Advertisement

ಸರ್ಕಾರಕ್ಕೆ ಸುಳ್ಳು ಮಾಹಿತಿ: ತನಿಖೆ ನಡೆಸಲು ಆಗ್ರಹ

12:56 PM Aug 06, 2019 | Suhan S |

ಗದಗ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾನದಡಿ ನಡೆಯುವ ಗಜೇಂದ್ರಗಡದ ರಾಷ್ಟ್ರೀಯ ಜ್ಞಾನ ವಿಕಾಸ ಪಪೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಉಪನ್ಯಾಸಕರಿಲ್ಲ. ಆದರೂ, ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಅನುದಾನ ಪಡೆಯುತ್ತಿರುವ ಸಂಸ್ಥೆ ವಿರುದ್ಧ ತನಿಖೆ ನಡೆಸಿ, ಪರವಾನಗಿ ರದ್ದುಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ| ದಾದಾಸಾಹೇಬ ಎನ್‌. ಮೂರ್ತಿ ಸ್ಥಾಪಿತ) ಒತ್ತಾಯಿಸಿದೆ.

Advertisement

ಈ ಕುರಿತು ದಸಂಸ ಪ್ರಮುಖರು ಸೋಮವಾರ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ, 2013-14 ರಿಂದ 2018-19 ನೇ ಸಾಲಿನ ವರೆಗೆ ಸರಕಾರ ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳ ಸಂಖ್ಯೆ, ಉಪನ್ಯಾಸಕರಿಲ್ಲ. ನಿಗದಿತ ಕಟ್ಟಡ ಮೂಲ ಸೌಲಭ್ಯಗಳಾದ ಕೊಠಡಿಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಕ್ರೀಡೆಗೆ ಅನುಗುಣವಾಗಿ ಆಟದ ಮೈದಾನ ಇಲ್ಲದೇ ಕೇವಲ ನಾಮಕಾವಸ್ಥೆ ಎಂಬಂತೆ ನಡೆಯುತ್ತಿದೆ. ಆದರೆ, ಎಲ್ಲ ಸೌಲಭ್ಯಗಳಿವೆ ಎಂದು ಸರಕಾರಕ್ಕೆ ತಪ್ಪು ಮಾಹಿತಿ ನೀಡಿ, ಅನುದಾನ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕಾಲೇಜಿನ ವಸ್ತುಸ್ಥಿತಿ ಕುರಿತು ಸಮಗ್ರ ತನಿಖೆ ನಡೆಸಿ, ಸಂಸ್ಥೆಯ ಅನುದಾನ ತಡೆ ಹಿಡಿದು, ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ದಸಂಸ ತಾಲೂಕು ಅಧ್ಯಕ್ಷ ಹನುಮಂತ ಪೂಜಾರ, ಬಸವರಾಜ ಮುಳ್ಯಾಳವರ, ಶರಣು ಹಲಗಿ, ರವಿ ಕೋಣ್ಣನವರ, ನೀಲಪ್ಪ ಗುಡಿಮನಿ, ಯಮನೂರಪ್ಪ ಪೂಜಾರ, ಮಲ್ಲಪ್ಪ ಮಾದರ, ಮಲ್ಲಪ್ಪ ಪೂಜಾರ, ದುರಗಪ್ಪ ಮಾದರ, ಷಣ್ಮುಖ ಮಾದರ, ಚಂದ್ರು ಮಾದರ, ಚಂದಾಲಿಂಗಪ್ಪ ಮಾದರ, ಮಂಜುನಾಥ ಪೂಜಾರ, ದೇವರಾಜ ಪೂಜಾರ, ಶರಣಪ್ಪ ಕರಿಯಣ್ಣವರ, ಜಗದೀಶ ಮಲ್ಲಣ್ಣವರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next