Advertisement
ಪೆರ್ಲ : ವಾಸಯೋಗ್ಯ ಮನೆಯಂತೂ ಇಲ್ಲ. ಆದರೆ ಪ್ರಾಥಮಿಕ ಆವಶ್ಯಕತೆಗೆ ಶೌಚಾಲಯಚವೂ ಇಲ್ಲದೇ ಈಗಲೂ ತೆರೆದ ಪ್ರದೇಶಕ್ಕೆ ಹೋಗಬೇಕಾದ ಅಸಹಾಯಕ ಸ್ಥಿತಿ. ದುಡಿಯುವವರು ಯಾರೂ ಇಲ್ಲದೇ ಅತ್ಯಂತ ಶೋಚನೀಯ ಬಡ ಕುಟುಂಬವಾದ ಎಣ್ಮಕಜೆ ಗ್ರಾ.ಪಂ.12ನೇ ವಾರ್ಡು ಬಣುತ್ತಡ್ಕ ಸಮೀಪದ ರಂಗೊಚ್ಚಿ ಪರಿಶಿಷ್ಟ ಜಾತಿಯ ಲಕ್ಷ್ಮೀ, ವೃದ್ಧೆ ಅತ್ತೆ ಚೋಮಾರು ಹಾಗೂ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಮಗಳ ಜೀವನ ಬಹಳ ಸಂಕಷ್ಟಮಯವಾಗಿದೆ.
Related Articles
Advertisement
ಇವರಿಗೆ ಮನೆ ಶೌಚಾಲಯ ಲಭಿಸದ ಬಗ್ಗೆ ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ವೈ. ಅವರ ಗಮನ ಸೆಳೆದಾಗ ಅವರು, ಮೊದಲು ಪ್ಲಾನ್ ಫಂಡ್‌ನಿಂದ ಅನುದಾನ ನೀಡಲು ಸಾಧ್ಯವಾಗುತ್ತಿತ್ತು. ಅನಂತರ ಲೈಫ್ ಭವನ ಯೋಜನೆ ಬಂದ ಮೇಲೆ ಮನೆ ನಿರ್ಮಾಣಕ್ಕೆ ಅನುದಾನ ಲಭಿಸಬೇಕಾದರೆ ಹಲವಾರು ಮಾನದಂಡಗಳು ಇವೆ. ಆದ್ದರಿಂದ ಬಹಳಷ್ಟು ಮಂದಿಗೆ ಮನೆ ನಿರ್ಮಾಣಕ್ಕೆ ಅನುದಾನ ಲಭಿಸುವುದಿಲ್ಲ. ಇತ್ತೀಚೆಗೆ ಕೇಂದ್ರ ಸರಕಾರದ ಯೋಜನೆ ಪಿಎಂಎವೈ ಜಾರಿಯಾಗಿದ್ದು ಅದರ ಜವಾಬ್ದಾರಿ ಇರುವುದು ಗ್ರಾಮ ವಿಸ್ತರಣಾಧಿಕಾರಿಗೆ. ಆದರೆ ಅವರಿಗೆ ಶೌಚಾಲಯ ನಿರ್ಮಿಸಲು ಮುಂದಿನ ಯೋಜನೆಯಲ್ಲಿ ಅನುದಾನ ಇರಿಸಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಸಹಾಯ ಹಸ್ತಮನೆ ಮುರಿದು ಬಿದ್ದ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದು ಅದರ ವರದಿ ಬಂದಿಲ್ಲ. ವರದಿ ಬಂದಾಗ ಅದರ ಆಧಾರದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಸರಕಾರದ ಪಿಎಂಎವೈ ಯೋಜನೆಯ ಜಾಲತಾಣ ತೆರೆದಿಲ್ಲ . ಇದೀಗ ಮನವಿ ಮಾತ್ರ ಸ್ವೀಕರಿಸುವುದು ಎಂದು ಎಣ್ಮಕಜೆ ಪಂ.ಗ್ರಾಮ ವಿಸ್ತರಣಾಧಿಕಾರಿ ಹೇಳಿದರು. ಈ ಕುಟುಂಬದ ದುರವಸ್ಥೆಯ ಬಗ್ಗೆ ಜಿಲ್ಲಾ ಮೊಗೇರ ಸರ್ವಿಸ್ ಸೊಸೈಟಿ ಅಧ್ಯಕ್ಷ ಬಾಬು ಪಚ್ಲಂಪಾರೆ ಅವರ ಗಮನ ಸೆಳೆದಾಗ, ಆ ಬಡ ಕುಟುಂಬಕ್ಕೆ ಸಾಧ್ಯವಾಗುವ ಎಲ್ಲ ಸಹಾಯ ನೀಡಲಾಗುವುದು ಎಂದು ತಿಳಿಸಿದ್ದಾರೆ.