Advertisement

ಫ್ಯಾಮಿಲಿ ಮೆನ್‌-2ಗೆ ಸ್ಯಾಂಡಲ್‌ವುಡ್‌ ಫಿದಾ

04:29 PM Jun 09, 2021 | Team Udayavani |

ಬೆಂಗಳೂರು: ಸದ್ಯ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರುವ ಬಹುತೇಕ ಸ್ಟಾರ್ ತಮ್ಮ ದಿನದ ಬಹುಭಾಗವನ್ನು ಸಿನಿಮಾ ನೋಡುವುದರಲ್ಲಿ ಕಳೆಯುತ್ತಿದ್ದಾರೆ. ಅದರಲ್ಲೂ ಸದ್ಯದ ಮಟ್ಟಿಗೆ ಥಿಯೇಟರ್‌ಗಳು ಬಂದ್‌ ಆಗಿರುವುದರಿಂದ, ಓಟಿಟಿ ಫ್ಲಾಟ್‌ ಫಾರ್ಮ್ ಗಳು ಬಹುತೇಕರಿಗೆ ವರದಾನವಾಗಿದೆ.  ಹೀಗಾಗಿ ಹಿಂದೆಂದಿಗಿಂತಲೂ ಓಟಿಟಿಯಲ್ಲಿ ವಿಭಿನ್ನ ಸಿನಿಮಾಗಳು, ಸೀರಿಸ್‌ಗಳ ಹುಡುಕಾಟ ಜೋರಾಗಿದೆ.

Advertisement

ಇನ್ನು ಇತ್ತೀಚೆಗಷ್ಟೇ ಅಮೇಜಾನ್‌ ಫ್ರೈಂನಲ್ಲಿ ಬಿಡುಗಡೆಯಾಗಿರುವ “ಫ್ಯಾಮಿಲಿಮೆನ್‌-2′ ಸರಣಿ ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿದ್ದು, “ಫ್ಯಾಮಿಲಿಮೆನ್‌-2’ಗೆ ಸ್ಯಾಂಡಲ್‌ವುಡ್‌ ಸಿನಿಮಂದಿಯೂ ಕೂಡ ಫಿದಾ ಆಗಿದ್ದಾರೆ. ಫ್ಯಾಮಿಲಿಮ್ಯಾನ್‌ ಬಗ್ಗೆ ತಮ್ಮ ಸೋಶಿಯಲ್‌ ಮೀಡಿಯಾ, ವಾಟ್ಸಾಪ್‌ ಸ್ಟೇಟಸ್‌ಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ಜೊತೆಗೆ ಸ್ಯಾಂಡಲ್‌ ವುಡ್‌ಮಂದಿ ಕೂಡಾ ಈ ತರಹದ ಅದ್ಧೂರಿ ಹಾಗೂ ಕುತೂಹಲ ಭರಿತ ವೆಬ್‌ ಸೀರಿಸ್‌ ಮಾಡುವ ಕುರಿತು ಚರ್ಚೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹಳೆಯದನ್ನು ಬಿಟ್ಟು ಬಿಡೋಣ… ಮುಗಿದ ಅಧ್ಯಾಯ ಕೆದಕಬೇಡಿ: ರಕ್ಷಿತ್‌ ಮನವಿ

ಆ್ಯಕ್ಷನ್‌ ಫ್ಯಾಮಿಲಿ ಡ್ರಾಮಾ ಆಗಿರುವ “ಫ್ಯಾಮಿಲಿ ಮೆನ್‌-2′ ಸರಣಿಯಲ್ಲಿ ಮನೋಜ್‌ ಬಾಜಪೇಯಿ, ಸಮಂತಾ ಅಕ್ಕಿನೇನಿ, ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಶರೀಬ್‌ ಹಾಶ್ಮಿ, ಶ್ರೇಯಾ ಧನ್ವಂತರಿ, ಸನ್ನಿ ಹಿಂದೂಜಾ, ಶಾಹಬ್‌ ಅಲಿ, ಆಶ್ಲೇಷ್‌ ಠಾಕೂರ್‌, ವೇದಾಂತ್‌ ಸಿನ್ಹ ಮೊದಲಾದ ಕಲಾವಿದರು “ಫ್ಯಾಮಿಲಿಮೆನ್‌-2′ ಸರಣಿಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next