Advertisement

30-35 ಸಾವಿರ ರೂ. ಕೌಟುಂಬಿಕ ಪಿಂಚಣಿ! 

12:03 AM Aug 26, 2021 | Team Udayavani |

ಹೊಸದಿಲ್ಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕೌಟುಂಬಿಕ ಪಿಂಚಣಿಯನ್ನು ಏರಿಕೆ ಮಾಡಿರುವ ಕೇಂದ್ರ ಸರಕಾರ, ನೌಕರರಿಗೆ ಸಿಹಿ ಸುದ್ದಿ ನೀಡಿದೆ.

Advertisement

ಇನ್ನು ಮುಂದೆ ಪಿಂಚಣಿ ಪಡೆಯುತ್ತಿದ್ದ ಬ್ಯಾಂಕ್‌ ಉದ್ಯೋಗಿಯೊಬ್ಬರು ಸಾವನ್ನಪ್ಪಿದರೆ ಅವರು ಕರ್ತವ್ಯದಲ್ಲಿದ್ದ ವೇಳೆ ಕೊನೆಯದಾಗಿ ಪಡೆದ ವೇತನದ ಶೇ. 30ರಷ್ಟನ್ನು ಅವರ ಪತ್ನಿಗೆ ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. ಅಂದರೆ ಗರಿಷ್ಠ 30 ಸಾವಿರದಿಂದ 35 ಸಾವಿರ ರೂ. ಪಿಂಚಣಿಯಾಗಿ ಪಡೆಯಬಹುದು ಎಂದು ಹಣಕಾಸು ಸೇವೆಗಳ ವಿಭಾಗದ ಕಾರ್ಯದರ್ಶಿ ದೇಬಶಿಶ್‌ ಪಾಂಡ ತಿಳಿಸಿದ್ದಾರೆ. ಇದುವರೆಗೆ ಕೌಟುಂಬಿಕ ಪಿಂಚಣಿಯಾಗಿ ಗರಿಷ್ಠ 9,284 ರೂ. ನೀಡಲಾಗುತ್ತಿತ್ತು.

ಈಗ ಈ ಮಿತಿಯನ್ನು ತೆಗೆದುಹಾಕಲಾಗಿದೆ. ಇದಕ್ಕೆ ಬದಲಾಗಿ ಎಲ್ಲ ಉದ್ಯೋಗಿಗಳಿಗೂ ಅನ್ವಯವಾಗುವಂತೆ ಶೇ. 30ರಷ್ಟು ಪಿಂಚಣಿ ನೀಡಲು ನಿರ್ಧರಿಸಲಾಗಿದೆ. ಈ ಮೊದಲು ಕೌಟುಂಬಿಕ ಪಿಂಚಣಿಯನ್ನು 3 ಹಂತಗಳಲ್ಲಿ ನಿಗದಿ ಮಾಡ ಬಹುದು ಎಂದು ಇಂಡಿಯನ್‌ ಬ್ಯಾಂಕಿಂಗ್‌ ಅಸೋಸಿಯೇಶನ್‌ ಶಿಫಾರಸು ಮಾಡಿತ್ತು. ಅಂದರೆ ಶೇ. 15, ಶೇ. 20 ಮತ್ತು ಶೇ. 30 ಎಂದು ಸ್ಲಾéಬ್‌ ಮಾಡುವಂತೆ ಹೇಳಿತ್ತು. ಆದರೆ ಕೇಂದ್ರ ಸರಕಾರ ಎಲ್ಲರಿಗೂ ಒಂದೇ ಸ್ಲಾéಬ್‌ ಆಗಿ ಶೇ. 30ರಷ್ಟನ್ನು ನಿಗದಿ ಮಾಡಿದೆ. ಹಾಗೆಯೇ ಎನ್‌ಪಿಎಸ್‌ನಲ್ಲಿನ ಉದ್ಯೋಗದಾತರ ಕೊಡುಗೆಯನ್ನು ವೇತನದ ಶೇ. 10ರಿಂದ ಶೇ. 14ಕ್ಕೆ ಏರಿಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next