Advertisement

28 ದಿನಗಳ ಆಸ್ಪತ್ರೆ ವಾಸದಿಂದ ಮನೆಗೆ ಮರಳಿದ ಲತಾ ದೀದಿ ; ಏನಾಗಿತ್ತು ಈ ಲೆಜಂಡರಿ ಗಾಯಕಿಗೆ?

10:12 AM Dec 09, 2019 | Hari Prasad |

ಮುಂಬಯಿ: ಉಸಿರಾಟದ ತೊಂದರೆಯಿಂದಾಗಿ ಗಂಭೀರ ಆರೋಗ್ಯ ಸ್ಥಿತಿಯಲ್ಲಿ ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಬಹುಭಾಷಾ ಗಾಯಕಿ ಲತಾ ಮಂಗೇಶ್ಕರ್ ಅವರು ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಲತಾ ಅವರನ್ನು ನವಂಬರ್ 11ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲತಾ ಅವರಲ್ಲಿ ನ್ಯುಮೋನಿಯಾ ಸಮಸ್ಯೆ ಕಾಣಿಸಿಕೊಂಡಿದ್ದ ಕಾರಣ ಸುಮಾರು ಮೂರು ವಾರಗಳ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

Advertisement


‘ಕಳೆದ 28 ದಿನಗಳನ್ನು ನಾನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ನನಗೆ ನ್ಯುಮೋನಿಯಾ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ನಾನು ಸಂಪೂರ್ಣ ಗುಣಮುಖಳಾಗುವತನಕ ಆಸ್ಪತ್ರೆಯಲ್ಲೇ ಇರುವಂತೆ ಇಲ್ಲಿನ ವೈದ್ಯರು ನನಗೆ ಸಲಹೆ ನೀಡಿದ್ದರು. ಇದೀಗ ಮಾಯಿ ಮತ್ತು ಬಾಬಾ ಅವರ ಆಶೀರ್ವಾದದಿಂದ ನಾನು  ಗುಣಮುಖಳಾಗಿದ್ದೇನೆ. ನನ್ನ ಆರೋಗ್ಯ ಸುಧಾರಣೆಗಾಗಿ ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮ ಪ್ರಾರ್ಥನೆ ಮತ್ತು ಹಾರೈಕೆಗಳು ಫಲನೀಡಿದೆ ನಿಮ್ಮ ಪ್ರೀತಿಗೆ ನಾನು ತಲೆಬಾಗುತ್ತೇನೆ’ ಎಂದು ಲತಾ ಮಂಗೇಶ್ಕರ್ ಅವರು ತಮ್ಮ ಆರೋಗ್ಯ ಸಮಸ್ಯೆ, ಆಸ್ಪತ್ರೆ ವಾಸ ಮತ್ತು ಇದೀಗ ಗುಣಮುಖರಾಗಿ ಮನೆಗೆ ಬಂದಿರುವ ವಿಷಯವನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮಾತ್ರವಲ್ಲದೇ ಆಸ್ಪತ್ರೆಯಲ್ಲಿ ತನ್ನನ್ನು ಆರೈಕೆ ಮಾಡಿದ ವೈದ್ಯರ ತಂಡಕ್ಕೂ ಸಹ ಲತಾ ಅವರು ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅವರೆಲ್ಲರ ಹೆಸರುಗಳನ್ನು ಟ್ವೀಟ್ ನಲ್ಲಿ ನಮೂದಿಸಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುವ ಮೂಲಕ ಈ ಲೆಜಂಡರಿ ಗಾಯಕಿ ವೈದ್ಯರ ಸೇವೆಯನ್ನು ವಿಶೇಷವಾಗಿ ಸ್ಮರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next