Advertisement

ಕುಮಾರಸ್ವಾಮಿ ವಿರುದ್ಧ ಸುಳ್ಳು ಆರೋಪ: ರಾಜಶೇಖರ್‌

12:10 PM Feb 24, 2021 | Team Udayavani |

ರಾಮನಗರ: ತಾಲೂಕಿನ ಬಿಡದಿ ಬಳಿ ಕೇತಗಾನಹಳ್ಳಿಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ 48 ಎಕರೆ ಭೂಮಿಯನ್ನು ನ್ಯಾಯಯುತ ಬೆಲೆಯನ್ನೇ ಕೊಟ್ಟು ಖರೀದಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿದ್ದ ಅವರು, ಕೃಷಿ ನಂತರ ಅಲ್ಲಿ ಕೃಷಿ ಆರಂಭಿಸಿದ್ದಾರೆ ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷ ರಾಜಶೇಖರ್‌ ಹೇಳಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಜನ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಶೇಷಾದ್ರಿ ಮತ್ತು ಶಾಸಕ ಸಿ.ಎಂ.ಲಿಂಗಪ್ಪ ಅವರುಗಳು ಮಾಜಿ ಸಿಎಂ ಎಚ್‌.ಡಿ.ಕೆ.ವಿರುದ್ಧ ಮಾಡಿದ ಆರೋಪಗಳಿಗೆ ಅವರು ಪ್ರತಿಕ್ರಿಯಿಸಿದರು.

ಎಚ್‌ಡಿಕೆ ವಿಚಾರದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು. ಕುಮಾರಸ್ವಾಮಿ ಅವರನ್ನು ಟೀಕಿಸುವ ಮುನ್ನ 1994ರ ಮುಂಚೆ ರಾಮನಗರ ಹೇಗಿತ್ತು. ಈಗ ಹೇಗಿದೆಎನ್ನುವುದನ್ನು ವಿರೋಧಿಗಳು ಮನನ ಮಾಡಿಕೊಳ್ಳುವುದು ಒಳಿತು ಎಂದರು.

ರಾಮನಗರಕ್ಕೆ ಬಂದಾ ಕುಮಾರಸ್ವಾಮಿಯವರು ಹವಾಯಿ ಚಪ್ಪಲಿಯಲ್ಲಿ ಓಡಾಡುತ್ತಿದ್ದವರು. ಈಗ ರೇಂಜ್‌ ರೋವರ್‌ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಎರಡು ಬಾರಿ ಮುಖ್ಯಮಂತ್ರಿ ಆದವರಿಗೆ ಅಷ್ಟು ಶಕ್ತಿ ಇಲ್ಲವೇ? ರಾಜ್ಯದಲ್ಲಿ ಅತ್ಯಂತ ಸರಳ ಹಾಗೂ ಜನರ ಕೈಗೆ ಸಿಗುವ ನಾಯಕ ಎಂದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಹೇಳಿದರು.

ಐದು ಕೋಟಿ ರೂ. ಪಡೆದು ಅಪ್ಸರ್‌ ಆಗಾರನ್ನು ಎಂ.ಎಲ್‌.ಸಿ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿದ ರಾಜಶೇಖರ್‌, ಐದು ಕೋಟಿ ರೂ. ಪಡೆದುಕೊಂಡಿದ್ದಾರೆ ಎನ್ನುವುದು ಸುಳ್ಳು. ದೇವೇ ಗೌಡರು ಅಪ್ಸರ್‌ ಆಗಾ ಅವರ ತಂದೆಗೆ ಮಾತು ಕೊಟ್ಟಿದ್ದರು. ಅದರಂತೆ ಪರಿಷತ್‌ ಸದಸ್ಯರಾಗಿ ನೇಮಕ ಮಾಡಿದ್ದಾರೆಯೇ ಹೊರತು, ಹಣಕ್ಕಾಗಿ ಅಲ್ಲ. ಈ ಬಗ್ಗೆ ಶೀಘ್ರದಲ್ಲೇ ಆಗಾ ಕುಟುಂಬದವರು ಸ್ಪಷ್ಟನೆ ನೀಡಲಿದ್ದಾರೆ ಎಂದರು.

Advertisement

ಮಾರುಕಟ್ಟೆ ನಿರ್ಮಾಣಕ್ಕೆ ವಿರೋಧ ಏಕೆ: ಜೆಡಿ ಎಸ್‌ ಜಿಲ್ಲಾ ಪದವೀಧರ ಘಟಕದ ಅಧ್ಯಕ್ಷ ಜಿ.ಟಿ. ಕೃಷ್ಣ ಮಾತನಾಡಿ, 2018ರಲ್ಲಿ ಎಚ್‌ಡಿಕೆ ಮುಖ್ಯ ಮಂತ್ರಿ ಆಗಿದ್ದಾಗ ಹೈಟೆಕ್‌ ಗೂಡು ಮಾರುಕಟ್ಟೆಮಾಡುವುದಾಗಿ ಹೇಳಿದ್ದರು. ಆಗ ಇಲ್ಲದ ವಿರೋಧ ಈಗ ಏಕೆ. ಚನ್ನಪಟ್ಟಣದಲ್ಲಿ ಮಾರುಕಟ್ಟೆಗೆರೇಷ್ಮೆ ಬೆಳೆಗಾರರ ಬೆಂಬಲ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಚಿಕ್ಕವೀರೇಗೌಡ, ಗೂಳಿ ಕುಮಾರ, ಬೋರೇಗೌಡ, ರಾಮಕೃಷ್ಣಯ್ಯ, ಜಕೀವುಲ್ಲಾ ಜಯಕುಮಾರ್‌ ಮತ್ತಿತರರು ಇದ್ದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ರಾಜಶೇಖರ್‌ ಮಾತನಾಡಿದರು.

ಕಾಂಗ್ರೆಸ್‌ನಿಂದಲೇ ಭ್ರಷ್ಟಾಚಾರ  :  ಜೆಡಿಎಸ್‌ ರಾಜ್ಯ ವಕ್ತಾರ ಉಮೇಶ್‌ಮಾತ ನಾಡಿ, ನಗರಸಭೆಯಲ್ಲಿ ಕಳೆದಐದು ವರ್ಷ ಕಾಂಗ್ರೆಸ್‌ ಆಡಳಿತ ನಡೆಸಿದೆ. ಅವರು ಭ್ರಷ್ಟಾ ಚಾರ ಮಾಡಿದ ಕಾರಣಕ್ಕೆಇಂದು ಈ ಅವ್ಯವಸ್ಥೆ ತಲೆದೂರಿದೆ. ಎಚ್‌ ಡಿಕೆ ಕುಟುಂಬದವರು ತೊರೆಕಾಡನಹಳ್ಳಿಯಿಂದ ಇಲ್ಲಿಗೆನೀರಾವರಿ ಯೋಜನೆ ಮಾಡದಿದ್ದರೇ ಇಂದು, ರಾಮ ನಗರಕ್ಕೆ ಸರಿಯಾಗಿ ಕುಡಿಯುವ ನೀರು ಸಿಗುತ್ತಿರ ಲಿಲ್ಲ. ಮನೆ ಬೇಕು ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ 5,100 ರೂ. ವಂತಿಗೆ ಕೊಟ್ಟಿರುವುದು ಮಂಡಳಿ ಬಳಿಯೇ ಇದೆ. ಹಳೆಯ 240 ಮನೆ ಜೊತೆಗೆ ಕೊತ್ತೀಪುರದಲ್ಲಿ 880 ಮನೆಗಳ ನಿರ್ಮಾಣಕ್ಕೆ ಯೋಜಿಸಲಾಗಿದೆ ಎಂದರು.

ರಾಮನಗರ ವಿಚಾರದಲ್ಲಿ ಎಚ್‌ಡಿಕೆ ಮತ್ತವರ ಕುಟುಂಬಕ್ಕೆ ವಿಶೇಷ ಅಕ್ಕರೆ ಇದೆ. ಹೀಗಾಗಿಯೇ ಅಭಿವೃದ್ಧಿಗೆ ಅವರುಬದ್ಧರಾಗಿದ್ದಾರೆ. ಕಾಂಗ್ರೆಸ್‌ ಮುಖಂಡರು ಇನ್ನಾದರೂ ಎಚ್‌.ಡಿ.ಕುಮಾರಸ್ವಾಮಿ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವುದನ್ನು ಬಿಡಬೇಕು. –ರಾಜಶೇಖರ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next