪುನಶ್ಚೇತನಗೊಳಿಸಬೇಕಾಗಿದ್ದ ಬೆಳೆಗಳು ಬಾಡಿ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಕಣ್ಣೀರೇ ಗತಿಯಾಯ್ತು: ಮಹಾರಾಷ್ಟ್ರ ಮತ್ತು ಭೀಮಾ ನದಿ ಪಾತ್ರದಲ್ಲಿ ಸುರಿದಮಳೆಯಿಂದಾಗಿ ಭೀಮಾ ನದಿ ಉಕ್ಕಿ ಹರಿದಿತ್ತು. ಅಲ್ಲದೆ ಭೋರಿ ನಾಲಾ, ಅಮರ್ಜಾನ ನದಿಗಳು ಕೂಡ ತುಂಬಿ ಹರಿದ ಪರಿಣಾಮ ತಾಲೂಕಿನ ರೈತರ ಬೆಳೆಗಳೆಲ್ಲ ಹಾಳಾಗಿವೆ. ಮುಖ್ಯವಾಗಿ ಈಭಾಗದ ಮುಖ್ಯ ಬೆಳೆಯಾದ ತೊಗರಿ, ಬಾಳೆ,ಹತ್ತಿ, ಹೆಸರು, ಉದ್ದು, ಸೂರ್ಯಕಾಂತಿ, ಕಬ್ಬು, ಪಪ್ಪಾಯ, ದಾಳಿಂಬೆ, ಕುಂಬಳಕಾಯಿ, ಕಲ್ಲಂಗಡಿ ಸೇರಿದಂತೆ ಅನೇಕ ಬೆಳೆಗಳು ಹಾಳಾಗಿ ರೈತರಕಣ್ಣಲ್ಲಿ ನೀರು ಬರುವಂತೆ ಮಾಡಿವೆ. ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರು. ಉತ್ತಮಫಸಲು ಬಂದು ಮಾಡಿಕೊಂಡ ಸಾಲ ತೀರಿದರೆ ಸಾಕೆಂದುಕೊಂಡಿದ್ದ ರೈತರಿಗೆ ಸಿಡಿಲಾಘಾತ ಬಡಿದಂತಾಗಿದೆ.
ಬೆಳೆ ಸರ್ವೇ ಕಾರ್ಯದಲ್ಲಿ ತಾರತಮ್ಯ: ರೈತರ ಹೊಲಗಳಿಗೆ ಹೋಗದೆ ಒಂದೆಡೆ ಕುಳಿತು ಬೆಳೆದರ್ಶಕ್‌ನಲ್ಲಿ ಬೆಳೆಗಳ ಹಾಳಾದ ಮಾಹಿತಿನಮೂದಿಸಿ ಇಲಾಖೆಗಳಿಗೆ ನೀಡುತ್ತಿದ್ದಾರೆ. ಇದುಪಾರದರ್ಶಕವಾದ ಬೆಳೆ ಸರ್ವೇ ಆಗಿಲ್ಲ. ಸರ್ವೇಕಾರ್ಯದಲ್ಲಿ ತಾರತಮ್ಯ ಆಗುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಜಮೀನಿನಲ್ಲಿ ತೊಗರಿ, ಕಬ್ಬು, ಬಾಳೆ ಹಾಳಾಗಿದೆ. ಇದುವರೆಗೂ ಸಂಬಂಧಿಸಿದ ಅಧಿ ಕಾರಿಗಳು ಜಮೀನಿಗೆ ಬಂದು ಸರ್ವೇ ಕೆಲಸ ಮಾಡಿಲ್ಲ. ಎಲ್ಲವೂ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಈಗ ಸರ್ಕಾರದ ಪರಿಹಾರ ಸ್ವಲ್ಪ ಸಿಕ್ಕರೆ ನಿಟ್ಟಿಸಿರು ಬಿಡುತ್ತೇವೆ. ಇಲ್ಲವಾದರೆ ನಮ್ಮ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗುತ್ತದೆ.
– ಮಲ್ಲಿಕಾರ್ಜುನ ಪೂಜಾರಿ, ರೈತ. ಬಂದರವಾಡ
ಬೆಳೆ ಹಾಳಾದ ಕುರಿತು ರೈತರು ಸಂಬಂಧಪಟ್ಟ ಗ್ರಾಮಲೆಕ್ಕಿಗರಿಗೆ ಮಾಹಿತಿ ನೀಡಬೇಕು. ಬಳಿಕ ಗ್ರಾಮ ಲೆಕ್ಕಿಗರು ಇಲಾಖೆಗೆ ಮಾಹಿತಿ ತಿಳಿಸಿ ಅಧಿ ಕಾರಿಯೊಬ್ಬರ ಜತೆಗೆ ರೈತರ ಜಮೀನಿಗೆ ಹೋಗಿ ಬೆಳೆ ಸರ್ವೇ ಮಾಡುತ್ತಾರೆ.
-ಶಂಕರಗೌಡ ಪಾಟೀಲ್, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ
ಪ್ರವಾಹ ಮತ್ತು ಮಳೆಯಿಂದಾಗ ತಾಲೂಕಿನಾದ್ಯಂತ ಒಟ್ಟು 34,269 ಹೆಕ್ಟೇರ್ ಬೆಳೆ ಹಾಳಾಗಿದ್ದು, ಈ ಪೈಕಿ 32487 ಹೆಕ್ಟೇರ್ ಸರ್ವೇ ಕಾರ್ಯಮುಗಿದಿದೆ. ಇನ್ನೂ ಉಳಿದ ಸರ್ವೇಕಾರ್ಯ ನಡೆಯುತ್ತಿದೆ. ಜತೆಗೆ ಡಾಟಾಎಂಟ್ರಿ ಕೆಲಸವು ನಡೆದಿದೆ. ಪೂರ್ಣಸರ್ವೇ ಮುಗಿದ ಬಳಿಕ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬ ಲೆಕ್ಕ ಸಿಗಲಿದೆ.
-ನಾಗಮ್ಮ, ತಹಶೀಲ್ದಾರ್.
-ಮಲ್ಲಿಕಾರ್ಜುನ ಹಿರೇಮಠ