Advertisement
ಹಾಗೆ ಗಮನಿಸಿದರೆ ಅಲ್ಲಿ ವೇದಿಕೆಯ ಮೇಲಿರುವ ಪ್ರತೀ ಕಲಾವಿದನೂ ಹಲವಾರು ಕಾರಣಗಳಿಂದ ಭಿನ್ನನಾಗಿರುತ್ತಾನೆ. ಭೌಗೋಳಿಕ, ಭೌತಿಕ, ಸಾಂಸ್ಕೃತಿಕ ಮತ್ತು ಎಲ್ಲಕ್ಕೂ ಮುಖ್ಯವಾಗಿ ಜಗತ್ತಿನ ಯಾವುದೇ ಪ್ರಕಾರದ ಸಂಗೀತವೂ ಮುಖ್ಯವಾಗಿ ಬಯಸುವ ಅಲೌಕಿಕ ಹಿನ್ನೆಲೆ, ಹೀಗೆ ಬಹಳಷ್ಟು ಕಾರಣದಿಂದ ಪ್ರತಿಯೊಬ್ಬ ಕಲಾವಿದನೂ ಭಿನ್ನನಾಗಿರುತ್ತಾನೆ. ತೊಡುವ ಬಟ್ಟೆ , ತಿನ್ನುವ ಆಹಾರ, ಕುಡಿಯುವ ವೈನು ಮತ್ತು ಆಲೋಚನೆಯ ಭಾಷೆ ಹೀಗೆ- ಈ ಎಲ್ಲವೂ ಪ್ರತಿಯೊಬ್ಬ ಕಲಾವಿದನಲ್ಲಿ ಭಿನ್ನವಾಗಿರುತ್ತದೆ. ಇದಕ್ಕೆಲ್ಲ ಮಿಗಿಲಾದದ್ದು ಸಂಗೀತದ ಹಿನ್ನೆಲೆ. ಅಲ್ಲಿ ವೇದಿಕೆಯ ಮೇಲೆ ನಿಂತ ಪ್ರತಿಯೊಬ್ಬ ಕಲಾವಿದನಿಗೂ ತನ್ನದೆ ಆದ ಸಂಗೀತದ ಭಾಷೆಯಿರುತ್ತದೆ ಮತ್ತು ತನ್ನದೇ ಪದ್ಧತಿಯ ಆಲೋಚನಾಪ್ರಕಾರವಿರುತ್ತದೆ. ಇಷ್ಟಾಗಿ ಇದೆಲ್ಲವನ್ನೂ ಮೀರಿ ಅವರೆಲ್ಲ ಅಲ್ಲಿ ಒಟ್ಟಾಗಿ ನಿಂತು ಅದ್ಭುತವೆನ್ನಿಸುವಂಥ ಸಂಗೀತವನ್ನು ಹೊಮ್ಮಿಸಬಲ್ಲರು. ಅಂಥ ಕಛೇರಿಯೊಂದನ್ನು ಮೊದಲ ಬಾರಿ ಕೇಳಿದ ಕೆಲವರಿಗೆ ಈ ಎಲ್ಲ ಕಲಾವಿದರೂ ಬಹುಶಃ ಹಿಂದಿನ ದಿನದ ಸಂಜೆಯೋ ಅಥವಾ ಆ ದಿನದ ಬೆಳಿಗ್ಗೆಯಷ್ಟೆ ಭೆಟ್ಟಿಯಾಗಿರುತ್ತಾರೆ, ಕೆಲವೊಮ್ಮೆ ಅದು ಅವರ ಮೊದಲ ಭೆಟ್ಟಿಯಾಗಿರುತ್ತದೆ ಮತ್ತು ಸಂಜೆಯ ಕಛೇರಿಯ ಸಮಯದವರೆಗೆ ಹೊಟೇಲಿನ ಕೋಣೆಯಲ್ಲಿ ತಮ್ಮ ವಾದ್ಯದ ಅಥವಾ ಸಂಗೀತದ ನಿತ್ಯಾಭ್ಯಾಸವನ್ನು ಮಾಡುತ್ತ ಮಧ್ಯಾಹ್ನದ ನಿ¨ªೆಯಲ್ಲಿ ಸಮಯ ಕಳೆದಿರುತ್ತಾರೆ ಎಂಬುದು ನಿಜಕ್ಕೂ ಗೊತ್ತಿರಲಿಕ್ಕಿಲ್ಲ.
Related Articles
Advertisement
ಮತ್ತೂಂದು ಬಗೆಯದ್ದು, ಮೇಲೆ ಹೇಳಿದಂಥ ಬಗೆಬಗೆಯ ಸಂಗೀತದ ಹಿನ್ನೆಲೆಯ ಕಲಾವಿದರ ಸಮ್ಮಿಲಿತ ಸಂಗೀತ. ಇದನ್ನೂ “ವಿಶ್ವಸಂಗೀತ’ ಎನ್ನುತ್ತಾರೆ. ಹಾಗಿದ್ದರೆ ನಿಜಕ್ಕೂ “ವಿಶ್ವಸಂಗೀತ’ ಎಂದರೇನು ಎಂಬ ಪ್ರಶ್ನೆ ಹುಟ್ಟುತ್ತದಾ ಎಂದು ಕೇಳಿದರೆ ಸಂಗೀತವೇ ವಿಶ್ವ ಎಂದು ಉತ್ತರಿಸುವುದು ಸರಿಯೇನೋ ಎನ್ನಿಸುತ್ತದೆ. ಯಾಕೆಂದರೆ, ಶಾಸ್ತ್ರೀಯ ಸಂಗೀತವನ್ನು ಬೌದ್ಧಿಕ ಸಂಗೀತವನ್ನಾಗಿ ಮಾಡುವ ಅದೇ ಕಲಾವಿದ ಸುಗಮಸಂಗೀತವನ್ನಾಗಿಯೂ ಪರಿವರ್ತಿಸಬಲ್ಲ.
ಸುಗಮಸಂಗೀತದಲ್ಲಿ ಬೌದ್ಧಿಕ ಕಸರತ್ತುಗಳಿಗೆ ಅಲ್ಲಲ್ಲಿ ಜಾಗ ಕೊಟ್ಟು ಯಶಸ್ವಿಯಾಗಬಲ್ಲ ಮತ್ತು ಅಂಥ ಅನಿವಾರ್ಯತೆ ನಮ್ಮಲ್ಲಿ ಜಾಗತೀಕರಣದ ಪ್ರಭಾವದಿಂದ ಅನೇಕ ವೇದಿಕೆಗಳಲ್ಲಿ ಸೃಷ್ಟಿಯಾಗಿಬಿಟ್ಟಿದೆ. ರಿಯಾಲಿಟಿ ಶೋ ಒಂದರಲ್ಲಿ ಮು¨ªಾದ ಪ್ರತಿಭೆಯ ಪುಟಾಣಿಯೊಬ್ಬಳು ಜಾಜ್ ಪ್ರಭಾವದ ಕಳ್ಳ ಚಂದಮಾಮನಂಥ ಹಾಡುಗಳನ್ನು ಹಾಡುತ್ತಾಳೆ, ಗಜಲ್ ಪ್ರಭಾವದ ತೀವ್ರಭಾವಗೀತೆಯನ್ನೂ ಹಾಡುತ್ತಾಳೆ ಜನಪದ ಗೀತೆಯನ್ನೂ ಹಾಡುತ್ತಾಳೆ. ಹಾಗೆ ಜನಪದ ಗೀತೆಯನ್ನು ಹಾಡುವಾಗ ರಾಜಸ್ಥಾನೀ ಶೈಲಿಯಲ್ಲಿ ಸಣ್ಣದೊಂದು ಆಲಾಪವನ್ನು ತಾರಸಪ್ತಕದಲ್ಲಿ ಝಲಕ್ ನಂತೆ ತೋರಿಸಿ ದಂಗುಬಡಿಸುತ್ತಾಳೆ. ಮತ್ತದೇ ಮಗುವಿನ ಫೇಸ್‌ಬುಕ್ ಪೇಜಿನಲ್ಲಿ ಆಕೆ ಹಾಡಿದ ಜನಪ್ರಿಯ ಪಾಪ್ ಶೈಲಿಯ ಹಾಡೊಂದು ವೈರÇÉಾಗಿರುತ್ತದೆ ಮತ್ತು ಇಂಥ ಅನೇಕ ಉದಾಹರಣೆಗಳು ನಾವು ಇಂದು ಮತ್ತು ಮುಂದಿನ ಸಂಗೀತದ ಜಗತ್ತನ್ನು ಅವಲೋಕಿಸುವ ವಿಧಾನಕ್ಕೆ ಹೊಸ ಆಯಾಮವನ್ನು ನೀಡುತ್ತವೆ.
ಇಂಥ ಸ್ಥಿತಿಯಲ್ಲಿ ವಿಶ್ವದ ವಿಭಿನ್ನ ಸಂಗೀತ ಪ್ರಕಾರಗಳು ಒಂದಲ್ಲ ಒಂದು ರೀತಿಯಲ್ಲಿ ಪರಸ್ಪರ ಕೂಡಿಕೊಳ್ಳುವ ವೇಗವು ಹಿಂದಿಗಿಂತ ಪ್ರಖರವಾಗಿ ಸಾಗುತ್ತಿದೆ. ಮತ್ತು ಹೀಗೆ ವಿಶ್ವಸಂಗೀತ ಎಂಬ ಪ್ರಕಾರವೊಂದು ಸದ್ದಿಲ್ಲದೆ ಕಳೆದ ಕೆಲವು ದಶಕಗಳಿಂದ ಮುಂದುವರೆಯುತ್ತಿರುವ ಟೆಕ್ನಾಲಜಿಯ ಶಕ್ತಿಯಿಂದ ಹದವಾಗಿ ಮೇಳೈಸುತ್ತ ವಿಕಾಸವಾಗುತ್ತಿದೆ ಎಂಬುದು ನಿಜಕ್ಕೂ ಕುತೂಹಲಕಾರಿ.
ಒಂದು ರಾಬರ್ಟ್ ಮುಗಾಬೆಯ ನಂತರ ಜಿಂಬಾಬ್ವೆಯ ಕಲಿಂಬಾ, ಇಂಬೀರದಂಥ ವಾದ್ಯಗಳು ಈ ವಿಶ್ವಸಂಗೀತದ ನಾದೋಪಾಸನೆಗೆ ಹೊಸ ಸಾಧ್ಯತೆಗಳನ್ನೂ ಅವಕಾಶವನ್ನೂ ಕಲ್ಪಿಸಲಿ ಮತ್ತು ಸಂಗೀತವು ರಂಜನೆಯ ಜೊತೆಗೆ ಬಾಂಧವ್ಯಕ್ಕೂ ಕಾರಣವಾಗಲಿ ಎಂದು ದಕ್ಷಿಣ ಆಫ್ರಿಕಾದ ಗಿಟಾರ್ ವಾದಕನೊಬ್ಬ ಇತ್ತೀಚೆಗೆ ನನ್ನೆದುರು ಕಪ್ಪು ಕಾಫಿ ಕುಡಿಯುತ್ತ ಹೇಳಿದಾಗ ಆ ಬಿಳೀ ಹಬೆಯ ಘಮಕ್ಕೆ ನಿಜಕ್ಕೂ ಒಂದು ಹಸನಾದ ಹದವಿತ್ತು!(ಲೇಖಕರು ಕತೆಗಾರ, ಆಯುರ್ವೇದ ವೈದ್ಯ. ಸಂಗೀತದ ಮೂಲಕ ರೋಗನಿದಾನದ ಸಾಧ್ಯತೆಯ ಪ್ರಯೋಗಗಳನ್ನು ದೇಶ-ವಿದೇಶದ ಹಲವೆಡೆಗಳಲ್ಲಿ ನಡೆಸಿದ್ದಾರೆ) – ಕಣಾದ ರಾಘವ