ಎಚ್.ಡಿ.ಕೋಟೆ: ಇದೀಗ ಸುಗ್ಗಿ ಸಮಯ ವಾಗಿದ್ದು, ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿರುವುದು ಕಂಡು ಬರುತ್ತಿದ್ದು, ವಾಹನಗಳಸಂಚಾರಕ್ಕೆ ವ್ಯತ್ಯಯವಾಗುತ್ತಿದೆ. ಆದರೂ ಯಾರೊಬ್ಬರೂ ಇದನ್ನು ತಡೆಯಲು ಗಮನ ಹರಿಸುತ್ತಿಲ್ಲ.
ತಾಲೂಕಿನ ಚೊಕ್ಕೋಡನಹಳ್ಳಿ ವ್ಯಾಪ್ತಿಗೆಒಳಪಡುವ ಮೇಟಿಕುಪ್ಪೆ ಮತ್ತು ಜಿ.ಎಂ.ಹಳ್ಳಿ ಮಾರ್ಗದ ಮುಖ್ಯರಸ್ತೆಯಲ್ಲೇ ಹುರಳಿ ಸೇರಿದಂತೆ ಇನ್ನಿತರ ಧಾನ್ಯಗಳನ್ನು ಒಕ್ಕಣೆ ಮಾಡಲಾಗುತ್ತಿದೆ. ಮುಖ್ಯರಸ್ತೆ ಮಾರ್ಗ ಮಧ್ಯದಲ್ಲೇ ರೈತರು ರಾಶಿ ರಾಶಿ ಉರಳಿ ಗಿಡಗಳನ್ನು ಚೆಲ್ಲಾಪಿಲ್ಲಿಯಾಗಿ ಸುರಿದು ಒಕ್ಕಣೆ ಮಾಡುತ್ತಿದ್ದಾರೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆ ಆಗುತ್ತಿದ್ದರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲಿ, ಪೊಲೀಸರಾಗಿ ಕ್ರಮಕೈಗೊಂಡಿಲ್ಲ. ತಾಲೂಕಿನಲ್ಲಿ ಹಲವುಕಡೆ ರಸ್ತೆ ಮಧ್ಯದಲ್ಲೇ ಬೆಳೆಗಳನ್ನು ಒಕ್ಕಣೆ ಮಾಡಲಾಗುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯ ಮಾಡಿಕೊಂಡಿರುವ ನಿದರ್ಶನ ಕೂಡ ಇದೆ. ತೀವ್ರವಾಗಿ ಆಯತಪ್ಪಿದರೆ ಪ್ರಾಣ ಹಾನಿಯಾಗುವ ಸಂಭವ ಇದೆ.
ತಾಲೂಕಿನಲ್ಲಿ ಈ ರೀತಿ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದರ ವಿರುದ್ಧ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ರೈತನ್ನು ಮನವೊಲಿಸಿ,ಒಕ್ಕಣೆಗೆರಸ್ತೆಯನ್ನುಬಳಸಿಕೊಳ್ಳದಂತೆನೋಡಿಕೊಳ್ಳಬೇಕು. ಅವಘಡಕ್ಕೆ ಆಸ್ಪದ ನೀಡದಂತೆ ಸುಗಮ ಸಂಚಾರಕ್ಕೆ ಅವಕಾಶಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಕ್ಕಣೆ ಮಾಡಲಿಕ್ಕಾಗಿಯೇ ಗ್ರಾಮ ಪಂಚಾಯ್ತಿ ವತಿಯಲ್ಲಿ ಸ್ಥಳ ಕಲ್ಪಿಸಲುಅವಕಾಶವಿದೆ. ಸಾಮೂಹಿಕ ಒಕ್ಕಣೆನಿರ್ಮಾಣಕ್ಕಾಗಿ ಉದ್ಯೋಗಖಾತ್ರಿ ಸೇರಿದಂತೆಮತ್ತಿತರರ ಅನುದಾನ ಬಳಸಿಕೊಳ್ಳಬಹು ದಾಗಿದೆ.. ಇದನ್ನು ಸಮರ್ಪಕವಾಗಿ ಬಳಸಿ ಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ರೈತರ ಕೂಡ ಹಿಂದಿನ ವಾಡಿಕೆಯಂತೆ ತಮ್ಮ ಜಮೀನು, ಹೊಲಗಳಲ್ಲಿ ಕಣ ನಿರ್ಮಿಸಿ ಕೊಂಡು ಸುಗ್ಗಿ ಕಾರ್ಯ ಕೈಗೊಳ್ಳಬೇಕು. ರಸ್ತೆಯಲ್ಲಿ ಒಕ್ಕಣೆ ಮಾಡಿದರೆ ಸುಲಭವಾಗುತ್ತದೆ ಎಂದು ಭಾವಿಸಿ ವಾಹನ ಸವಾರರಿಗೆ ತೊಂದರೆ ನೀಡಬಾರದು ಎಂದು ನಾಗರಿಕರು ಮನವಿ ಮಾಡಿದ್ದಾರೆ.