ಶಿವಮೊಗ್ಗ: ತಾನು ಸಾಕಿದ ಹಸುಗಳ ವಿರುದ್ಧವೇ ರೈತನೋರ್ವ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ ಘಟನೆ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ನಡೆದಿದೆ. ಇಲ್ಲಿನ ಸಿದ್ಲಿಪುರ ಗ್ರಾಮದ ರಾಮಯ್ಯ ಎಂಬವರೇ ಈ ರೈತ
ತಾನು ಸಾಕಿದ ಹಸುಗಳು ಸರಿಯಾಗಿ ಹಾಲು ಕೊಡದೆ ಒದಿಯುತ್ತಿವೆ, ನೀವೇ ಬುದ್ದಿ ಹೇಳಿ ಎಂದು ಹೊಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ ವಿಚಿತ್ರ ಪ್ರಸಂಗ ನಡೆದಿದೆ.
ತಾನು ಸಾಕಿದ್ದ ನಾಲ್ಕು ಹಸುಗಳನ್ನು ದಿನ ಬೆಳಿಗ್ಗೆ ಎಂಟು ಗಂಟೆಯಿಂದ 11 ಗಂಟೆವರೆಗೂ ಹಾಗೂ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ತುಂಬಾ ಚೆನ್ನಾಗಿ ಮೇಯಿಸಿಕೊಂಡು ಬರುತ್ತಿದ್ದೇನೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ಹಾಲನ್ನು ಕರೆಯಲು ಹೋದರೆ ಆ ಹಸುಗಳು ಹಾಲನ್ನು ಕೊಡದೆ ಸುಖಾಸುಮ್ಮನೆ ಕಾಲಿಂದ ಜಾಡಿಸಿ ಒದೆಯುತ್ತಿವೆ. ಆ ಹಸುಗಳು ತನಗೂ ಹಾಗೂ ತನ್ನ ಪತ್ನಿ ರತ್ನಮ್ಮ ರಿಗೂ ಹಾಲನ್ನು ಸರಿಯಾಗಿ ಕೊಡುತ್ತಿಲ್ಲ ಎಂದು ರೈತ ರಾಮಯ್ಯ ದೂರಿದ್ದಾರೆ.
ಇದನ್ನೂ ಓದಿ:ಜಿಮ್ ಲೇಕರ್, ಕುಂಬ್ಳೆ ದಾಖಲೆ ಸರಿಗಟ್ಟಿದ ಮುಂಬೈ ಮೂಲದ ಅಜಾಜ್ ಪಟೇಲ್: ಕುಂಬ್ಳೆ ಪ್ರಶಂಸೆ
ಹೀಗಾಗಿ ದನಗಳನ್ನು ಠಾಣೆಗೆ ಕರೆಯಿಸಿ ಬುದ್ದಿ ಹೇಳಿ ತಾನಾಗೇ ಸರಿಯಾಗಿ ಹಾಲನ್ನು ಕೊಡಿಸಿ ನ್ಯಾಯ ಒದಗಿಸಿ ಸೂಕ್ತ ಬಂದೋಬಸ್ತ್ ಒದಗಿಸಬೇಕೆಂದು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ರಾಮಯ್ಯ ದೂರು ನೀಡಿದ್ದಾರೆ.