ಸುಮಾರು 14 ತಿಂಗಳ ಹಿಂದೆ ಲಂಡನ್‌ನ ವಿಟ್ಟಿಂಗ್ಟನ್ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಜೋಡಿ ಸ್ಕಾ éಡನ್ ಅವರು ದಾಖಲಾಗಿದ್ದರು. ಆದರೆ ಅವರು ಪ್ರಸವಿಸಿದ ಮಗು ಉಸಿರಾಡುತ್ತಿರಲಿಲ್ಲ. ಡಾ| ನಿಶ್ಚಲ ರಾವ್ ಅದೇ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ಅದರಲ್ಲೂ ಅವಧಿಪೂರ್ವ ಜನಿಸಿದ ಮಕ್ಕಳ ಚಿಕಿತ್ಸೆಯಲ್ಲಿ ವಿಶೇಷಜ್ಞ.
Advertisement
ಮಗು ಸತ್ತು ಹೋಗಿದೆ ಎಂದು ಎಲ್ಲರೂ ಭಾವಿಸಿದ್ದರೂ ಡಾ| ನಿಶ್ಚಲ ರಾವ್ ಮತ್ತವರ ತಂಡ ಅಗತ್ಯ ತುರ್ತು ಚಿಕಿತ್ಸೆಗಳನ್ನು ಒದಗಿಸಿದರು. ಮಗು ಉಸಿರಾಟ ಆರಂಭಿಸಿತು; ಈಗ ಆರೋಗ್ಯವಾಗಿದೆ.
Related Articles
ಈ ವಿಷಯವನ್ನು ವೈದ್ಯರು ಮರೆತು ಬಿಟ್ಟಿದ್ದರು. ಆದರೆ ತಾಯಿ ಮತ್ತು ತಂದೆ ಬಿಬಿಸಿ ಸುದ್ದಿ ಸಂಸ್ಥೆಗೆ ಈ ಮಾಹಿತಿ ನೀಡಿದರು. ಬಿಬಿಸಿ ಡಾ| ನಿಶ್ಚಲ ರಾವ್ ಅವರನ್ನು ಕರೆಸಿ ಸಂದರ್ಶನ ನಡೆಸಿದ್ದು, ಇದು ಜು. 3ರಂದು ಬಿತ್ತರವಾಯಿತು. ಸಂದರ್ಶನದಲ್ಲಿ ಡಾ| ರಾವ್ ಅವರು ತಾನು ಮತ್ತು ತಂಡ ಹೇಗೆ ಮಗುವಿಗೆ ಚಿಕಿತ್ಸೆ ನೀಡಿತೆಂದು ವಿವರಿಸಿದ್ದಾರೆ. ಇದಾದ ಬಳಿಕ ಆಸ್ಪತ್ರೆಯ ಆಡಳಿತದವರು ಡಾ| ನಿಶ್ಚಲ ರಾವ್ ಅವರಿಗೆ “ವಿಸ್ಮಯ ವೈದ್ಯ’ (ಅಮೇಜಿಂಗ್ ಡಾಕ್ಟರ್) ಎಂದು ಗೌರವಿಸಿದ್ದಾರೆ. “ನಾನೊಬ್ಬನೇ ಈ ಸಾಧನೆ ಮಾಡಿಲ್ಲ, ನಮ್ಮ ತಂಡ ಈ ಕೆಲಸ ಮಾಡಿದೆ’ ಎಂದು ಡಾ| ನಿಶ್ಚಲ ರಾವ್ ಹೇಳಿದ್ದಾರೆ.
Advertisement
ಇದು ಪ್ರಕೃತಿ ಸಹಜವೆ?ಚಿತ್ರದಲ್ಲಿರುವುದು ಆರಂಭದಲ್ಲಿ ಉಸಿರಾಟ ನಡೆಸದ, ಪ್ರಸ್ತುತ ಆರೋಗ್ಯವಾಗಿರುವ ಮಗು, ಚಿಕಿತ್ಸೆ ನೀಡಿದ ಡಾ| ನಿಶ್ಚಲ ರಾವ್, ಮಗುವಿನ ತಂದೆ ತಾಯಿ ಜತೆಗಿದ್ದಾರೆ. ಮಗು ಆರಂಭದಲ್ಲಿ ಉಸಿರಾಡುತ್ತಿರಲಿಲ್ಲ, ಈಗ ಅದು (ತನಗೆ ಉಸಿರಾಟ ಕಲ್ಪಿಸಿದ ವೈದ್ಯರು ಇರುವುದು ಗೊತ್ತಿಲ್ಲದೆ) ತಂದೆಯ ಮೂಗನ್ನು ಹಿಡಿದುಕೊಂಡು ಉಸಿರಾಟವನ್ನು ನಿಲ್ಲಿಸುವ ಸಂಕೇತ ನೀಡಿದಂತಿದೆ.