Advertisement

ಕೇಂದ್ರದ ಮಾರ್ಗಸೂಚಿ ಅನುಸರಿಸಿ: ಎಸ್ಪಿ ಯತೀಶ್‌

04:07 PM Apr 21, 2020 | Suhan S |

ಗದಗ: ದೇಶಾದ್ಯಂತ ಕೋವಿಡ್ 19 ವೈರಸ್‌ ನಿಯಂತ್ರಿಸಲು ಕೇಂದ್ರ ಸರ್ಕಾರ ಲಾಕ್‌ಡೌನ್‌ನ್ನು ಎರಡನೇ ಬಾರಿಗೆ ವಿಸ್ತರಿಸಿದ್ದು, ಸಾರ್ವಜನಿಕರು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಮನವಿ ಮಾಡಿದ್ದಾರೆ.

Advertisement

ತುರ್ತು ಸಂದರ್ಭಗಳಲ್ಲಿ ಯಾವುದೇ ವ್ಯಕ್ತಿಗಳು ಸಂಚಾರ ಮಾಡಲು ಅವಕಾಶವಿದೆ. ಅಗತ್ಯವಿದ್ದಲ್ಲಿ ನಾಲ್ಕು ಚಕ್ರ ವಾಹನದಲ್ಲಿ ಲಾಕನೊಂದಿಗೆ ಒಬ್ಬರು ಪ್ರಯಾಣಿಸಬಹುದು. ದ್ವಿಚಕ್ರ ವಾಹನವಾದಲ್ಲಿ ಸವಾರನಿಗೆ ಮಾತ್ರ ಓಡಾಡಲು ಅವಕಾಶವಿದೆ. ಸಾರ್ವಜನಿಕ ಸ್ಥಳದಲ್ಲಿ ಅವಶ್ಯಕ ಕರ್ತವ್ಯಕ್ಕೆ ಯಾರಾದರೂ ಹೊರಗಡೆ ಬಂದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿ 5 ಅಥವಾ 5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಎಲ್ಲ ರೀತಿಯ ಸಾರ್ವಜನಿಕ ಸಂಚಾರ ವ್ಯವಸ್ಥೆ ರದ್ದು ಮಾಡಲಾಗಿರುತ್ತದೆ.

ಸರದಿಯಂತೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಒಂದು ಸರದಿಯವರ ಕರ್ತವ್ಯ ಮುಗಿದ ಮೇಲೆ ಕನಿಷ್ಠ ಒಂದು ಗಂಟೆಯ ಕಾಲ ಆ ಸ್ಥಳದಲ್ಲಿ ಮುಂದಿನ ಸರದಿಗೆ ಬರುವ ಕೆಲಸಗಾರರನ್ನು ಕಳುಹಿಸದೇ ಆ ಸ್ಥಳವನ್ನೆಲ್ಲ ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಬೇಕು. ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಕೆಲಸಗಾರರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಪದೇ ಪದೇ ಹ್ಯಾಂಡ್‌ವಾಶ್‌ ಮಾಡುವ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಕರ್ತವ್ಯದಲ್ಲಿ ತೊಡಗಿರುವ ಪೊಲೀಸ್‌, ವೈದ್ಯಕೀಯ, ಪೌರ ಕಾರ್ಮಿಕರಿಗೆ ಸಹಕರಿಸಲು ಮತ್ತು ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next