Advertisement

ಕೃಷಿ ಕಾಯ್ದೆ ರೈತರಿಗೆ ಮಾರಕವಲ್ಲ: ಸುರೇಶ್‌

04:12 PM Dec 09, 2020 | Suhan S |

ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಮಸೂದೆಗಳು ರೈತರ ಪರವಾಗಿವೆ. ಯಾವುದೂ ಮಾರಕವಾಗಿಲ್ಲ. ಇದನ್ನು ಸಹಿಸದ ವಿರೋಧಿಗಳು ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‌ ಸಿದ್ದಾಪುರ ಆರೋಪಿಸಿದರು.

Advertisement

ಬಿಜೆಪಿ ಕಚೇರಿಯಲ್ಲಿ ಮಂಗಳವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಕೇಂದ್ರ ಸರ್ಕಾರ ಜಾರಿಗೆತಂದಿರುವ ರೈತರ ಉತ್ಪನ್ನ, ವ್ಯಾಪಾರಮತ್ತು ವಾಣಿಜ್ಯ ಮಸೂದೆ, ರೈತರಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ, ಅಗತ್ಯ ಸರಕುಗಳತಿದ್ದುಪಡಿ ಮಸೂದೆ ರೈತ ವಿರೋಧಿಯಾಗಿದೆ ಎಂದು ಕಾಂಗ್ರೆಸ್‌ ಸೇರಿದಂತೆ ವಿವಿಧ ಸಂಘಟನೆಗಳು ರೈತರನ್ನು ಪ್ರಚೋದಿ ಸಿ ಭಾರತ ಬಂದ್‌ ನಡೆಸಿವೆ. ಆದರೆ ಬಂದ್‌ ವಿಫಲವಾಗಿದೆ ಎಂದರು.

ದಲ್ಲಾಳಿಗಳು, ಮಧ್ಯವರ್ತಿಗಳು ಇದನ್ನು ಲಾಭವನ್ನಾಗಿ ಮಾಡಿಕೊಂಡುರೈತರನ್ನು ಪ್ರಧಾನಿ ನರೇಂದ್ರಮೋದಿಯವರ ವಿರುದ್ಧ ಪ್ರಚೋದಿಸುತ್ತಿರುವುದು ಸರಿಯಲ್ಲ. ಮೂರು ಕಾಯ್ದೆಗಳಿಂದ ರೈತರಿಗೆ ಲಾಭವೇ ವಿನಃ ನಷ್ಟವಲ್ಲ. ಇದನ್ನು ವಿರೋಧಿಸುವವರು ಅರ್ಥ ಮಾಡಿಕೊಂಡು ರೈತರ ದಿಕ್ಕು ತಪ್ಪಿಸಬಾರದು ಎಂದು ತಾಕೀತು ಮಾಡಿದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ ಯಾದವ್‌ಮಾತನಾಡಿ, ರೈತರ ಆದಾಯವನ್ನು ದ್ವಿಗುಣಗೊಳಿಸುವುದಕ್ಕಾಗಿ ಕೇಂದ್ರಸರ್ಕಾರ ಮೂರು ಮಸೂದೆಗಳನ್ನು ಜಾರಿಗೆ ತಂದಿದೆ. ರೈತರ ಏಳಿಗೆ,ಅಭಿವೃದ್ಧಿ, ರಕ್ಷಣೆಗೆ ಈ ಮಸೂದೆಗಳು ಸಹಕಾರಿಯಾಗಲಿದೆ. ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವರೈತರು ಭಾರತ ಬಂದ್‌ಗೆ ಕರೆನೀಡಿರುವುದಕ್ಕೆ ಇತರೆ ಸಂಘಟನೆಗಳು ಬೆಂಬಲಿಸುತ್ತಿರುವುದು ಹಾಸ್ಯಾಸ್ಪದ. ಆತ್ಮನಿರ್ಭರ ಯೋಜನೆಯಡಿ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಪರಿಹಾರ ಜಮಾ ಆಗುತ್ತಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ರೈತರಿಗೆ ದುಸ್ತರವಾಗಿದ್ದ ಯೂರಿಯಾವನ್ನು ಈಗ ಸುಲಭವಾಗಿಸಿಗುವಂತೆ ಮಾಡಲಾಗಿದೆ. ಇದು ಪ್ರಧಾನಿ ಮೋದಿ ಅವರಿಗೆ ರೈತರಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದರು.

ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸೂರಮ್ಮನಹಳ್ಳಿ ನಾಗರಾಜ್‌,ಪ್ರಧಾನ ಕಾರ್ಯದರ್ಶಿ ಜಿ.ಎಸ್‌.ಕಲ್ಲೇಶಯ್ಯ, ವಕ್ತಾರ ನಾಗರಾಜ್‌ ಬೇದ್ರೆ, ಕೇಶವಮೂರ್ತಿ, ಎನ್‌. ತಿಪ್ಪೇಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next