Advertisement

ವಿಷ್ಣುವರ್ಧನ್‌ ಬರ್ತ್‌ಡೇ ಸಂಭ್ರಮದಲ್ಲಿ ಅಭಿಮಾನಿಗಳು

10:18 AM Sep 20, 2019 | Lakshmi GovindaRaju |

ಬುಧವಾರ ಬೆಳಗ್ಗೆಯಿಂದಲೇ ಅಭಿಮಾನ್‌ ಸ್ಟುಡಿಯೋಗೆ ಅಭಿಮಾನಿಗಳ ದಂಡು ಹರಿದುಬರುತ್ತಿತ್ತು. ಅದಕ್ಕೆ ಕಾರಣ ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ. ಹೌದು, ಸೆ.18 ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ. ಅವರಿಲ್ಲದಿದ್ದರೂ ಅಭಿಮಾನಿಗಳ ಹೃದಯದಲ್ಲಿ ಅವರ ನೆನಪು ಚಿರಸ್ಥಾಯಿಯಾಗಿದೆ.

Advertisement

ಅದೇ ಕಾರಣದಿಂದ ತಮ್ಮ ಅಭಿಮಾನದ ನಟನ ಹುಟ್ಟುಹಬ್ಬದಂದು ಅಭಿಮಾನ್‌ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್‌ ಅವರ ಸಮಾಧಿಗೆ ತೆರಳಿ ಅಭಿಮಾನಿಗಳು ಪೂಜೆ ಸಲ್ಲಿಸಿದರು. ಇದೇ ವೇಳೆ ರಕ್ತದಾನ ಶಿಬಿರ ಕೂಡಾ ನಡೆಯಿತು. ಇನ್ನು, ದೂರದ ಊರುಗಳಿಂದ ಬಂದ ಅಭಿಮಾನಿಗಳಿಗಾಗಿ ಅನ್ನದಾನದ ವ್ಯವಸ್ಥೆ ಕೂಡಾ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next