Advertisement
ವಕೀಲ ರಾಜ್ ಬಾಲಮ್ ಶರ್ಮಾ ಎಂಬವವರು, ಹಳೆಯ ವಸಾಹತು ಕಾಲದ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಖೇಹರ್ ನೇತೃತ್ವದ ನ್ಯಾಯಪೀಠ, 160 ಪುಟಗಳ ಅರ್ಜಿ ಸಲ್ಲಿಸಿದ್ದೀರಿ, ಅದನ್ನು ಓದಿದರೆ ಏನೊಂದೂ ಅರ್ಥವಾಗುವುದಿಲ್ಲ, ಎರಡೆರಡು ಬಾರಿ ಓದಿದರೂ ಗೊತ್ತಾಗಲಿಲ್ಲ. ವಸಾಹತು ಕಾಲದ ಕಾನೂನು ರದ್ದುಪಡಿಸಬೇಕೆಂದು ಹೇಳಿದ್ದೀರಿ. ಅಂತಹ ಯಾವ ಕಾನೂನಿಂದ ತೊಂದರೆಯಾಗುತ್ತಿದೆ ಹೇಳಿ. ಈ ಅರ್ಜಿಯಲ್ಲಿ ಏನೂ ಕಾಣುತ್ತಿಲ್ಲ ಎಂದು ಖಾರವಾಗಿ ಹೇಳಿತು. ಅಲ್ಲದೇ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕೆ ದಂಡ ವಿಧಿಸಿತು. ನಾಲ್ಕು ವಾರಗೊಳಗೆ ಈ ದಂಡ ಕಟ್ಟುವಂತೆ ಆದೇಶಿಸಿತು. Advertisement
ನಿಷ್ಪ್ರಯೋಜಕ ಪಿಐಎಲ್: ವಕೀಲಗೆ 1 ಲಕ್ಷ ರೂ. ದಂಡ
10:31 AM Jul 11, 2017 | |
Advertisement
Udayavani is now on Telegram. Click here to join our channel and stay updated with the latest news.