Advertisement

ಮಗ ಕವನ ಹೇಳಿದ ದಿನವೇ ರೈತ ಆತ್ಮಹತ್ಯೆ!

09:19 AM Mar 01, 2020 | sudhir |

ಪುಣೆ: ಸಾಲದ ಬಾಧೆ ತಾಳಲಾರದೆ ಮಹಾರಾಷ್ಟ್ರದ ಅಹ್ಮದ್‌ನಗರದ ಪಠಾರ್ದಿ ತಾಲೂಕಿನ ಮಲ್ಹಾರಿ ಬತುಳೆ ಎಂಬ ರೈತ ಆತ್ಮಹತ್ಯೆಗೆ ಶರಣಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ, ಆತನ ಪುತ್ರ, ಅದೇ ದಿನ ತನ್ನ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಧೈರ್ಯದಿಂದ ಬಾಳಬೇಕು ಎಂದು ಕವನವೊಂದವನ್ನು ವಾಚಿಸಿದ್ದ. ಅದಾಗಿ ಕೆಲವೇ ಗಂಟೆಗಳಲ್ಲಿ ಮನೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಜಾರ್‌ವಾಡಿಯಲ್ಲಿ ವಾಸವಾಗಿದ್ದ ಪಠಾರ್ದಿ ತನ್ನ ತಂಗಿಯ ಮದುವೆಗಾಗಿ ಸಾಲ ಮಾಡಿದ್ದ. ಸಾಲ ತೀರಿಸಲಾಗದ ಆತ ಗುರುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿಸಿದ್ದಾರೆ.

ಅದೇ ದಿನ ಆತನ ಪುತ್ರ ಪ್ರಶಾಂತ್‌ ಬತುಲೆ, ತನ್ನ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮರಾಠಿ ಭಾಷಾ ದಿನಾಚರಣೆಯಲ್ಲಿ ರೈತರ ಆತ್ಮಸ್ಥೈರ್ಯ ಹೆಚ್ಚಿಸುವಂಥ ಕವಿತೆ ವಾಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next