Advertisement

ದಿನಕ್ಕೆ 24ರ ಬದಲು 25 ಗಂಟೆ? : ಪ‌ರಿಭ್ರಮಣೆಯಲ್ಲಿ ವಸುಂಧರೆ ಮಂದಗತಿ

08:35 AM Jun 07, 2018 | Karthik A |

ವಾಷಿಂಗ್ಟನ್‌ : ಒಂದು ದಿನದಲ್ಲಿ ಎಷ್ಟು ಗಂಟೆ ಎಂದರೆ, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೂ ಇದಕ್ಕೆ 24 ಗಂಟೆ ಎಂದು ಉತ್ತರಿಸುತ್ತಾನೆ. ಆದರೆ, ಮುಂದೊಂದು ದಿನ, ಈ ಸಿದ್ಧ ಉತ್ತರ’ದ ಬದಲಾಗಿ, ದಿನಕ್ಕೆ 25 ಗಂಟೆ ಎಂದು ಹೇಳಬೇಕಾಗುತ್ತದೆ ಎಂದು ಅಮೆರಿಕದ ಭೂವಿಜ್ಞಾನಿಗಳ ತಂಡ ಹೇಳಿದೆ. ಇಂಥದ್ದೊಂದು ತರ್ಕ ಮುಂದಿಟ್ಟು ವಿಸ್ಕಾನ್ಸಿನ್‌ – ಮ್ಯಾಡಿಸನ್‌ ವಿಶ್ವವಿದ್ಯಾಲಯದ ಸ್ಟೀಫ‌ನ್‌ ಮೇಯರ್ಸ್‌ ನೇತೃತ್ವದ ಅಧ್ಯಯನ ತಂಡ ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ.

Advertisement

ಏನಿದು ತರ್ಕ?: ಸದ್ಯಕ್ಕೆ ಭೂಮಿಯ ಒಂದು ಪರಿಭ್ರಮಣೆ ಅವಧಿ 24 ಗಂಟೆಯಿದ್ದು ಇದನ್ನು ಒಂದು ದಿನವೆಂದು ಹೇಳಲಾಗುತ್ತದೆ. ಆದರೆ, ಈ ಪರಿಭ್ರಮಣೆಯ ಮೇಲೆ ಸೌರವ್ಯೂಹದ ಇತರ ಗ್ರಹ, ಉಪಗ್ರಹಗಳ ಅಯಸ್ಕಾಂತೀಯ ಶಕ್ತಿಗಳು ಬಿಲಿಯನ್‌ ಗಟ್ಟಲೆ ವರ್ಷಗಳಿಂದಲೂ ಪರಿಣಾಮ ಬೀರುತ್ತಿವೆ. ಇವುಗಳಲ್ಲಿ ಭೂಮಿಯ ಉಪಗ್ರಹವಾದ ಚಂದ್ರನಲ್ಲಿರುವ ಅತ್ಯಲ್ಪ ಗುರುತ್ವಾಕರ್ಷಣ ಶಕ್ತಿಯ ಪ್ರಭಾವವೇ ಹೆಚ್ಚು. ಚಂದ್ರನ ಈ ಶಕ್ತಿ, ಭೂಮಿಯ ಪರಿಭ್ರಮಣೆ ವೇಗವು ವಾರ್ಷಿಕವಾಗಿ ಕೆಲ ಸೆಕೆಂಡ್‌ ಗಳಷ್ಟು ಕ್ಷೀಣಿಸುವಂತೆ ಮಾಡುತ್ತದೆ. ಹಾಗಾಗಿ ಮುಂದೊಂದು ದಿನ ಭೂಮಿ ತನ್ನ ಪರಿಭ್ರಮಣೆ ಮುಗಿಸಲು 25 ಗಂಟೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

18 ಗಂಟೆಯಿಂದ 24 ಗಂಟೆ!: ಭೂಮಿ ಮೇಲೆ ಚಂದ್ರನ ಪರಿಣಾಮ ಬಿಲಿಯನ್‌ ಗಟ್ಟಲೆ ವರ್ಷಗಳಿಂದ ನಡೆದು ಬಂದಿದೆ. 1.4 ಬಿಲಿಯನ್‌ ವರ್ಷಗಳ ಹಿಂದೆ ಭೂಮಿಯ 1 ದಿನದ ಅವಧಿ 18 ಗಂಟೆ ಆಗಿತ್ತು. ಆದರೆ ಚಂದ್ರನ ನಿರಂತರ ಪ್ರಭಾವದಿಂದ ಈ ವೇಗ ವಾರ್ಷಿಕ ಲೆಕ್ಕಾಚಾರದಲ್ಲಿ ಕ್ಷೀಣಿಸಿ, ಈಗ 24 ಗಂಟೆಗೆ ಬಂದು ನಿಂತಿದೆ ಎಂದಿದ್ದಾರೆ ವಿಜ್ಞಾನಿಗಳು.

Advertisement

Udayavani is now on Telegram. Click here to join our channel and stay updated with the latest news.

Next