Advertisement

ಉಡುಪಿಗೆ ಬರಲಿದೆ ಕುಟುಂಬ ನ್ಯಾಯಾಲಯ 

12:30 AM Jan 21, 2019 | |

ಉಡುಪಿ: ಉಡುಪಿಗೆ ಸದ್ಯದಲ್ಲಿಯೇ ಕುಟುಂಬ ನ್ಯಾಯಾಲಯ ಬರಲಿದೆ. ಸರಕಾರ ಉಡುಪಿ, ಕೊಡಗು, ಉತ್ತರಕನ್ನಡ ಜಿಲ್ಲೆ ಸಹಿತ 13 ಜಿಲ್ಲೆಗಳಿಗೆ ಕುಟುಂಬ ನ್ಯಾಯಾ ಲಯವನ್ನು ಮಂಜೂರು ಮಾಡಿದೆ.

Advertisement

ಮೂಲ ಸೌಕರ್ಯಗಳ ಲಭ್ಯತೆ ಆಧರಿಸಿ ಈ ನ್ಯಾಯಾಲಯಗಳು ಆರಂಭವಾಗಲಿವೆ. ಹೊಸ ನ್ಯಾಯಾ ಲಯಕ್ಕೆ ಒಂದು ಕೋರ್ಟ್‌ ಹಾಲ್‌, ಎರಡು ಕಚೇರಿಗಳು, ನ್ಯಾಯಾಧೀಶರ ಕೊಠಡಿ ಸೇರಿ ಸುಮಾರು 2,000 ಚದರಡಿ ವಿಸ್ತೀರ್ಣದ ಕಟ್ಟಡ ಅಗತ್ಯವಿದೆ. 

ಹೊಸ ಕಟ್ಟಡ ನಿರ್ಮಾಣದ ವರೆಗೆ ಇರುವ ಕಟ್ಟಡಗಳ ಖಾಲಿ ಜಾಗದಲ್ಲಿ ಆರಂಭಿಸಲು ಅವಕಾಶವಿದ್ದರೂ ಉಡುಪಿ ನ್ಯಾಯಾಲಯ ಸಂಕೀರ್ಣ ದಲ್ಲಿ ಈಗಾಗಲೇ ಜಾಗದ ಕೊರತೆ ಇದೆ. ಒಂದೇ ಸಂಕೀರ್ಣದಲ್ಲಿ ಎಲ್ಲ ನ್ಯಾಯಾಲಯಗಳಿದ್ದರೆ ಅನು ಕೂಲ. ಈಗಿರುವ ನ್ಯಾಯಾಲಯ ಸಂಕೀರ್ಣದಲ್ಲಿ ಮೂರನೇ ಮಹಡಿ ನಿರ್ಮಿಸುವ ಪ್ರಸ್ತಾವವಿದೆ. 4.2 ಕೋ.ರೂ. ಅಂದಾಜು ವೆಚ್ಚದ ಈ ಕಟ್ಟಡಕ್ಕೂ ಸರಕಾರ ಅನುದಾನ ಮಂಜೂರು ಮಾಡಿದ ಬಳಿಕವೇ ಸಾಧ್ಯ. 

ಈ ರೀತಿ ಕುಟುಂಬ ನ್ಯಾಯಾ ಲಯಕ್ಕೆ ಸಂಬಂಧಿಸಿದ ಸುಮಾರು 750 ಪ್ರಕರಣಗಳು ಜಿಲ್ಲೆಯಲ್ಲಿ ಇರಬಹುದು ಎಂದು ಅಂದಾಜಿಸಬಹುದು. 

ಕುಟುಂಬ ನ್ಯಾಯಾಲಯಗಳು ಇಲ್ಲದ ಕಡೆ ಇತರ ನ್ಯಾಯಾಲಯಗಳೇ ವೈವಾಹಿಕ ಪ್ರಕರಣಗಳ ವಿಚಾರಣೆ ನಡೆಸುತ್ತವೆ. ಕುಟುಂಬ ನ್ಯಾಯಾಲಯ ಆರಂಭವಾದ ಬಳಿಕ ವೈವಾಹಿಕ ಪ್ರಕರಣಗಳ ಇತ್ಯರ್ಥಕ್ಕೆ ವೇಗ ಸಿಗುತ್ತದೆ. ಕುತೂಹಲದ ವಿಷಯವೆಂದರೆ, ವಿದ್ಯಾವಂತರು ಜಾಸ್ತಿಯಿರುವಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಿಗೆ ಇರುತ್ತವೆ.
 
ಇನ್ನೊಂದು ಜಿಲ್ಲಾ 
ನ್ಯಾಯಾಲಯ ಪ್ರಸ್ತಾವ

ಜಿಲ್ಲೆಯಲ್ಲಿ ಸುಮಾರು 2,800 ಪ್ರಕರಣಗಳು ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದು, ಇನ್ನೊಂದು ಜಿಲ್ಲಾ ನ್ಯಾಯಾಲಯದ ಸ್ಥಾಪನೆಯ ಪ್ರಸ್ತಾವವಿದೆ. 

Advertisement

ಕೌಟುಂಬಿಕ ಪ್ರಕರಣ ಶೀಘ್ರ ಇತ್ಯರ್ಥ
ಕುಟುಂಬ ನ್ಯಾಯಾಲಯದ ವ್ಯಾಪ್ತಿಯಲ್ಲಿ ವಿಶೇಷವಾಗಿ ವರದಕ್ಷಿಣೆ, ವಿಚ್ಛೇದನ ಇತ್ಯಾದಿ ವೈವಾಹಿಕ ಪ್ರಕರಣಗಳು ಸೇರಿರುತ್ತವೆ. ಉಡುಪಿ ಜಿಲ್ಲೆಯ ಒಟ್ಟು 17 ನ್ಯಾಯಾಲಯಗಳಲ್ಲಿ 12,687 ಸಿವಿಲ್‌, 16,079 ಕ್ರಿಮಿನಲ್‌ ಸೇರಿ ಒಟ್ಟು 28,766 ಪ್ರಕರಣಗಳು ವಿಚಾರಣೆಯಲ್ಲಿವೆ. ಇವುಗಳಲ್ಲಿ ಮಹಿಳೆಯರು ಕೊಟ್ಟ ದೂರಿನ ಪ್ರಕರಣಗಳು 2,761 ಸಿವಿಲ್‌ ಮತ್ತು 837 ಕ್ರಿಮಿನಲ್‌ ಒಟ್ಟು 3,598 ಪ್ರಕರಣಗಳಿವೆ. ಇವುಗಳಲ್ಲಿ ವೈವಾಹಿಕ ಪ್ರಕರಣಗಳೂ ಸೇರಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next