Advertisement

Mangaluru: ರಾಜಕಾರಣವಿಲ್ಲದೆ ರೈತಪರ ಕಾಳಜಿ: ಡಾ| ಎಂ.ಎನ್‌.ಆರ್‌.

08:58 AM Mar 14, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷರಾಗಿ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ 7ನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದು, ಪದಗ್ರಹಣ ಸಮಾರಂಭ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಬುಧವಾರ ನೆರವೇರಿತು.

Advertisement

ಡಾ| ರಾಜೇಂದ್ರ ಕುಮಾರ್‌ ಮಾತ ನಾಡಿ, ಎಲ್ಲರ ಸಹಕಾರವಿದ್ದರೆ ಸಂಸ್ಥೆ ಯೊಂದು ಅಭೂತ ಪೂರ್ವ ಬೆಳವಣಿಗೆ ಸಾಧಿ ಸಬಹುದು ಎಂಬುದಕ್ಕೆ ನಮ್ಮ ಬ್ಯಾಂಕ್‌ ಸಾಕ್ಷಿ . ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಮಾಡದೆ ರೈತರ ಬಗ್ಗೆ ಕಾಳಜಿಯಿಂದ ಕೆಲಸ ಮಾಡುತ್ತಿದ್ದೇವೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಸದೃಢವಾಗಿದ್ದು, ಶೂನ್ಯ ಬಡ್ಡಿ ದರದ ಸಾಲ ಸಹಿತ ರೈತರ ಪರವಾದ ಎಲ್ಲ ಯೋಜನೆಗಳನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ ಸಮರ್ಪಕವಾಗಿ ಜಾರಿಗೊಳಿಸುತ್ತಿದೆ. ಅವಿಭಜಿತ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಇನ್ನಷ್ಟು ಬೆಳೆಯಬೇಕು. ಆ ಮೂಲಕ ರಾಷ್ಟ್ರದಲ್ಲೇ ದಾಖಲೆ ಆಗಲಿ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಮಾತನಾಡಿ, ಡಾ| ಎಂ.ಎನ್‌.ಆರ್‌. 7ನೇ ಬಾರಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಮಾತನಾಡಿ, ರಾಜೇಂದ್ರ ಕುಮಾರ್‌ ಅಧ್ಯಕ್ಷರಾದ ಬಳಿಕ ಎಸ್‌ಸಿಡಿಸಿಸಿ ಬ್ಯಾಂಕ್‌ ಅಪೂರ್ವ ಸಾಧನೆ ಮಾಡಿದೆ ಎಂದು ಅಭಿನಂದಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್‌ ಮಾತನಾಡಿ, ರಾಜೇಂದ್ರ ಕುಮಾರ್‌ ಅಧ್ಯಕ್ಷತೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ವ್ಯವಹಾರ ಹೆಚ್ಚಳ ಆಗಿರುವುದು ಅವರ ಕಾರ್ಯದಕ್ಷತೆಗೆ ಸಾಕ್ಷಿ ಎಂದರು.

Advertisement

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮಾತನಾಡಿ, ಬಂಟರ ಸಂಘ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಅವಿನಾಭಾವ ಸಂಬಂಧವಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬೆಳವಣಿಗೆಗೆ ಎನ್‌.ಎಂ.ಆರ್‌ ಅವರ ಕೊಡುಗೆ ಅನನ್ಯ ಎಂದರು.

ಚುನಾವಣಾಧಿಕಾರಿಯಾಗಿದ್ದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್‌, ಸಹಕಾರ ಸಂಘಗಳ ಉಪನಿಬಂಧಕರಾದ ಎನ್‌. ರಮೇಶ್‌, ಲಾವಣ್ಯ, ಸಹಾಯಕ ನಿಬಂಧಕ ಸುಧೀರ್‌ ಕುಮಾರ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜಾರಾಮ ಭಟ್‌, ಭಾಸ್ಕರ ಎಸ್‌. ಕೋಟ್ಯಾನ್‌, ಎಂ. ವಾದಿರಾಜ ಶೆಟ್ಟಿ, ಐಕಳಬಾವ ದೇವಿಪ್ರಸಾದ ಶೆಟ್ಟಿ, ಶಶಿಕುಮಾರ್‌ ರೈ ಬಿ., ಎಸ್‌. ರಾಜು ಪೂಜಾರಿ, ಎಂ. ಮಹೇಶ್‌ ಹೆಗ್ಡೆ, ಬಿ. ಅಶೋಕ್‌ ಕುಮಾರ್‌ ಶೆಟ್ಟಿ, ಕೆ. ಹರೀಶ್ಚಂದ್ರ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್‌ ಬಿ. ರೈ, ಎಸ್‌.ಬಿ. ಜಯರಾಮ ರೈ, ಎಸ್‌.ಎನ್‌. ಮನ್ಮಥ, ಕುಶಾಲಪ್ಪ ಗೌಡ ಪಿ. ಹಾಗೂ ರಾಜೇಂದ್ರ ಕುಮಾರ್‌ ಅವರ ಪುತ್ರ ಮೇಘರಾಜ್‌ ಉಪಸ್ಥಿತರಿದ್ದರು.

ಜನ್ಮದಿನಾಚರಣೆ: ಡಾ| ಎಂ.ಎನ್‌.ಆರ್‌. ಅವರ 75ನೇ ಹುಟ್ಟುಹಬ್ಬವನ್ನು ಕೇಕ್‌ ಕತ್ತರಿಸುವ ಮೂಲಕ ಆಚರಿಸಲಾಯಿತು. ಗಣ್ಯರು, ರಾಜಕೀಯ ಮುಖಂಡರು, ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು, ನವೋದಯ ಟ್ರಸ್ಟ್‌ನ ಪ್ರತಿನಿಧಿಗಳು, ಬ್ಯಾಂಕಿನ ಸಿಬಂದಿ ಶುಭ ಹಾರೈಸಿದರು.

ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಸುಕುಮಾರ ಶೆಟ್ಟಿ ಆಗಮಿಸಿ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next