Advertisement

ತೋಟಕ್ಕೆ ಬಿದ್ದ ಹವಾಮಾನ ಮಾಹಿತಿ ಸಂಗ್ರಹ ಯಂತ್ರ

12:59 AM Nov 17, 2019 | mahesh |

ಬೆಳ್ಮಣ್‌: ಬಿಳಿ ಬಣ್ಣದ ಬೃಹತ್‌ ಗಾತ್ರದ ಬಲೂನ್‌ ಸಹಿತ ಉಪಕರಣವೊಂದು ಕಾರ್ಕಳ ತಾಲೂಕಿನ ಬೋಳದ ಕಿಶೋರ್‌ ಅವರ ತೋಟಕ್ಕೆ ಶುಕ್ರವಾರ ರಾತ್ರಿ ಬಿದ್ದಿದ್ದು ಗಾಬರಿ ಮೂಡಿಸಿತು. ಕಾರ್ಕಳ ಪೊಲೀಸರು ಹಾಗೂ ಬೋಳ ಗ್ರಾಮ ಕರಣಿಕ ಸುದರ್ಶನ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅದು ಹವಾಮಾನ ಮಾಹಿತಿ ಯಂತ್ರ ಎಂದು ತಿಳಿದ ಬಳಿಕ ಮನೆಯವರು ಹಾಗೂ ಪರಿಸರದವರು ನಿರಾಳರಾದರು.

Advertisement

ವಿದೇಶೀ ನಿರ್ಮಿತ
ಕೊರಿಯಾದಲ್ಲಿ ನಿರ್ಮಾಣಗೊಂಡಿರುವ ಈ ಉಪಕರಣದಲ್ಲಿ ಆರ್‌ಎಸ್‌ಡಬ್ಲೂ é ರೇಡಿಯೋ ಸೊಂಡೆ ಹಾಗೂ ರೇಡಿಯೋ ವಿಂಡ್‌ ಎಂದು ಬರೆದಿದ್ದು ಎಲ್ಲಿಂದ ಹಾರಿಬಿಡಲಾಗಿದೆ ಎಂದು ಮಾಹಿತಿ ಲಭಿಸಿಲ್ಲ. ಕಾರ್ಕಳ ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ ಬೋಳ ಗ್ರಾಮಕರಣಿಕ ಸುದರ್ಶನ್‌ ಈ ಉಪಕರಣವನ್ನು ಕೊಂಡೊಯ್ದು ಪಂಚಾಯತ್‌ನಲ್ಲಿರಿಸಿದ್ದಾರೆ.

ಬಂಟ್ವಾಳದಲ್ಲಿಯೂ ಬಿದ್ದಿತ್ತು
ಈ ಹಿಂದೆ ಬಂಟ್ವಾಳದ ಮಡಂತ್ಯಾರಿನ ಎಡೂರಿನಲ್ಲಿಯೂ ಇದೇ ರೀತಿಯ ಉಪಕರಣ ಆಕಾಶದಿಂದ ಬಿದ್ದು ಗಾಬರಿ ಹುಟ್ಟಿಸಿತ್ತು. ತನಿಖೆಯ ಬಳಿಕ ಅದು ಮಂಗಳೂರಿನ ಶಕ್ತಿನಗರದ ಹವಾಮಾನ ಇಲಾಖೆಯ ಕೇಂದ್ರದಿಂದ ಬಿಡಲಾಗುತ್ತಿರುವ ಉಪಕರಣವೆಂಬ ಮಾಹಿತಿ ಲಭ್ಯವಾಗಿತ್ತು. ಹಿಂದೆ ಪಣಂಬೂರಿನ ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಕೇಂದ್ರದಿಂದ 40 ವರ್ಷಗಳಿಂದ ಇಂತಹ ಉಪಕರಣಗಳನ್ನು ಹಾರಿ ಬಿಡಲಾಗುತ್ತಿದ್ದು, ಇದೀಗ ಮಂಗಳೂರಿನ ಶಕ್ತಿನಗರದ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next