ಮುಂಬೈ : ಬಾಲಿವುಡ್ ಚಿತ್ರರಂಗದ ಹಿರಿಯ ನಟ, ಮೆಹೆಂದಿ, ಫರೀಬ್ , ದುಲ್ಹನ್ ಬನು ಮೈ ತೇರಿ ಚಿತ್ರದಲ್ಲಿ ನಟಿಸಿದ ಫರಾಜ್ ಖಾನ್ (50) ಅವರು ಬುಧವಾರ ಅನಾರೋಗ್ಯದಿಂದ ನಿಧನ ಹೊಂದಿದರು.
Advertisement
ಅನಾರೋಗ್ಯದಿಂದ ಬಳಲುತ್ತಿದ್ದ ಖಾನ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದರು.
ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದ ಖಾನ್ ಚಿಕಿತ್ಸೆಗಾಗಿ ಸಲ್ಮಾನ್ ಖಾನ್, ಪೂಜಾ ಭಟ್ ಸಹಾಯ ಮಾಡಿದ್ದರು.
ಫಾರಾಜ್ ಖಾನ್ ನಿಧನ ಸುದ್ದಿಯನ್ನು ಬಾಲಿವುಡ್ ನಟಿ ಪೂಜಾ ಭಟ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಂತಾಪವನ್ನು ಸೂಚಿಸಿದ್ದಾರೆ.