Advertisement

ಸಂಸಾರ ಸದನದಲ್ಲಿ ರಂಗವೈಭವ

12:23 PM Mar 31, 2019 | Lakshmi GovindaRaju |

ಕೆಂಗೇರಿ: ನಿರಂತರ ರಂಗ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಕೆಂಪೇಗೌಡನಗರದ ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘವು ವಿಶ್ವ ರಂಗಭೂಮಿ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು.

Advertisement

ಮುದ್ದಯ್ಯನಪಾಳ್ಯದ ರಂಗ ಪರಂಪರೆ ಟ್ರಸ್ಟ್‌, ತುಮಕೂರಿನ ಅಮರೇಶ್ವರ ವಿಜಯ ನಾಟಕ ಮಂಡಳಿ, ನಾಟಕಮನೆ, ಬೆಂಗಳೂರಿನ ತ್ರಿಮೂರ್ತಿ ಕಲಾಕೂಟ ಹಾಗೂ ರಂಗಹಿತ ಕಲಾತಂಡ, ಕಾಚೋಹಳ್ಳಿಯ ರಂಗಸೇತುವೆ ಟ್ರಸ್ಟ್‌ ತಂಡಗಳ ಜತೆಗೂಡಿ ಕಲಾ ಸಂಘವು ಈ ಕಾರ್ಯಕ್ರಮ ಆಯೋಜಿಸಿತ್ತು.

ಕೆಂಪೇಗೌಡನಗರದ ಸಂಸಾರ ಸದನ ಕಲಾ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ನಡೆದ ಕಾರ್ಯಕ್ರಮದಲ್ಲಿ ವಿಚಾರ ವಿನಿಮಯ ಮಾಡಿಕೊಂಡ ರಂಗಭೂಮಿ ತಜ್ಞರು, ರಂಗಭೂಮಿ ಇತಿಹಾಸ ತಿಳಿಸಿಕೊಟ್ಟರು.

ಸಂಜೆ 6 ಗಂಟೆಯಿಂದ ರಾತ್ರಿ 11ರವರೆಗೂ ನಡೆದ ಸಾಂಸ್ಕೃತಿಕ ಸಂಭ್ರಮದಲ್ಲಿ “ವರಭ್ರಷ್ಟ’, “ಸ್ವರ್ಣಮೂರ್ತಿ’, “ಸುಯೋಧನ’ (ಪೌರಾಣಿಕ), “ರಣದುಂಧುಬಿ’, “ಎಚ್ಚಮ್ಮನಾಯಕ’, “ವಜ್ರ ಪಂಜರ’ (ಐತಿಹಾಸಿಕ), “ಪಡೆದದ್ದು-ಕಳೆದದ್ದು’ (ಸಾಮಾಜಿಕ) ನಾಟಕಗಳು ಪ್ರದರ್ಶನಗೊಂಡವು. ಇದರೊಂದಿಗೆ ಭರತನಾಟ್ಯ, ಜಾನಪದ ನೃತ್ಯ, ಜಾತ್ರಾ ಕುಣಿತ, ಪೂಜಾ ಕುಣಿತ ಸೇರಿ 15ಕ್ಕೂ ಹೆಚ್ಚು ತಂಡಗಳು ಪ್ರೇಕ್ಷಕರ ಮನರಂಜಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next