Advertisement

Prabha Atre: ಖ್ಯಾತ ಹಿಂದೂಸ್ತಾನಿ ಗಾಯಕಿ ಪ್ರಭಾ ಅತ್ರೆ ನಿಧನ

08:59 PM Jan 13, 2024 | Team Udayavani |

ಪುಣೆ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕಿ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತೆ, ಡಾ.ಪ್ರಭಾ ಅತ್ರೆ (92) ಹೃದಯಸ್ತಂಭನದಿಂದ ನಿಧನ ಹೊಂದಿದ್ದಾರೆ. ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು.

Advertisement

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕಿರಾನ ಘರಾನ ಶಾಖೆಯ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಭಾ ಅತ್ರೆ ಕೂಡ ಒಬ್ಬರು. ಇವರಿಗೆ ಪದ್ಮ ಸರಣಿಯ ಮೂರು ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣಗಳು ಪ್ರಾಪ್ತವಾಗಿವೆ. ಶನಿವಾರ ಮುಂಜಾನೆ ಮಲಗಿದ್ದಾಗ, ನಿದ್ರೆಯಲ್ಲೇ ಅವರಿಗೆ ಹೃದಯಸ್ತಂಭನ ಸಂಭವಿಸಿದೆ. ಅವರನ್ನು ಕೂಡಲೇ ದೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ 5.30ಕ್ಕೆ ಅವರು ನಿಧನ ಹೊಂದಿದ್ದಾರೆಂದು ಪ್ರಕಟಿಸಲಾಯಿತು.

ಶನಿವಾರ ಅವರು ಸ್ವರಪ್ರಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂಬೈಗೆ ಸಂಚರಿಸಬೇಕಿತ್ತು. 1932, ಸೆ.13ರಂದು ಹುಟ್ಟಿದ ಅವರು, ಬಹುಮುಖ ಪ್ರತಿಭೆಯಿಂದ ಹೆಸರು ಮಾಡಿದ್ದಾರೆ. ಶಿಕ್ಷಣತಜ್ಞೆ, ಸಂಶೋಧನೆ, ಸಂಗೀತಸಂಯೋಜನೆ, ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next