Advertisement

Nalin Kumar Kateel ವಿರುದ್ಧ ಸುಳ್ಳು ಸಂದೇಶ: ಕ್ರಮಕ್ಕೆ ಬಿಜೆಪಿ ಒತ್ತಾಯ

11:29 PM Jun 16, 2024 | Team Udayavani |

ಮಂಗಳೂರು: ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ವಿರುದ್ಧ ಜಾಲತಾಣಗಳಲ್ಲಿ ಮಾನಹಾನಿಕರ ಸಂದೇಶ ಹರಿಯಬಿಡುತ್ತಿರುವ ಅಜೀಝ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.

Advertisement

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾನಹಾನಿಕರವಾದ ಸುಳ್ಳು ಸಂದೇಶ ಪಸರಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಪುತ್ತೂರು ಠಾಣೆಯಲ್ಲಿ ದೂರು ದಾಖಲಾಗಿದೆ. ನಳಿನ್‌ ಅವರು ಪ್ರವೀಣ್‌ ನೆಟ್ಟಾರು ಅವರ ತಾಯಿ ಹಾಗೂ ಕುಟುಂಬದವರ ಪರವಾಗಿ ನಿಂತಿದ್ದು ಜೆಹಾದಿ ಮಾನಸಿಕತೆಯವರನ್ನು ರಾಷ್ಟ್ರೀಯ ತನಿಖಾ ದಳದವರು ಬಂಧಿಸುತ್ತಿದ್ದಾರೆ.

ಆದರೆ ಅಜೀಝ್ ನಳಿನ್‌ ಅವರ ತೇಜೋವಧೆ ಮಾಡುವ ಹುನ್ನಾರ ಮತ್ತು ಸಮಾಜದಲ್ಲಿ ಗೊಂದಲ ಉಂಟು ಮಾಡುವ ಉದ್ದೇಶದಿಂದ ಸಂದೇಶಗಳನ್ನು ರವಾನಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next