Advertisement

ಜೋಳದ ಬೆಳೆಯಲ್ಲಿ ಫಾಲ್‌ ಸೈನಿಕ ಹುಳು ಬಾಧೆ

11:58 AM Dec 09, 2021 | Team Udayavani |

ಕಲಬುರಗಿ: ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಜೋಳದ ಬೆಳೆಗೆ ಫಾಲ್‌ ಸೈನಿಕ ಹುಳು ಬಾಧೆ ಕಂಡು ಬಂದಿರುವುದರಿಂದ ಕೃಷಿ ಇಲಾಖೆ ಕೆಲವು ಸಲಹೆ ನೀಡಿದೆ.

Advertisement

ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜೋಳ ಬೆಳೆದ ಕ್ಷೇತ್ರಕ್ಕೆ ಭೇಟಿ ನೀಡಿ, ಈ ಫಾಲ್‌ ಸೈನಿಕ ಹುಳವು ಪ್ರಮುಖವಾಗಿ ಜೋಳ ಮತ್ತು ಮೆಕ್ಕೆಜೋಳ ಬೆಳೆಯಲ್ಲಿ ಕಂಡು ಬಂದಿದ್ದು, ತಡವಾದ ಬಿತ್ತನೆ ಪ್ರದೇಶದಲ್ಲಿ ಇದರ ಹಾವಳಿ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಈ ಕೀಡೆಯು ಮೊಟ್ಟೆಗಳನ್ನು ಗುಂಪಾಗಿ ಇಡಲಿದ್ದು, ಸುಮಾರು 100ರಿಂದ 200 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಂದ ಹೊರಬಂದ ಕೀಡೆಯು ಸುರುಳಿಯಲ್ಲಿ ಅತಿ ಹೆಚ್ಚು ಹಾನಿ ಮಾಡುತ್ತದೆ. ಹಾನಿಗೊಳಗಾದ ಜೋಳದ ಬೆಳೆಯ ಮೇಲೆ ಪ್ರಾಸ್‌ ಕಂಡು ಬರುತ್ತದೆ. ಆದ್ದರಿಂದ ರೈತ ಬಾಂಧವರು ಫಾಲ್‌ ಸೈನಿಕ ಹುಳ ಬಾಧೆ ಲಕ್ಷಣ ಕಂಡು ಬಂದಲ್ಲಿ ಇಮಾಮೆಕ್ಟಿನ್‌ ಬೆಂಜೋಯೇಟ್‌ ಶೇ. 5 ಎಸ್‌ಜಿ 0.4 ಜಿಎಂ ಅಥವಾ ನೊವಾಲುರಾನ್‌ 0.75 ಎಂಎಲ್‌ ಅಥವಾ ಕ್ಲೋರಾಂಟ್ರಾನಿಲಿಪ್ರೋಲ್‌ 18.5 ಖಅ 0.3 ಟಟ ಕೀಟನಾಶಕವನ್ನು ಪ್ರತಿ ಲೀಟರ್‌ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಸಿಂಪಡಣಾ ದ್ರಾವಣವು ನೇರವಾಗಿ ಸುಳಿಗೆ ಬೀಳುವಂತೆ ಸಿಂಪಡಿಸಬೇಕೆಂದು ರೈತರಲ್ಲಿ ಮನವಿ ಮಾಡಿದ್ದಾರೆ.

ತಾಲೂಕಿನ ಅವರಾದ ಹೋಬಳಿಯ ಸಣ್ಣೂರ ಗ್ರಾಮದಲ್ಲಿ ಜೋಳದ ಬೆಳೆಯಲ್ಲಿ ಫಾಲ್‌ ಸೈನಿಕ ಹುಳು ಬಾಧೆಯನ್ನು ತಜ್ಞರು ವೀಕ್ಷಿಸಿದರು. ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಕೃಷಿ ಅಧಿಕಾರಿ ನೀಲಕಂಠ, ಸಹಾಯಕ ಕೃಷಿ ಅಧಿಕಾರಿ ರಾಜೇಂದ್ರ ಕಲ್ಲಪ್ಪ ಹಾಗೂ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next