Advertisement

ಫೋನಿ ಪರಿಣಾಮ : ನಾಳೆ ಬೆಳಗ್ಗೆವರೆಗೆ ಕೋಲ್ಕತಾ ವಿಮಾನ ನಿಲ್ದಾಣ ಬಂದ್‌

09:50 AM May 04, 2019 | Vishnu Das |

ಕೋಲ್ಕತಾ : ಒಡಿಶಾಗೆ ಅಪ್ಪಳಿಸಿರುವ ಫೋನಿ ಚಂಡಮಾರುತ ಪಶ್ಚಿಮ ಬಂಗಾಳದ ಕರಾವಳಿಯಲ್ಲೂ ಭಾರೀ ಪರಿಣಾಮ ಬೀರಿದ್ದು, ಶುಕ್ರವಾರ ಬಲವಾದಗಾಳಿ ಮತ್ತು ಭಾರೀ ಮಳೆ ಸುರಿಯುತ್ತಿದೆ. ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗಿನವರೆಗೆ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Advertisement

ನಾಗರಿಕ ವಿಮಾನಯಾನ ನಿರ್ದೇಶನಾಲಯ ಶುಕ್ರವಾರ 3 ಗಂಟೆಯಿಂದ ಶನಿವಾರ ಬೆಳಗ್ಗೆ 8 ಗಂಟೆಯವರೆಗೆ ಯಾವುದೇ ವಿಮಾನಗಳ ಹಾರಟ ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.

ವಿಮಾನಗಳಹಾರಾಟ ಮತ್ತು ಲ್ಯಾಂಡಿಂಗ್‌ ಇಲ್ಲದ ಹಿನ್ನಲೆಯಲ್ಲಿ ನೂರಾರು ಪ್ರಯಾಣಿಕರು ತೀವ್ರಗೊಂದಲಕ್ಕೆ ಗುರಿಯಾಗಿದ್ದು, ಪರದಾಡಬೇಕಾಗಿದೆ.

ಪಶ್ಚಿಮ ಬಂಗಾಳದ ಕರಾವಳಿ ತೀರದಲ್ಲೂ ಫೋನಿ ಎದುರಿಸಲು ಸಿದ್ಧತೆ ನಡೆಸಲಾಗಿತ್ತು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next