Advertisement

ಚಿರು ಕುಟುಂಬಕ್ಕೆ ವಿಶೇಷ ಉಡುಗೊರೆ ಕೊಟ್ಟ ಅಭಿಮಾನಿ

09:48 PM May 23, 2021 | Team Udayavani |

ಮೇ 22ಕ್ಕೆ ಚಿರು ಪುತ್ರ ಜನಿಸಿ ಏಳು ತಿಂಗಳು ಕಳೆದಿವೆ. ಈ ವಿಶೇಷವಾಗಿ ಅಭಿಮಾನಿಗಳು ಜೂನಿಯರ್‌ ಚಿರುಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ. ಮಗನಿಗೆ ಏಳು ತಿಂಗಳು ತುಂಬಿದ ಸಂತಸವನ್ನು ನಟಿ ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಜೊತೆಗೆ ಅಭಿಮಾನಿಯೊಬ್ಬರು ರಚಿಸಿದ ಫೋಟೋವನ್ನು ಸಹ ಶೇರ್ ಮಾಡಿದ್ದರು.

Advertisement

ಈ ಫೋಟೋದಲ್ಲಿ ಚಿರಂಜೀವಿ, ಮೇಘನಾ ರಾಜ್ ಹಾಗೂ ಅವರ ಮಗು ಒಟ್ಟಿಗೆ ಇರುವಂತೆ ಭಾವನಾತ್ಮಕವಾಗಿ ರಚಿಸಲಾಗಿದೆ. ಮೇಘನಾ ಶೇರ್ ಮಾಡಿದ್ದ ಈ ಫೋಟೋ ವೈರಲ್ ಆಗಿದೆ.

ಅಕ್ಟೋಬರ್ 22 ರಂದು ಚಿರು-ಮೇಘನಾ ರಾಜ್ ದಂಪತಿಗೆ ಗಂಡು ಮಗು ಜನಿಸಿತು. ಕಳೆದ ತಿಂಗಳು ಚಿರು ಪುತ್ರನಿಗೆ ಆರು ತಿಂಗಳು ಪೂರೈಸಿದಾಗ ಮನೆಯಲ್ಲಿ ಸದಸ್ಯರೆಲ್ಲರು ಸೇರಿ ಸಂಭ್ರಮಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next