Advertisement

ಕುಟುಂಬ ಸುರಕ್ಷಾ ಅಭಿಯಾನ

03:32 PM Jan 12, 2020 | Team Udayavani |

ತಾವರಗೇರಾ: ಮಹಿಳೆಯರ ಒಡೆತನದಲ್ಲಿರುವ ಕುಟುಂಬ ನಿರ್ವಹಣೆ ಮತ್ತು ಸುಧಾರಣೆಗೆ ಆರ್ಥಿಕವಾಗಿ ಸಬಲರಾಗಲು ಪ್ರಾರಂಭ ಸಂಸ್ಥೆಯು ನೂತನ ಯೋಜನೆ ಕೈಗೊಂಡಿದೆ ಎಂದು ಪ್ರಾರಂಭ ಸಂಸ್ಥೆಯ ಕುಷ್ಟಗಿ ಶಾಖೆಯ ವ್ಯವಸ್ಥಾಪಕಿ ಜಯಂತಿ ಹೇಳಿದರು.

Advertisement

ಸಮೀಪದ ನವಲಹಳ್ಳಿ ಗ್ರಾಮದಲ್ಲಿ ಸಮೂಹ ಅಂಗ ಸಂಸ್ಥೆಯಾದ ಪ್ರಾರಂಭ ಸಂಸ್ಥೆಯವರು ಹಮ್ಮಿಕೊಂಡಿದ್ದ ಮುಂಜಾವು ಕುಟುಂಬ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಕಿರು ಸಾಲ ನೀಡುವ ಮೂಲಕ ಅವರನ್ನು ಆರ್ಥಿವಾಗಿ ಸದೃಢಗೊಳಿಸಲಾಗುವುದುಮತ್ತು ಸಾಲ ನೀಡಿದ ಹಣವನ್ನು ಅವರ ಖಾತೆ ಮೂಲಕ ನಿರ್ವಹಣೆ ಮಾಡಿ ಉದ್ಯಮಗಳ ಗಾತ್ರವನ್ನು ಹೆಚ್ಚಿಸಲಾಗುವುದು. ಮಹಿಳೆಯರ ಹೆಸರಿನಲ್ಲಿ ಕಿರು ಉದ್ಯಮ ಸ್ಥಾಪನೆ ಮತ್ತು ಈಗಾಗಲೇ ನಡೆಸುತ್ತಿರುವ ಕಿರು ಉದ್ಯಮವನ್ನು ಉನ್ನತಿಗೊಳಿಸಲು ಅಭಿಯಾನ ಮೂಲಕ ಗುರುತಿಸಲಾಗುತ್ತಿದೆ ಎಂದು ಹೇಳಿದರು.

ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಾ ತಂಡದಿಂದ ಹಣ ಉಳಿತಾಯ ಮತ್ತು ಮಹಿಳೆಯರಆರ್ಥಿಕ ಸಬಲೀಕರಣ ಗೀತೆಗಳನ್ನು ಹಾಡುವ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಕುಷ್ಟಗಿ ಶಾಖೆಯ ತರಬೇತಿದಾರ ಮೇಘರಾಜ, ಕ್ಲಸ್ಟರ್‌ ಮ್ಯಾನೇಜರ್‌ ಶರಣಬಸವ ಕುಷ್ಟಗಿ, ಗ್ರಾಪಂ ಸದಸ್ಯ ದೊಡ್ಡಬಸವ ಪಾಟೀಲ್ , ತಿಮ್ಮಣ್ಣ ಕುರನಾಳ, ಕಲಾವಿದರಾದ ದೇವಪ್ಪ, ನೇತ್ರಾ, ಸಾವಿತ್ರಿ. ಶರಣಪ್ಪ,ಶರಣಯ್ಯ, ಪಂಪಾಪತಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next