Advertisement

ಬಡವರ ಹಸಿವು ನೀಗಿಸಿದ ಅಭಿಮಾನಿ ಬಳಗ

01:40 PM Apr 06, 2020 | Suhan S |

ಬಾಗಲಕೋಟೆ: ಚುನಾವಣೆ ವೇಳೆ ರಾಜಕಾರಣಿಗಳು ಮದ್ಯ, ಹಣ ಎಲ್ಲವೂ ಹಂಚುತ್ತಾರೆ. ಆದರೆ,  ಕೋವಿಡ್ 19 ಭೀತಿಯಿಂದ ಎಲ್ಲೆಡೆ ಲಾಕ್‌ಡೌನ್‌ ಘೋಷಣೆ ಮುಂದುವರೆದಿದ್ದು, ಈ ಸಂದರ್ಭದಲ್ಲಿ ಬಡವರ ನೆರವಿಗೆ ಎಲ್ಲ ರಾಜಕಾರಣಿಗಳು ಬರಲಿ ಎಂಬ ಒತ್ತಾಯ ಎಲ್ಲೆಡೆ ಕೇಳಿ ಬರುತ್ತಿತ್ತು. ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರ ಅಭಿಮಾನಿ ಬಳಗ, ಇಡೀ ಕ್ಷೇತ್ರದ ಬಡ ಜನರ ಹಸಿವು ಹಿಂಗಿಸಲು ಲಕ್ಷಾಂತರ ಮೊತ್ತದ ಆಹಾರಧಾನ್ಯ, ದಿನಸಿ ಸಾಮಗ್ರಿ ವಿತರಿಸಿ, ಜಿಲ್ಲೆಯ ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದೆ.

Advertisement

ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಬಾದಾಮಿಯ ಶಾಸಕ ಸಿದ್ದರಾಮಯ್ಯ ಅವರ ಅಭಿಮಾನಿ ಬಳಗದಿಂದ ಕ್ಷೇತ್ರದ 114 ಗ್ರಾಮಗಳ ಬಡವರ ಮನೆ ಮನೆಗೂ ಆಹಾರಧಾನ್ಯ ತಲುಪಿಸುವ ಕಾರ್ಯ ಮಾಡುತ್ತಿದೆ. ಜತೆಗೆ 1.50 ಲಕ್ಷ ಮಾಸ್ಕ್ ಗಳನ್ನು ಕ್ಷೇತ್ರದ ಜನರಿಗೆ ವಿತರಿಸುತ್ತಿದ್ದು, ಲಾಕ್‌ಡೌನ್‌ದಿಂದ ದಿನಸಿ ಸಾಮಗ್ರಿ, ಆಹಾರ ಸಿಗದೇ ಪರದಾಡುತ್ತಿದ್ದ ಬಡವರ ಹಸಿವು ನೀಗಿಸುವ ಕೆಲಸ ಮಾಡಿದ್ದು, ಕ್ಷೇತ್ರದ ಜನರಿಂದ ಶ್ಲಾಘನೆಗೆ ವ್ಯಕ್ತವಾಗಿದೆ.

25 ಸಾವಿರ ಕೆ.ಜಿ. ಅಕ್ಕಿ: ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಅವರ ಆಪ್ತರೂ ಆಗಿರುವ ಗುಳೇದಗುಡ್ಡದ ಹೊಳೆ ಬಸುಷ. ಶೆಟ್ಟರ, ಸಂಜೀವ ಬರಗುಂಡಿ, ನಂದಿಕೇಶ್ವರದ ಎಂ.ಬಿ. ಹಂಗರಗಿ ಹೀಗೆ ಹಲವು ಪ್ರಮುಖರು ಕೂಡಿಕೊಂಡು ಇಡೀ ಕ್ಷೇತ್ರದ ಜನರು ನಿತ್ಯ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಬರೋಬ್ಬರಿ 25 ಸಾವಿರ ಕೆ.ಜಿ ಅಕ್ಕಿ, ಒಂದು ನೂರು ಕೆ.ಜಿ.ಗೆ ತಲಾ 3 ಸಾವಿರ ಮೊತ್ತದ ಅಡುಗೆ ಎಣ್ಣೆ, ವಿವಿಧ ದಿನಸಿ ಪದಾರ್ಥಗಳನ್ನೂ ನೀಡಲಾಗಿದೆ. ಅಭಿಮಾನಿ ಬಳಗದಿಂದ ಪ್ರತಿ ಗ್ರಾಮದಲ್ಲಿ ಒಂದೊಂದು ತಂಡ ರೂಪಿಸಿ, ಅವರ ಮೂಲಕ ಆಯಾ ಗ್ರಾಮಗಳಲ್ಲಿ ಅತ್ಯಂತ ಬಡವರು ವಾಸಿಸುವ ಏರಿಯಾಗಳಿಗೆ ತಲುಪಿಸಲಾಗಿದೆ.

ಇದರಿಂದ ಜನರಿಗೆ ಆಹಾರ ಧಾನ್ಯಕ್ಕಾಗಿ ಪರದಾಡುವ ಪರಿಸ್ಥಿತಿ ತಲುಪಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 114 ಗ್ರಾಮಗಳು ಬರುತ್ತಿದ್ದು, ಪ್ರತಿ ಗ್ರಾಮಕ್ಕೂ ಅಕ್ಕಿ, ದಿನಸಿ ಪದಾರ್ಥ ತಪಿಸಲಾಗಿದೆ. ಇನ್ನು ಹಂಸನೂರ ಜಿ.ಪಂ. ವ್ಯಾಪ್ತಿಯ ಸುಮಾರು 26 ಹಳ್ಳಿಗಳಿಗೆ (ತಾಂಡಾ, ತೋಟದ ವಸ್ತಿಗಳೂ ಸೇರಿ) 3600 ಕೆ.ಜಿ ಅಕ್ಕಿಯ ಮಸಾಲಾ ರೈಸ್‌ (ಪಲಾವ್‌) ಸಿದ್ಧಪಡಿಸಿ, ಬಡವರ ಮನೆ ಮನೆಗೆ ನೀಡಲಾಗಿದೆ.

1.50 ಲಕ್ಷ ಮಾಸ್ಕ್ : ಕ್ಷೇತ್ರದ 114 ಹಳ್ಳಿಗಳ ಬಡವರ ಮನೆಗೆ ಆಹಾರ ಧಾನ್ಯ, ದಿನಸಿ ಪದಾರ್ಥ, ಪಲಾವ್‌ ವಿತರಿಸಿದರೆ, ಮನೆ ಮನೆಗೂ ಮಾಸ್ಕ್ ವಿತರಣೆಗೆ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ನಿರ್ಧರಿಸಿದೆ. ಈಗಾಗಲೇ ಸುಮಾರು 75 ಸಾವಿರದಷ್ಟು ಮಾಸ್ಕ್ಗಳನ್ನು ಹೊರಗಿನಿಂದ ತರಿಸಿದ್ದು, ಇನ್ನೂ 75 ಸಾವಿರದಷ್ಟು ಮಾಸ್ಕ್ಗಳನ್ನು ಗುಳೇದಗುಡ್ಡ, ಬಾದಾಮಿ ಸೇರಿದಂತೆ ವಿವಿಧೆಡೆ ಸಿದ್ಧಪಡಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ಆಪ್ತ ಹೊಳೆಬಸು, ಸಂಜೀವ ಬರಗುಂಡಿ ಸೇರಿದಂತೆ ಹಲವು ಯುವಕರು, ಗುಳೇದಗುಡ್ಡದ ತಮ್ಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಹಾರ ತಯಾರಿಸುವ ಜತೆಗೆ ಮಾಸ್ಕ್ಗಳನ್ನು ಗ್ರಾಮವಾರು ಬಂಡಲ್‌ ಮಾಡುವುದರಲ್ಲಿ ತೊಡಗಿದ್ದಾರೆ. ಒಟ್ಟಾರೆ, ಲಾಕ್‌ಡೌನ್‌ ದಿಂದ ಆಹಾರಧಾನ್ಯ, ದಿನಸಿ ಸಿಗದೇ ಪರದಾಡುತ್ತಿದ್ದ ಬಡ ಸಿದ್ದರಾಮಯ್ಯ ಅವರ ಅಭಿಮಾನಿ ಬಳಗದಿಂದ ಮಾನವೀಯ ಕಾರ್ಯ ನಡೆದಿದೆ.  ಇದು ಜಿಲ್ಲೆಯ ಇತರೆ ರಾಜಕಾರಣಿಗಳಿಗೂ ಮಾದರಿಯಾಗಿದೆ ಎಂಬ ಅಭಿಪ್ರಾಯ ಕ್ಷೇತ್ರದ ಪ್ರಜ್ಞಾವಂತ ಜನರಿಂದ ಕೇಳಿ ಬರುತ್ತಿದೆ.

Advertisement

 

ಕೋವಿಡ್ 19 ಭೀತಿಯಿಂದ ಇಡೀ ದೇಶದಲ್ಲಿ ಲಾಕ್‌ಡೌನ್‌ ಘೋಷಿಸಿದ್ದು, ಕ್ಷೇತ್ರದ ಜನರಿಗೆ ನಿತ್ಯ ಊಟಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ ಸಾಹೇಬರು ಸೂಚಿಸಿದ್ದರು. ಅವರ ನಿರ್ದೇಶನದಂತೆ 25 ಸಾವಿರ ಕೆ.ಜಿ. ಅಕ್ಕಿ, ಸುಮಾರು 5.50 ಲಕ್ಷ ಮೊತ್ತದ ದಿನಸಿ ಸಾಮಗ್ರಿ, 3600 ಕೆ.ಜಿ.ಯ ಪಲಾವ್‌ ವಿತರಣೆ ಮಾಡಿದ್ದೇವೆ. ಕ್ಷೇತ್ರದ ಮನೆ ಮನೆಗೂ 1.50 ಲಕ್ಷ ಮಾಸ್ಕ್ ವಿತರಣೆಗೆ ಸಿದ್ಧತೆ ನಡೆದಿದ್ದು, ಇನ್ನೆರಡು ದಿನಗಳಲ್ಲಿ ವಿತರಣೆ ಮಾಡುತ್ತೇವೆ.  ಹೊಳೆಬಸುಷ. ಶೆಟ್ಟರ, ಸಿದ್ದರಾಮಯ್ಯ ಅಭಿಮಾನಿ ಬಳಗದ ಪ್ರಮುಖ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next