Advertisement
ಫರಂಗಿಪೇಟೆಯು ಪುದು ಗ್ರಾಮದ ಮಾರಿಪಳ್ಳದಿಂದ ಮಂಗಳೂರಿನ ಅಡ್ಯಾರು ಗ್ರಾಮದ ಅರ್ಕುಳದವರೆಗೆ ವಿಸ್ತರಿಸಿ ಕೊಂಡಿದ್ದು, ಈ ಪ್ರದೇಶವು ಮಂಗಳೂರು- ಬೆಂಗಳೂರು ರಾ.ಹೆ. 75ರ ವ್ಯಾಪ್ತಿಗೆ ಬರುತ್ತದೆ. ಈ ಭಾಗದಲ್ಲಿ ಯಾವುದೇ ಚಟುವಟಿಕೆ ನಡೆಸಬೇಕಾದರೂ, ಎನ್ ಎಚ್‌ಎಐನ ಅನುಮತಿ ಅಗತ್ಯವಾಗಿದೆ. ಆದರೆ ಅಲ್ಲಿನ ಚರಂಡಿ ನಿರ್ವಹಣೆಯನ್ನು ಎನ್‌ಎಚ್‌ಎಐ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
Related Articles
Advertisement
ದೂರು-ಮನವಿಗೂ ಸ್ಪಂದನೆ ಇಲ್ಲ
ಪುದು ಗ್ರಾ.ಪಂ.ನಿಂದ ನೀಡುವ ಮನವಿ, ಸೂಚನೆಗಳಿಗೆ ಎನ್‌ಎಚ್‌ಎಐ ಸ್ಪಂದನೆ ನೀಡುತ್ತಿಲ್ಲ ಎಂಬುದು ಗ್ರಾ.ಪಂ.ನ ಆರೋಪ. ಈ ಹಿಂದೆ ಅರ್ಧಂಬರ್ಧ ನಿರ್ಮಿಸಲ್ಪಟ್ಟಿದ್ದ ಚರಂಡಿಯ ಕುರಿತು ದೂರು ನೀಡಿದಾಗಲೂ ಸ್ಪಂದನೆ ಸಿಕ್ಕಿಲ್ಲ. ಜತೆಗೆ ಚರಂಡಿಯ ಹೂಳು ತೆಗೆಯಲು ಮನವಿ ಮಾಡಿ ಸ್ಪಂದನೆ ಸಿಗದೇ ಇರುವ ಕಾರಣ ನಾವೇ ಹೂಳು ತೆಗೆಯುತ್ತಿದ್ದೇವೆ ಎಂಬುದು ಗ್ರಾ.ಪಂ.ನ ವಾದ.
ಗ್ರಾ.ಪಂ.ನಿಂದ ನಿರ್ವಹಣೆ
ಫರಂಗಿಪೇಟೆ ಸೇರಿದಂತೆ ನಮ್ಮ ಗ್ರಾಮ ವ್ಯಾಪ್ತಿಯ ಚರಂಡಿ ದುರಸ್ತಿಯ ಕಾರ್ಯವನ್ನು ಪ್ರತಿವರ್ಷ ಗ್ರಾ.ಪಂ.ನಿಂದಲೇ ಮಾಡುತ್ತೇವೆ. ಎನ್‌ಎಚ್‌ಎಐನವರಿಗೆ ಸೂಚಿಸಿದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಫರಂಗಿಪೇಟೆಯ ಮಧ್ಯದ ಡಿವೈಡರ್ ಮುಚ್ಚಿ 2 ಕಡೆ ತೆರವು ಮಾಡುವ ಮನವಿಗೂ ಅವರು ಯಾವುದೇ ಸ್ಪಂದನೆ ನೀಡಿಲ್ಲ. ಇದೀಗ ಚರಂಡಿ ದುರಸ್ತಿ ಕಾರ್ಯ ಮಾಡಲಾಗಿದೆ. –ರಮ್ಲಾನ್ ಮಾರಿಪಳ್ಳ, ಅಧ್ಯಕ್ಷರು, ಗ್ರಾ.ಪಂ. ಪುದು