Advertisement

Paris; ಸಂಗೀತ ಕಾರ್ಯಕ್ರಮದಲ್ಲಿ ಭಾರತೀಯ ಗಾಯಕನ ಮೇಲೆ ಮೊಬೈಲ್ ಎಸೆತ!

04:49 PM Sep 22, 2024 | Team Udayavani |

ಪ್ಯಾರಿಸ್: ಇಲ್ಲಿ ಸ್ನಾಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾರತದ ಗಾಯಕ ದಿಲ್ಜಿತ್ ದೋಸಾಂಜ್ ಅವರ ಮೇಲೆ ಪ್ರೇಕ್ಷಕರ ವಲಯದಿಂದ ಯಾರೋ ಒಬ್ಬರು ಸ್ಮಾರ್ಟ್‌ಫೋನ್ ಎಸೆದಿದ್ದಾರೆ. ಘಟನೆ ಬಳಿಕ ಪಂಜಾಬಿ ಗಾಯಕ ದಿಲ್ಜಿತ್ ಅವರ ಶಾಂತ ರೀತಿಯ ಪ್ರತಿಕ್ರಿಯೆಯು ಆನ್‌ಲೈನ್‌ನಲ್ಲಿ ಹಲವರ ಹೃದಯಗಳನ್ನು ಗೆಲ್ಲುತ್ತಿದೆ.

Advertisement

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ದೋಸಾಂಜ್ ಅವರು ತನ್ನ ಜನಪ್ರಿಯ ಹಾಡು “ಪಟಿಯಾಲಾ ಪೆಗ್” ಪ್ರದರ್ಶನ ನೀಡುತ್ತಿದ್ದ ವೇಳೆ ಮೊಬೈಲ್ ವೇದಿಕೆಯ ಮೇಲೆ ಬೀಳುವುದನ್ನು ಕಾಣಬಹುದು. ನಂತರ ದಿಲ್ಜಿತ್ ದೋಸಾಂಜ್ ಅದನ್ನು ಎತ್ತಿಕೊಂಡು ತನ್ನ ಕಡೆಗೆ ಸ್ಮಾರ್ಟ್‌ಫೋನ್ ಎಸೆದ ಅಭಿಮಾನಿಯೊಂದಿಗೆ ಮಾತನ್ನೂ ಆಡಿದ್ದಾರೆ.

ದೋಸಾಂಜ್ “ನಿನ್ನ ಫೋನ್ ನೋಡಿಕೊಳ್ಳು, ಪಾಜಿ. ಈ ರೀತಿ ಮಾಡಿ ಕ್ಷಣವನ್ನು ಹಾಳು ಮಾಡಬೇಡ. ಇದನ್ನು ಮಾಡಬೇಡ ಸಹೋದರ.  ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನಿನ್ನ ಫೋನ್ ಅನ್ನು ಏಕೆ ಒಡೆಯುತ್ತಿದ್ದೀಯಾ ? ನಾನು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಆದರೆ ಈ ರೀತಿ ಮಾಡಬೇಡ ” ಎಂದು ಮೈಕ್ರೊಫೋನ್ ಮೂಲಕ  ಶಾಂತ ರೀತಿಯಲ್ಲಿ ಹೇಳಿ,ತಾನು ಧರಿಸಿದ್ದ ಜಾಕೆಟ್ ಬಿಚ್ಚಿ ಆತನಿಗೆ ಕೊಟ್ಟು ಎಲ್ಲರ ಮನ ಗೆದ್ದಿದ್ದಾರೆ.

ದಿಲ್ಜಿತ್ ದೋಸಾಂಜ್ ಪಂಜಾಬಿ ಮತ್ತು ಹಿಂದಿ ಚಿತ್ರರಂಗದ ಗಾಯಕ, ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next