Advertisement

ಕೃಷಿ ಹೊಂಡ ಜಲಾನಯನ ಮನೋಹರ

07:52 PM Aug 09, 2021 | Team Udayavani |

ವರದಿ: ಬಸವರಾಜ ಹೊಂಗಲ್‌

Advertisement

ಧಾರವಾಡ: ಓಡುವ ನೀರು ನಿಲ್ಲಬೇಕು, ನಿಂತ ನೀರು ಇಂಗಬೇಕು, ಆಗಷ್ಟೇ ಅಂತರ್ಜಲ ಉಳಿಯಲು ಸಾಧ್ಯ ಎನ್ನುವ ಸತ್ಯವನ್ನು ತಡವಾಗಿ ಅರಿತರೂ ಸರ್ಕಾರ ಕೈಗೊಂಡ ಮಳೆನೀರು ಕೊಯ್ಲು ಯೋಜನೆಗಳು ಜಿಲ್ಲೆಗೆ ಈ ವರ್ಷ ವರದಾನವಾಗಿ ಪರಿಣಮಿಸಿವೆ. ಅದರಲ್ಲೂ ಕೊರೊನಾ ಲಾಕ್‌ ಡೌನ್‌ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಜಿಲ್ಲೆಯ ರೈತರು ತಮ್ಮ ಹೊಲಗಳಲ್ಲಿ ತೋಡಿಸಿಕೊಂಡಿರುವ ಎಲ್ಲಾ ಕೃಷಿಹೊಂಡಗಳು ಭರ್ತಿಯಾಗಿವೆ.

2003ರಲ್ಲಿ ಕೃಷಿ ಸ್ವಯಂ ಸೇವಾ ಸಂಸ್ಥೆಗಳು ಆರಂಭಿಸಿದ ಮಳೆಕೊಯ್ಲು ಯೋಜನೆಯಡಿ ಪ್ರಗತಿಪರ ರೈತರು ಮಾತ್ರ ಹೊಲಗಳಲ್ಲಿ ನಿರ್ಮಿಸಿಕೊಳ್ಳುತ್ತಿದ್ದ ಕೃಷಿ ಹೊಂಡಗಳ ಫಲಿತಾಂಶ ಸರ್ಕಾರದ ಕಣ್ಣು ತೆರೆಸಿತ್ತು. ತತ್ಪರಿಣಾಮ ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರದಿಂದಲೇ ಕೃಷಿ ಹೊಂಡಗಳ ನಿರ್ಮಾಣ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಇದೀಗ 12 ಸಾವಿರಕ್ಕೂ ಅಧಿಕ ಕೃಷಿ ಹೊಂಡಗಳು ರೈತರ ಹೊಲಗಳಲ್ಲಿ ನಿರ್ಮಾಣವಾಗಿವೆ. ಎಲ್ಲ ಕೃಷಿ ಹೊಂಡಗಳು ಮೃಗಶಿರ ಮತ್ತು ಆಶ್ಲೇಷ ಮಳೆ ಅಬ್ಬರಕ್ಕೆ ಸಂಪೂರ್ಣ ಭರ್ತಿಯಾಗಿ ಕಂಗೊಳಿಸುತ್ತಿವೆ. ಕೃಷಿ ಹೊಂಡಗಳಲ್ಲಿ ದೊಡ್ಡ ಮತ್ತು ಸಣ್ಣ ಎಂಬ ಎರಡು ಮಾದರಿಗಳಿವೆ.

2019 ಮತ್ತು 2020ರಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಸುರಿದ ಭಾರಿ ಮಳೆಗೆ ಕೃಷಿಹೊಂಡಗಳಲ್ಲಿ ನೀರು ತುಂಬಿತ್ತು. ಆದರೆ ಈ ವರ್ಷ ಜುಲೈ ಅಂತ್ಯಕ್ಕಾಗಲೇ ಎಲ್ಲಾ ಕೃಷಿ ಹೊಂಡಗಳು ಮೈದಳೆದು ನಿಂತಿವೆ. ಅಳ್ನಾವರ, ಧಾರವಾಡ ಮತ್ತು ಕಲಘಟಗಿ ತಾಲೂಕಿನ ಹೆಚ್ಚು ಕಡಿಮೆ ಶೇ.100 ಕೃಷಿ ಹೊಂಡಗಳು ಈಗಾಗಲೇ ಭರ್ತಿಯಾಗಿ ನೀರು ಇಂಗಿಸುತ್ತಿವೆ. ಅಷ್ಟೇಯಲ್ಲ, ಇಲ್ಲಿ ಮತೊÕÂàದ್ಯಮ ಕೂಡಾ ಚಾಲ್ತಿಯಲ್ಲಿದೆ. ಆದರೆ ನವಲಗುಂದ ಮತ್ತು ಹುಬ್ಬಳ್ಳಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ ತೋಡಿಸಿರುವ ಕೃಷಿ ಹೊಂಡಗಳಲ್ಲಿ ಅರ್ಧದಷ್ಟು ಮಾತ್ರ ನೀರು ಸಂಗ್ರಹಣೆಯಾಗಿದೆ.

ನೂರು ಅಡಿ ಉದ್ದ ಮತ್ತು ಅಗಲದ ದೊಡ್ಡ ಕೃಷಿ ಹೊಂಡಗಳು, 20ಗಿ20, 40ಗಿ40 ಅಡಿ ಕೊರೆಸಿದ ಕೃಷಿ ಹೊಂಡಗಳಲ್ಲಿ ಈ ವರ್ಷ ಕೋಟಿ ಕೋಟಿ ಲೀಟರ್‌ ನೀರು ಸಂಗ್ರಹವಾಗಿದ್ದು, ಪರಿಸರ ಮತ್ತು ಅಂತರ್ಜಲಕ್ಕೆ ಪೂರಕ ವಾತಾವರಣ ಸೃಷ್ಟಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next