Advertisement

ಇಳಿಯುತ್ತಿದೆ ತೈಲ ಬೆಲೆ

11:14 AM Aug 26, 2019 | mahesh |

ಹೊಸದಿಲ್ಲಿ: ದೇಶದ ಆರ್ಥಿಕತೆ ಕುಸಿಯುತ್ತಿರುವ ಹೊತ್ತಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಮನಾರ್ಹ ಕುಸಿತ ಕಾಣಲು ಆರಂಭಿಸಿದ್ದು, ಪ್ರಧಾನಿ ಮೋದಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಶುಕ್ರವಾರ ಕಚ್ಚಾ ತೈಲ ಬೆಲೆ ಶೇ.3ರಷ್ಟು ಇಳಿಕೆ ಕಂಡಿದೆ. ಒಂದೆಡೆ ದೇಶದ ವಿತ್ತ ಪ್ರಗತಿಗೆ ಚೇತರಿಕೆ ನೀಡುವುದಕ್ಕಾಗಿ ಹಲವು ಕ್ರಮಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದು, ಇದೇ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರೆಲ್ಗೆ 53.58 ಡಾಲರ್‌ಗೆ ಕುಸಿದಿತ್ತು.

Advertisement

ಅಮೆರಿಕದೊಂದಿಗೆ ಮತ್ತೂಂದು ಸುತ್ತಿನ ವ್ಯಾಪಾರ ಸಮರವನ್ನು ಚೀನ ಆರಂಭಿಸಿದ್ದು, ಇದರ ಪರಿಣಾಮ ಕಚ್ಚಾ ತೈಲ ಮಾರುಕಟ್ಟೆಯ ಮೇಲೂ ಕಂಡು ಬಂದಿದೆ. ಭಾರತವು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿ ಕೊಳ್ಳುತ್ತಿರುವ ಬ್ರೆಂಟ್ ತೈಲ ಬೆಲೆ ಶುಕ್ರ ವಾರ ಶೇ.2 ಇಳಿಕೆ ಕಂಡು ಬ್ಯಾರೆಲ್ಗೆ58.75 ಡಾಲರ್‌ ಆಗಿದೆ.

ತೈಲ ಬೆಲೆ ಇಳಿಕೆಯಿಂದ ಆರ್ಥಿ ಕತೆ ಚೇತರಿಸಿಕೊಳ್ಳಲು ನೆರವಾಗ ಲಿದೆ. ಇದರಿಂದ ಚಾಲ್ತಿ ಖಾತೆ ಕೊರತೆ ಕಡಿಮೆಯಾಗಲಿದ್ದು, ಹಣ ದುಬ್ಬರವೂ ನಿಯಂತ್ರಣದಲ್ಲಿರಲಿದೆ. ಅಷ್ಟೇ ಅಲ್ಲ, ಸರಕಾರಕ್ಕೆ ಕಚ್ಚಾ ತೈಲದ ಮೇಲಿನ ಹೊರೆ ಹಾಗೂ ಸಬ್ಸಿಡಿ ಹೊರೆಯೂ ಕಡಿಮೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next