Advertisement

ರೈತ ನಾಯಕ ಟಿಕಾಯತ್, ಯದುವೀರ್ ಗೆ ಮಸಿ ಬಳಿದು ಹಲ್ಲೆ

04:26 PM May 30, 2022 | Team Udayavani |

ಬೆಂಗಳೂರು: ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯದುವೀರ್ ಸಿಂಗ್ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ವೇಳೆ ಕಿಡಿಗೇಡಿಗಳು ಮೈಕ್ ನಿಂದ ಹಲ್ಲೆ ನಡೆಸಿ, ಮಸಿ ಬಳಿದ ಘಟನೆ ಗಾಂಧಿಭವನದಲ್ಲಿ ಸೋಮವಾರ ನಡೆಯಿತು.

Advertisement

ಕೋಡಿಹಳ್ಳಿ ಚಂದ್ರಶೇಖರ್ ಕಿಕ್ ಬ್ಯಾಕ್ ಆರೋಪ ಪ್ರಕರಣದಲ್ಲಿ ತಮ್ಮ ಹೆಸರು ಎಳೆದು ತಂದ ಹಿನ್ನೆಲೆಯಲ್ಲಿ ಅವರು ಸ್ಪಷ್ಟೀಕರಣ ನೀಡುತ್ತಿದ್ದರು. ಈ ವೇಳೆ ಪತ್ರಕರ್ತರ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಗಣ್ಯರಿದ್ದ ವೇದಿಕೆಯ ಮೇಟ್ಟಿಲೇರಿ ಟಿವಿ ಮೈಕ್ ನಿಂದ ಯದುವೀರ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಜತೆಗೆ  ಹಿಂಬಾಲಿಸಿದ ಗುಂಪು ರೈತ ನಾಯಕರಿಗೆ ಮಸಿ ಎರಚಿತು.

ಮೋದಿ ಮೋದಿ ಎಂದು ಘೋಷಣೆ ಕೂಗಿದರು.ಕೂಡಲೇ ಸ್ಥಳದಲ್ಲಿದ್ದ ರೈತರು ಹಲ್ಲೆಕೋರರನ್ನು ಹಿಡಿದು ಥಳಿಸಿ ಪೋಲಿಸರಿಗೆ ಒಪ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next