Advertisement

ಮುಗಿಬಿದ್ದು ಶೇಂಗಾ ಖರೀದಿ

07:34 AM Jun 01, 2020 | Lakshmi GovindaRaj |

ಮುಳಬಾಗಿಲು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈಗಾಗಲೇ ಕೊರೊನಾ ಸೋಂಕು ಹರಡಿರುವುದರಿಂದ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಧಿಕಾರಿಗಳಿಗೂ ಮುಂಜಾಗ್ರತೆ ವಹಿಸಲು ಸೂಚಿಸಿದೆ. ಆದರೂ  ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ತಮಗೂ ಇದ್ದಕ್ಕೂ ಯಾವುದೇ ಸಂಬಂಧ ಇಲ್ಲವೆಂಬಂತೆ ನಿರ್ಲಕ್ಷ್ಯವಹಿಸಿದ್ದ ದೃಶ್ಯ ಭಾನುವಾರ ಕಂಡು ಬಂತು.

Advertisement

ಮಾಸ್ಕ್ ಇಲ್ಲದೇ ಬಂದ ರೈತರು, ಸಾಮಾಜಿಕ ಅಂತರವನ್ನೂ ಕಾಯ್ದು   ಕೊಳ್ಳದೇ ಬೈರಕೂರು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ವಿತರಿಸುತ್ತಿ ರುವ ಶೇಂಗಾವನ್ನು ಖರೀದಿ  ಸುತ್ತಿದ್ದರು. ಗುಂಪನ್ನು ಚದುರಿಸಿ ಅಂತರವ ನ್ನು ಕಾಯ್ದುಕೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳು ಎಷ್ಟು  ಪ್ರಯತ್ನಿಸಿದರೂ ಸಫ‌ಲವಾಗಲಿಲ್ಲ, ಆದರೂ ರೈತರು ಕಷ್ಟ ಪಟ್ಟು ಶೇಂಗಾ ತೆಗೆದುಕೊಂಡು ಹೋಗುತ್ತಲೇ ಇದ್ದರು.

ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸಲಾದ ರಿಯಾಯ್ತಿ ದರದ ಶೇಂಗಾದ ಬಹಳಷ್ಟು ಮೂಟೆಗಳಲ್ಲಿ ಕನಿಷ್ಠ ಎರಡು ಕೆ.ಜಿ.ಗಳಷ್ಟು ಕಲ್ಲುಗಳು ಇದ್ದವು. ಮೂವತ್ತು ಕೆ.ಜಿ. ಶೇಂಗಾ ಮೂಟೆಯಲ್ಲಿ ಎರಡು ಕೆ.ಜಿ. ಕಲ್ಲುಗಳೇ ಇರುವುದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ರೈತ ಸೀನಪ್ಪ ಆರೋಪಿಸಿದರು.

ಸಹಾಯಕ ಕೃಷಿ ಅಧಿಕಾರಿ ಲೋಕರಾಜ್‌ ಅವರನ್ನು ವಿಚಾರಿಸಿದರೆ, ಶೇಂಗಾ ಬಿತ್ತನೆ ಬೀಜಗಳು ಕರ್ನಾಟಕ ಆಯಿಲ್‌ ಕಾರ್ಪೊರೇಷನ್‌ನಿಂದ ಬಂದಿದ್ದು, ಅಲ್ಲಿಂದಲೇ ಮೂಟೆಗಳನ್ನು ಪ್ಯಾಕ್‌ ಮಾಡಲಾಗಿರುವುದರಿಂದ ನಾವು ಮೂಟೆಗಳನ್ನು ಬಿಚ್ಚಿ ನೋಡದ ಕಾರಣ ಮೂಟೆಗಳ ಒಳಗೆ ಕಲ್ಲುಗಳಿರುವುದು ನಮಗೆ ಗೊತ್ತಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next