ದಾವಣಗೆರೆ: ಮನೆಯ ಮುಂದೆ ಕಾರು ನಿಲ್ಲಿಸಿದ್ದ ಕಾರಿಗೆ ಒಂದೇ ದಿನ ಐದು ಟೋಲ್‌ಗಳಲ್ಲಿ ಫಾಸ್ಟಾಗ್ ಮೂಲಕ ಟೋಲ್ ಶುಲ್ಕ ಕಡಿತಗೊಂಡಿರುವ ಕುತೂಹಲದ ಸಂಗತಿ ವರದಿಯಾಗಿದೆ.
ಒಟ್ಟಾರೆ ಏಳು ಬಾರಿ ವಿವಿಧ ಟೋಲ್‌ಗಳಲ್ಲಿ ಶುಲ್ಕ ಕಡಿತಗೊಂಡಿದೆ. ಹಾಗಾಗಿ ಕಾರಿನ ಮಾಲಕರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ದಾವಣಗೆರೆ ಸಮೀಪದ ಆವರಗೆರೆ ನಿವಾಸಿ, ನ್ಯಾಯವಾದಿ ಎಸ್. ಪರಮೇಶ್ ಎಂಬವರ ಇನ್ನೋವಾ ಕಾರು (ಕೆಎ-17, ಎನ್-6828) ಮನೆಯ ಮುಂದೆಯೇ ನಿಂತಿತ್ತು. ಆದರೂ ಮಾ.31ರ ರಾತ್ರಿ ದಾವಣಗೆರೆ ತಾಲೂಕಿನ ಹೆಬ್ಟಾಳು, ಚಿತ್ರದುರ್ಗದ ಗುಯಿಲಾಳ್, ಬೆಂಗಳೂರು ಸಮೀಪದ ಕಲುಮಹಳ್ಳಿ, ನವಯುಗ್, ಕರ್ಜಿವನ್ ಹಾಗೂ ಮಾ.25ರಂದು ಬೇರೆ ಎರಡು ಟೋಲ್‌ಗಳಲ್ಲಿ ಫಾಸ್ಟಾಗ್ ಮೂಲಕ ಶುಲ್ಕ ಕಡಿತವಾಗಿರುವ ಬಗ್ಗೆ ಅವರ ಮೊಬೈಲ್‌ಗೆ ಸಂದೇಶ ಬಂದಿದೆ.
ಈ ಕುರಿತು ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು, ಜತೆಗೆ ಪ್ರತಿ ಟೋಲ್‌ನಿಂದ 5 ಲ. ರೂ. ಪರಿಹಾರ ಕೋರಿ ಗ್ರಾಹಕ ನ್ಯಾಯಾಲಯಕ್ಕೂ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:50% ಸ್ಥಳಾವಕಾಶದ ಆದೇಶದಿಂದ ‘ಯುವರತ್ನ’ಕ್ಕೆ ಸಂಕಷ್ಟ: ಆದೇಶ ಹಿಂಪಡೆಯುವಂತೆ ‘ಅಪ್ಪು’ ಮನವಿ