Advertisement
-ಫ್ಯಾನ್‌ನ ಕಾರಣದಿಂದ, ಕೋಣೆಯಲ್ಲಿ ಗಾಳಿ ಸದಾ ಚಲನೆಯಲ್ಲಿರುತ್ತದೆ. ಆಗ, ಗಾಳಿಯಲ್ಲಿನ ಧೂಳು, ಮೂಗಿನೊಳಗೆ ಸೇರುವ ಸಂಭವ ಹೆಚ್ಚಿದ್ದು, ಶ್ವಾಸಕೋಶದ ಅಲರ್ಜಿಯುಂಟಾಗುವ ಅಪಾಯವೂ ಹೆಚ್ಚಿರುತ್ತದೆ.
Related Articles
Advertisement
-ಬಾಯಿಯನ್ನು ಸಂಪೂರ್ಣ ಮುಚ್ಚದೇ ಮಲಗಿದರೆ, ಗಾಳಿಯಲ್ಲಿ ತೇಲಿ ಬರುವ ಕ್ರಿಮಿ ಕೀಟಗಳು ಬಾಯಿಯ ಮೂಲಕ ದೇಹ ಸೇರುವ ಸಾಧ್ಯತೆ ಹೆಚ್ಚಿರುತ್ತದೆ.
-ಶೀತ ದೇಹದವರಿಗೆ ಕೃತಕ ಗಾಳಿ ಒಗ್ಗುವುದೇ ಇಲ್ಲ. ಯಾಕೆಂದರೆ, ಗಾಳಿಯಿಂದ ಮೂಗು ಕಟ್ಟಿ, ಉಸಿರಾಟಕ್ಕೆ ತೊಂದರೆ ಆಗುತ್ತದೆ. -ಕೃತಕ ಗಾಳಿಯಿಂದಾಗಿ ಮೂಗಿನ ಮೇಲ್ಭಾಗವು ಒಣಗಿ, ಕಫದ ರೀತಿ ಲೋಳೆ ಉತ್ಪಾದನೆಯಾಗಿ ಉಸಿರಾಟಕ್ಕೆ ಅಡಚಣೆಯಾಗಬಹುದು.
-ದೇಹದಲ್ಲಿ ಸ್ವಲ್ಪ ಸುಸ್ತು, ಸ್ನಾಯು ಸೆಳೆತ ಕಾಣಿಸಿಕೊಂಡರೂ ಮೊದಲು ನೆನಪಾಗುವುದು ಮೇಜಿನ ಮೇಲಿನ ಪುಟ್ಟ ಟೇಬಲ್ ಫ್ಯಾನ್. ಅದನ್ನು ಆನ್ ಮಾಡಿದಾಗ ತಕ್ಷಣದಲ್ಲಿ ಹಾಯ್ ಎನಿಸಿದರೂ, ಅತಿ ಹತ್ತಿರದಿಂದ ಕೃತಕ ಗಾಳಿ ಸೇವಿಸುವುದರಿಂದ ಭವಿಷ್ಯದಲ್ಲಿ ಶಾಶ್ವತ ಸ್ನಾಯು ಸೆಳೆತ ಉಂಟಾಗಬಹುದು ಅನ್ನುತ್ತವೆ ಸಂಶೋಧನೆಗಳು.
-ಪುಷ್ಪಾ