Advertisement

ಮಾನವ ರಹಿತ ಡ್ರೋನ್‌ ಮಾದರಿ ವಿಮಾನ ಪತನ

08:51 AM Sep 19, 2019 | Team Udayavani |

ನಾಯಕನಹಟ್ಟಿ (ಚಿತ್ರದುರ್ಗ): ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸುತ್ತಿರುವ ಮಾನವ ರಹಿತ ಡ್ರೋನ್‌ ಮಾದರಿ ವಿಮಾನ ತಾಂತ್ರಿಕ ದೋಷದಿಂದ ನೆಲಕ್ಕಪ್ಪಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೋಡಿಚಿಕ್ಕೇನಹಳ್ಳಿಯಲ್ಲಿ ನಡೆದಿದೆ.

Advertisement

ಮಂಗಳವಾರ ಬೆಳಗ್ಗೆ 6.30ರ ಸುಮಾರಿಗೆ ಡಿಆರ್‌ಡಿಒ ರನ್‌ವೇಯಿಂದ ಪರೀûಾರ್ಥ ಹಾರಾಟ ನಡೆಸುತ್ತಿದ್ದ ವಿಮಾನವು 15 ನಿಮಿಷಗಳ ಅಂತರದಲ್ಲೇ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ನ ರಾಡಾರ್‌ನಿಂದ ಸಂಪರ್ಕ ಕಡಿದುಕೊಂಡು ನೆಲಕ್ಕೆ ಅಪ್ಪಳಿಸಿತು.

ತಪಸ್‌-4 ಎಡಿಇ 19 ಎಂದು ಬರೆಯ ಲಾಗಿರುವ ವಿಮಾನ ಚಳ್ಳಕೆರೆ ತಾಲೂಕಿನ ಕುದಾಪುರ ಡಿಆರ್‌ಡಿಒ ಕೇಂದ್ರದಿಂದ ಹೊರಟು ಹಾಸನದ ವಾಯುನೆಲೆಯವರೆಗೆ ಹೋಗಿ ಬರಬೇಕಿತ್ತು ಎನ್ನಲಾಗಿದ್ದು, ಡಿಆರ್‌ಡಿಒ ಕೇಂದ್ರದಿಂದ 17 ಕಿ.ಮೀ. ದೂರದಲ್ಲೇ ಪತನವಾಗಿದೆ.

ಗಿರಕಿ ಹೊಡೆದು ಬಿತ್ತು
ನಸುಕಿನ ಜಾವ ಭಾರೀ ಸದ್ದಿನೊಂದಿಗೆ ಹಾರಿ ಬಂದ ಡ್ರೋನ್‌ ಮಾದರಿಯ ರುಸ್ತುಂ 2 ವಿಮಾನವನ್ನು ಜೋಡಿಚಿಕ್ಕೇನಹಳ್ಳಿ ಗ್ರಾಮಸ್ಥರು ಕಂಡರು. ಆಗಸದಲ್ಲೇ ಗಿರಕಿ ಹೊಡೆ ಯುವು ದನ್ನು ನೋಡಿ ತತ್‌ಕ್ಷಣ ವೀಡಿಯೋ ಕೂಡ ಮಾಡಿದ್ದಾರೆ. ನೋಡ ನೋಡು  ತ್ತಿದ್ದಂತೆ ವಿಮಾನ ಭಾರೀ ಸದ್ದಿ ನೊಂದಿಗೆ ಬಿದ್ದಿದೆ. ಈ ವೇಳೆ ಆತಂಕಗೊಂಡ ನೂರಾರು ಗ್ರಾಮಸ್ಥರು ವಿಮಾನದ ಹತ್ತಿರ ಬಂದು ಅದರಲ್ಲಿ ಯಾರಾದರೂ ಇದ್ದಾರೆಯೇ ಎಂದು ಹುಡುಕಾಡಿದರು. ಬರೀ ವೈರ್‌ಗಳು, ಯಂತ್ರಗಳನ್ನಷ್ಟೇ ಕಂಡಾಗ ಸಮಾ ಧಾನಗೊಂಡರು.

ಸೆಲ್ಫಿ ತೆಗೆದ ಜನ
ಮೊದಲ ಬಾರಿ ಇಂಥದ್ದೊಂದು ವಿಮಾನವನ್ನು ಕಂಡ ಹಳ್ಳಿಯ ಜನರು ವಿಮಾನದ ಮೇಲೆ ಹತ್ತಿ ಓಡಾಡಿದರು. ಸೆಲ್ಫಿ ತೆಗೆದುಕೊಂಡು ವೀಡಿಯೋ ಮಾಡಿದರು. ಚಿತ್ರದುರ್ಗ ಎಸ್ಪಿ ಡಾ| ಕೆ. ಅರುಣ್‌ ಹಾಗೂ ಚಳ್ಳಕೆರೆ ಪೊಲೀಸರು ಘಟನ ಸ್ಥಳಕ್ಕೆ ದೌಡಾಯಿಸಿ ಅಲ್ಲಿದ್ದ ಜನರನ್ನು ಚದುರಿಸಿದರು.

Advertisement

ಲಾರಿಯಲ್ಲಿ ಅವಶೇಷ
ವಿಮಾನ ಪತನಗೊಂಡ ಜಾಗ ಹುಡುಕಿಕೊಂಡು ಸ್ಥಳಕ್ಕೆ ಬಂದ ಡಿಆರ್‌ಡಿಒ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ಮಿಲಿಟರಿಯವರು ಇಡೀ ಪ್ರದೇಶ ಸುತ್ತುವರಿದು ಅಲ್ಲಿದ್ದ ಜನರಿಗೆ ಪ್ರವೇಶ ನಿರ್ಬಂಧಿ ಸಿದರು. ಕೆಲವೇ ಹೊತ್ತಿನಲ್ಲಿ ಇಡೀ ವಿಮಾನವನ್ನು ಬಿಚ್ಚಿ ಅದರ ಅವಶೇಷಗಳನ್ನು ಎರಡು ಲಾರಿಗಳಲ್ಲಿ ಡಿಆರ್‌ಡಿಒ ಕೇಂದ್ರಕ್ಕೆ ಸಾಗಿಸಿದರು.

ಮಾಹಿತಿ ನೀಡಲಿಲ್ಲ
ಪತನವಾದ ವಿಮಾನ ಕುರಿತು ಡಿಆರ್‌ಡಿಒ ಅಧಿಕಾರಿಗಳನ್ನು ಪ್ರಶ್ನಿಸಿದಾಗ ವಿಷಮ ವಾತಾವರಣ ಕಾರಣಕ್ಕೆ ಸಂಪರ್ಕ ಕಳೆದುಕೊಂಡು ಪತನವಾಗಿದೆ ಎಂದಷ್ಟೇ ಹೇಳಿದ ಅವರು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next