ಬೀಜಿಂಗ್: ಜಗತ್ತಿಗೆ ಮಾರಕವಾಗಿ ಪರಿಣಮಿಸಿದ ಕೊರೊನಾ ಸೋಂಕಿನ ಬಗ್ಗೆ ಮೊದಲು ಮಾಹಿತಿ ನೀಡಿ ಎಚ್ಚರಿಸಿದ್ದ ಫಾಂಗ್ ಬಿನ್ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ.
2019ರ ಆರಂಭದಲ್ಲಿ ವುಹಾನ್‌ನಲ್ಲಿ ಸೋಂಕು ಉಂಟಾಗಿರುವ ಬಗ್ಗೆ ದಾಖಲೀಕರಣ ಮಾಡಿ, ಸರಕಾರಕ್ಕೆ ಮಾಹಿತಿ ನೀಡಿದ್ದರು. ಅವರು ಈ ಬಗೆಗಿನ ವೀಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. 2020ರ ಫೆಬ್ರವರಿಯ ಬಳಿಕ ಅವರು ನಾಪತ್ತೆಯಾಗಿದ್ದರು. ಆಸ್ಪತ್ರೆ ಸಿಬಂದಿ ಜತೆಗೆ ಜಗಳ ಮಾಡಿದ್ದಾರೆ ಎಂಬ ಆರೋಪ ಹೊರಿಸಿ ಅವರನ್ನು ಚೀನ ಸರಕಾರ ಜೈಲಿಗೆ ತಳ್ಳಿತ್ತು.
ಕೊರೊನಾ ಬಗ್ಗೆ ಮಾಹಿತಿ ಮತ್ತು ವೀಡಿಯೋ ಹಂಚಿಕೊಂಡಿದ್ದ ಚಿನ್ ಕ್ವಿಶಿ ಮತ್ತು ಲಿ ಝೆಹುವಾ ಎಂಬ ಇಬ್ಬರನ್ನು ಬಂಧಿಸಲಾಗಿತ್ತಾದರೂ, ಅಲ್ಪಾವಧಿಯಲ್ಲಿಯೇ ಅವರನ್ನು ಬಿಡುಗಡೆ ಮಾಡಲಾಗಿತ್ತು.